ಬೆಂಗಳೂರು:ಭಾರತದಲ್ಲಿ ಹೊಸ ಕಂಪನಿ ಸ್ಥಾಪಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 18 ಲಕ್ಷ ರೂ. ಪಡೆದು ಫೇಸ್​ಬುಕ್ ಗೆಳೆಯ ಮೋಸ ಮಾಡಿದ್ದಾನೆ. ಇಂದಿರಾನಗರದ ಲಕ್ಷ್ಮೀಪುರದ 32 ವರ್ಷದ ವ್ಯಕ್ತಿ ವಂಚನೆಗೆ ಒಳಗಾದವ. ಫೇಸ್​ಬುಕ್ ಗೆಳೆಯ ಜೋಸೆಫ್ ಎಂಬಾತನ ವಿರುದ್ಧ ಎಫ್​ಐಆರ್ ದಾಖಲಿಸಿರುವುದಾಗಿ ಹಲಸೂರು ಪೊಲೀಸರು ತಿಳಿಸಿದ್ದಾರೆ.
2 ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯ ವಾಗಿದ್ದ ಆರೋಪಿ ಜೋಸೆಫ್, ತಾನು ಇಂಗ್ಲೆಂಡ್​ನಲ್ಲಿ ನೆಲೆಸಿದ್ದು, ಗಾಶ್​ಪೆಲ್ ಮಿನಿಸ್ಟ್ರೀ ಪ್ರಾಜೆಕ್ಟ್ ನಡೆಸುತ್ತಿದ್ದೇನೆ. ಭಾರತದಲ್ಲಿಯೂ ಶುರು ಮಾಡಬೇಕು. ಅದಕ್ಕಾಗಿ ನಿಮ್ಮ ಸಹಕಾರ ಬೇಕೆಂದು ಹೇಳಿದ್ದ. ಇದಾದ ಕೆಲವು ದಿನಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್​ಗೆ 17.96 ಲಕ್ಷ ರೂ. ಜಮೆ ಮಾಡಿದ್ದೇನೆ. ಈ ಹಣ ಡ್ರಾ ಮಾಡಿಕೊಳ್ಳಲು ಆರ್​ಬಿಐ ಕಡೆಯಿಂದ ಎಟಿಎಂ ಕಾರ್ಡ್ ಪಡೆಯಬೇಕು. ಅದಕ್ಕಾಗಿ ಮೊದಲು ನೀವು ಆರ್​ಬಿಐಗೆ ಹಣ ಪಾವತಿ ಮಾಡುವಂತೆ ಜೋಸೆಫ್ ಹೇಳಿದ್ದಾನೆ.
ಇದನ್ನೂ ಓದಿ:ಚೀನಾದ ಫೇಕ್​ಸ್ಕೈ ಅಟ್ಯಾಕ್​ನ ಟಾರ್ಗೆಟ್ ನೀವೂ ಆಗಿರಬಹುದು- ಹುಷಾರಾಗಿರಿ!
ಅದನ್ನು ನಂಬಿದ ದೂರುದಾರ, ವಂಚಕ ಕೊಟ್ಟ ಬ್ಯಾಂಕ್ ಖಾತೆಗೆ 17.96 ಲಕ್ಷ ರೂ. ಜಮೆ ಮಾಡಿದ್ದಾರೆ. ಇದಾದ ಮೇಲೆ ಜೋಸೆಫ್ ಸಂಪರ್ಕವನ್ನು ಕಡಿತ ಮಾಡಿಕೊಂಡಿದ್ದಾನೆ. ಆರೋಪಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವ್ಯಕ್ತಿ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆಗೆ ಹೆಚ್ಚು ಹಣ ಪಡೆಯುವಂತಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eleven =
Remember me
