| ಯಂಕಣ್ಣ ಸಾಗರ್ಬೆಂಗಳೂರುಬಹುಮಾನದ ಆಸೆ, ಬ್ಯಾಂಕ್ ಅಧಿಕಾರಿ ಸೋಗು, ನವೀಕರಣ ಹೆಸರಿನಲ್ಲಿ ಕರೆ ಮಾಡಿ ಓಟಿಪಿ ಪಡೆದು ಅಥವಾ ಮೊಬೈಲ್​ಗೆ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಸೈಬರ್ ಖದೀಮರೀಗ, ಹಣ ಲೂಟಿಗೆ ಇನ್ನೊಂದು ತಂತ್ರಗಾರಿಕೆ ಕಂಡುಕೊಂಡಿದ್ದಾರೆ. ಅದೆಂದರೆ, ಏಲಿಯನ್ ಮಾಲ್ವೇರ್ ಮೂಲಕ ಆಂಡ್ರಾಯ್್ಡ ಮೊಬೈಲ್ ಹ್ಯಾಕ್ ಮಾಡಿ ಖಾತೆಗೆ ಕನ್ನ!
ಆಂಡ್ರಾಯ್ಡ್ ಮೊಬೈಲ್ ಬಳಕೆದಾರರ ಅಂದಾಜು 226 ಬ್ಯಾಂಕಿಂಗ್ ಆಪ್​ಗಳನ್ನು ಗುರಿಯಾಗಿಸಿಕೊಂಡಿರುವ ಸೈಬರ್ ವಂಚಕರು, ಏಲಿಯನ್ ಮಾಲ್ವೇರ್ ಇನ್​ಸ್ಟಾಲ್ ಮಾಡಿಸಿ ವಂಚಿಸುತ್ತಿದ್ದಾರೆ. ಏಲಿಯನ್ ಒಮ್ಮೆ ಮೊಬೈಲ್​ನಲ್ಲಿ ಇನ್​ಸ್ಟಾಲ್ ಆಗಿಬಿಟ್ಟರೆ ಮೊಬೈಲ್​ಗೆ ಬರುವ ಒಟಿಪಿ (ಒನ್ ಟೈಮ್ ಪಾಸ್​ವರ್ಡ್), ಸಂದೇಶಗಳು ಸೇರಿ ಇನ್ನಿತರ ಗೌಪ್ಯ ಮಾಹಿತಿ ಕ್ಷಣಾರ್ಧದಲ್ಲಿ ಸೈಬರ್ ವಂಚಕರ ಕೈ ಸೇರಲಿವೆ. ಈ ಬಗ್ಗೆ ಎಚ್ಚರ ವಹಿಸುವಂತೆ ಸಿಐಡಿ ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸೂಚಿಸಿದೆ.
ಇಂಟರ್​ನೆಟ್ ಬಳಕೆಯಲ್ಲಿ ಮಗ್ನರಾಗಿರುವ ಜನರ ಆಸಕ್ತಿ ಏನೆಂಬ ಮಾಹಿತಿಯನ್ನು ಸೈಬರ್ ಖದೀಮರು ಸಂಗ್ರಹಿಸುತ್ತಿದ್ದಾರೆ. ನಮ್ಮ ಆಸಕ್ತಿದಾಯಕ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಇಂಟರ್​ನೆಟ್ ಬ್ರೌಸರ್​ಗಳಲ್ಲಿ ಪ್ರಕಟಿಸುತ್ತಾರೆ. ಸಂದೇಶ, ಇ-ಮೇಲ್ ಮೂಲಕವೂ ವಿವಿಧ ಆಮಿಷಗಳನ್ನೊಡ್ಡಿ ಲಿಂಕ್ ರೂಪದಲ್ಲಿ ಏಲಿಯನ್ ಮಾಲ್ವೇರ್ ರವಾನಿಸುತ್ತಿದ್ದಾರೆ. ಅನಾಮಿಕ ಸಂದೇಶಗಳಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಲಿಂಕ್ ಒತ್ತಿದರೆ, ಏಲಿಯನ್ ಮಾಲ್ವೇರ್ ಇನ್​ಸ್ಟಾಲ್ ಆಗಲಿದೆ. ಇದು ಮೊಬೈಲ್ ಬಳಕೆದಾರರ ಅರಿವಿಗೂ ಬರುವುದಿಲ್ಲ.
ನೇರವಾಗಿ ಮೊಬೈಲ್ ನಿರ್ವಹಣೆ:ಕ್ಯೂಆರ್ ಕೋಡ್, ಆನ್​ಲೈನ್ ಲಿಂಕ್ ಹಾಗೂ ವಿವಿಧ ಹೆಸರಿನ ನಕಲಿ ಆಪ್​ಗಳನ್ನು ಡೌನ್​ಲೋಡ್ ಮಾಡಿಸಿ, ಅದರಲ್ಲಿ ಬ್ಯಾಂಕ್ ವಿವರ ನಮೂದಿಸಿಕೊಂಡು ಖಾತೆಗೆ ಕನ್ನ ಹಾಕುತ್ತಿದ್ದರು. ಆದರೀಗ, ಏಲಿಯನ್ ಮಾಲ್ವೇರ್ ಇನ್​ಸ್ಟಾಲ್ ಮಾಡಿಸಿ ನೇರವಾಗಿ ನಿರ್ವಹಣೆ ಮಾಡುತ್ತಾರೆ. ಪ್ರಮುಖವಾಗಿ ಆಂಡ್ರಾಯ್್ಡ ಮೊಬೈಲ್ ಬಳಕೆದಾರರ ಬ್ಯಾಂಕಿಂಗ್ ಆಪ್​ಗಳನ್ನೇ ಟಾರ್ಗೆಟ್ ಮಾಡುವುದರಿಂದ, ಬಳಕೆದಾರರಿಗೆ ಬರುವ ಒಟಿಪಿ ಸೇರಿ ಎಲ್ಲ ಸಂದೇಶಗಳು ಸೈಬರ್ ವಂಚಕರಿಗೂ ಹೋಗಲಿವೆ. ಹೀಗಾಗಿ, ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಎಗರಿಸುತ್ತಾರೆ. ಸುಮಾರು 226 ಆಪ್​ಗಳಿಂದ ಮಾಹಿತಿ ಕದಿಯಬಲ್ಲರು ಎಂಬುದಾಗಿ ಅಂತಾರಾಷ್ಟ್ರೀಯ ಸೈಬರ್ ತಜ್ಞರು ವಿಶ್ಲೇಷಿಸಿದ್ದಾರೆ.
ಮಾಲ್ವೇರ್​ನಿಂದ ಏನಾಗುತ್ತೆ?
ಸೈಬರ್ ಪೊಲೀಸರ ಸಲಹೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 13 =
Remember me
