ಹಾಸನ:ಗ್ರಾಹಕರಿಗೆ ಮಾರಾಟ ಮಾಡಲು ಟ್ರೇನಲ್ಲಿ ಇಟ್ಟಿದ್ದ ಮಾಂಸಾಹಾರವನ್ನು ಆ ಹೋಟೆಲ್​ ಮಾಲೀಕನ ಮಗನೇ ಎಂಜಲು ಮಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುತ್ತೆ. ದುರಂತ ಎಂದರೆ ಆತ ಎಂಜಲು ಮಾಡಿದ ಆಹಾರವನ್ನು ಗ್ರಾಹಕರಿಗೂ ಬಡಿಸಲಾಗಿದೆ.
ಇದನ್ನೂ ಓದಿರಿಕರೊನಾಗೆ ಒಣ ಗಾಳಿಯೇ ಅಸ್ತ್ರ, ಕೋವಿಡ್​ ಕಾಲವಾಗಬಹುದು ಚಳಿಗಾಲ ಎಚ್ಚರ…!
ಇಲ್ಲಿನ ಎಸ್​ಜೆಪಿ ರಸ್ತೆಯಲ್ಲಿರುವ ಮಾಂಸಾಹಾರಿ ಹೋಟೆಲ್​ ‘ಬಿರಿಯಾನಿ ಪ್ಯಾಲೇಸ್​’ನಲ್ಲಿ ಈ ಕೃತ್ಯ ನಡೆದಿದೆ. ಸೋಮವಾರ ಸಂಜೆ ಟ್ರೇನಲ್ಲಿದ್ದ ಆಹಾರ ಪದಾರ್ಥದಲ್ಲಿ ಮಾಂಸದ ತುಂಡುಗಳನ್ನು ಸ್ಟಿಕ್​ವೊಂದರಲ್ಲಿ ಹೋಟೆಲ್​ ಮಾಲೀಕನ ಮಗ ಮಹಮದ್ ಸೈಫ್​ ಪದೇಪದೆ ತಿನ್ನುತ್ತ ಎಂಜಲು ಮಾಡಿದ್ದಾನೆ. ಈತನ ಕೃತ್ಯವನ್ನು ಸಾರ್ವಜನಿಕರು ಮೊಬೈಲ್​ನಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕರೊನಾ ಸೋಂಕು ಹರಡುವ ಭೀತಿ ಎಲ್ಲೆಡೆ ದಟ್ಟವಾಗಿರುವ ಸಂದರ್ಭದಲ್ಲಿ ಈ ವಿಡಿಯೋ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿರಿರೂಪದರ್ಶಿ ಜೆಸ್ಸಿಕಾ ಲಾಲ್​ ಹಂತಕನಿಗೆ ಕೊನೆಗೂ ಸಿಕ್ಕಿತು ಬಿಡುಗಡೆ ಭಾಗ್ಯ
ಮಾಂಸಾಹಾರಕ್ಕೆ ಎಂಜಲು ಮಾಡಿದ ಹೋಟೆಲ್​ನವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿತ್ತು. ಮಂಗಳವಾರ ಬೆಳಗ್ಗೆ ಹೋಟೆಲ್‌ಗೆ ಭೇಟಿ ನೀಡಿದ ನಗರಸಭೆ ಆಯುಕ್ತ ಆರ್. ಕೃಷ್ಣಮೂರ್ತಿ ಹಾಗೂ ಇತರ ಅಧಿಕಾರಿಗಳು ಹೋಟೆಲ್​ ಅನ್ನು ಬಂದ್​ ಮಾಡಿ ಸೀಲ್​ಡೌನ್‌ಗೆ ಒಳಪಡಿಸಿದರು.
ಇದನ್ನೂ ಓದಿರಿಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!
ಸೋಮವಾರ ರಾತ್ರಿಯೇ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಸ್ವಚ್ಛತೆಗೆ ಆದ್ಯತೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ವೈದ್ಯ ಲೋಕವೇ ಹೇಳುತ್ತಿದೆ. ಆದರೆ, ಇದ್ಯಾವೂದಕ್ಕೂ ಕ್ಯಾರೆ ಎನ್ನದ ಈ ಹೋಟೆಲ್​ ಮಾಲೀಕನ ಮಗ ಗ್ರಾಹಕರ ಜೀವದ ಜೊತೆ ಆಟವಾಡಿದ್ದಾನೆ. ನಿನ್ನೆ(ಸೋಮವಾರ) ಮಾತ್ರವಲ್ಲ, ನಿತ್ಯವೂ ಈತ ಎಂಜಲು ಮಾಡುತ್ತಿದ್ದ ಎನ್ನಲಾಗಿದೆ.
ಈ ವಿಡಿಯೋ ನೋಡಿ
https://www.facebook.com/VVani4U/videos/601267660593904/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
