ಬೆಂಗಳೂರು:ಸಾಮಾಜಿಕ ಜಾಲತಾಣಗಳ ಸ್ನೇಹಿತರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳುತ್ತಿರುವ, ಬ್ಲಾ್ಯಕ್​ವೆುೕಲ್​ಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮತ್ತೊಂದೆಡೆ ಹಲವು ರೀತಿಯಲ್ಲಿ ಸೈಬರ್ ಖದೀಮರು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನ ವಂಚನೆಗೆ ಒಳಗಾಗುತ್ತಿರುವುದು ನಿಲ್ಲುತ್ತಿಲ್ಲ.
ಯುವತಿಗೆ ಬ್ಲಾ್ಯಕ್​ವೆುೕಲ್:ಇನ್​ಸ್ಟಾಗ್ರಾಮ್ಲ್ಲಿ ಖಾಸಗಿ ಫೋಟೋ ಅಪ್​ಲೋಡ್ ಮಾಡುವುದಾಗಿ ಬೆದರಿಸಿ 10 ಸಾವಿರ ರೂ. ನೀಡುವಂತೆ ಯುವತಿಗೆ ಸೈಬರ್ ಖದೀಮ ಬ್ಲಾ್ಯಕ್​ವೆುೕಲ್ ಮಾಡಿದ್ದಾನೆ. ಈ ಸಂಬಂಧ ಶೇಷಾದ್ರಿಪುರದ 26 ವರ್ಷದ ಯುವತಿ ಕೇಂದ್ರ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದಾರೆ. ಆ.1ರಂದು ಹೀಮಾ ವರ್ಷಿನಿ ದೇಸಾಯಿ ಎಂಬಾತ ಇನ್​ಸ್ಟಾಗ್ರಾಮ್ಲ್ಲಿ ಸಂದೇಶ ಕಳುಹಿಸಿ ಬ್ಯಾಂಕ್ ಖಾತೆಗೆ 10 ಸಾವಿರ ರೂ. ಜಮೆ ಮಾಡದಿದ್ದರೆ ಖಾಸಗಿ ಫೋಟೋ ಇನ್​ಸ್ಟಾಗ್ರಾಮ್ಲ್ಲಿ ಅಪ್​ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
ದುಬಾರಿ ಗಿಫ್ಟ್ ಆಮಿಷ:ಪ್ರತಿಷ್ಠಿತ ಮೇಕಪ್ ಕಂಪನಿ ನೌಕರನ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿ ಬಹುಮಾನದ ಆಸೆ ತೋರಿಸಿ 77 ಸಾವಿರ ರೂ. ವಂಚಿಸಲಾಗಿದೆ. ಹೊಸಪಾಳ್ಯದ ಯುವತಿ ವಿನುಶ್ರೀ ವಂಚನೆಗೊಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ರಾಕೇಶ್ ನಾಯ್ಕ ಎಂಬಾತನ ವಿರುದ್ಧ ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜು.21ರಂದು ವಿನುಶ್ರೀಗೆ ಕರೆ ಮಾಡಿದ ರಾಕೇಶ್ ಎಂಬಾತ, ತಾನು ಪ್ರತಿಷ್ಠಿತ ಮೇಕಪ್ ಕಂಪನಿ ನೌಕರನೆಂದು ಪರಿಚಯಿಸಿಕೊಂಡಿದ್ದ. ಗ್ರಾಹಕರಿಗೆ ಪ್ರತಿವರ್ಷ ಕಂಪನಿ ಬಹುಮಾನ ನೀಡುತ್ತದೆ. ಈ ವರ್ಷ ನೀವು ವಿಜೇತರಾಗಿದ್ದೀರಿ ಎಂದು ಹೇಳಿದ್ದ. ಬಹುಮಾನವನ್ನು ಮನೆಗೆ ಪಾರ್ಸೆಲ್ ಕಳುಹಿಸುವುದಾಗಿ ಹೇಳಿ ವಿಳಾಸ ಪಡೆದುಕೊಂಡಿದ್ದ. ಆ.1ರಂದು ಯುವತಿ ಮನೆಗೆ ಕೊರಿಯರ್ ಬಂದಿತ್ತು. ಕೊರಿಯರ್​ನಲ್ಲಿದ್ದ ಪತ್ರದಲ್ಲಿ ವಿಳಾಸ ಪರಿಶೀಲನೆ ಪತ್ರವಾಗಿದೆ ಎಂದು ಬರೆದಿತ್ತು. ಬಳಿಕ ಮತ್ತೆ ಕರೆ ಮಾಡಿದ್ದ ರಾಕೇಶ್, ಬಹುಮಾನ ಪಡೆದುಕೊಳ್ಳಲು ಶುಲ್ಕ ಪಾವತಿಸಬೇಕು ಎಂದಿದ್ದ. ಆತನ ಮಾತನ್ನು ನಂಬಿದ ಮಹಿಳೆ 77 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಹಾಕಿದ್ದರು. ಹಣ ಜಮಾ ಮಾಡಿದ ಬಳಿಕ ಸಂಪರ್ಕಕ್ಕೆ ಸಿಗದಿದ್ದಾಗ ವಂಚನೆಗೆ ಒಳಗಾಗಿರುವುದು ಯುವತಿಗೆ ಗೊತ್ತಾಗಿದೆ.
ಉಡುಗೊರೆ ಹೆಸರಲ್ಲಿ 5 ಲಕ್ಷ ರೂ. ಸುಲಿಗೆ
ಫೇಸ್​ಬುಕ್​ನಲ್ಲಿ ಪರಿಚಯವಾದ ವಿಲಿಯಮ್ಸ್ ಲಾಸನ್ ಎಂಬಾತ ಬನಶಂಕರಿ ಮಹಿಳೆಗೆ ಹುಟ್ಟುಹಬ್ಬದ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ವಿಳಾಸ ಪಡೆದಿದ್ದ. ಕೆಲ ದಿನಗಳ ಬಳಿಕ ಕರೆ ಮಾಡಿದ್ದ ವ್ಯಕ್ತಿ, ದೆಹಲಿ ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ಅಧಿಕಾರಿ ಎಂದು ಹೇಳಿದ್ದ. ನಿಮ್ಮ ಹೆಸರಿಗೆ ವಿದೇಶದಿಂದ ಉಡುಗೊರೆ ಬಂದಿದೆ. ದುಬಾರಿ ಬೆಲೆಯ ವಸ್ತುಗಳಾಗಿರುವುದರಿಂದ ತೆರಿಗೆ ಪಾವತಿಸಿ ಬಿಡಿಸಿಕೊಳ್ಳುವಂತೆ ಸೂಚಿಸಿದ್ದ. ಆತನ ಮಾತನ್ನು ನಂಬಿದ ಮಹಿಳೆ, ಆನ್​ಲೈನ್​ನಲ್ಲಿ ಹಂತಹಂತವಾಗಿ 4.9 ಲಕ್ಷ ರೂ. ಸಂದಾಯ ಮಾಡಿದ್ದರು. ಹಣ ಪಡೆದ ಬಳಿಕ ಸಂಪರ್ಕಕ್ಕೆ ವಿಲಿಯಮ್್ಸ ಸಿಕ್ಕಿಲ್ಲ. ವಂಚನೆಗೆ ಒಳಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಡಿಪಿಗೆ ಫೋಟೋ ಬಳಸಿ ವಂಚನೆ
ಕೋಡಿಚಿಕ್ಕನಹಳ್ಳಿಯ ಜಯೇಶ್ ಎಂಬಾತನಿಗೆ ಅಮೆರಿಕದಲ್ಲಿರುವ ಸ್ನೇಹಿತನ ಸಂಬಂಧಿ ಎಂದು ನಂಬಿಸಿ 1 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ. ವಾಟ್ಸ್​ಆಪ್​ನಲ್ಲಿ ಜಯೇಶ್​ಗೆ ಸಂದೇಶ ಕಳುಹಿಸಿದ ಖದೀಮ, ‘ಹೈದರಾಬಾದ್​ನ ಪರಿಚಯಸ್ಥ ವ್ಯಕ್ತಿಗೆ 2 ಲಕ್ಷ ರೂ. ಕೊಡಬೇಕು. ಅವರಿಗೆ ನೀನು ವರ್ಗಾವಣೆ ಮಾಡಿದರೆ, ನಂತರ ನಿನಗೆ ಕೊಡುತ್ತೇನೆ’ ಎಂದಿದ್ದ. ಬ್ಯಾಂಕ್ ಖಾತೆ ವಿವರ ವಾಟ್ಸ್​ಆಪ್ ಡಿಪಿ ಫೋಟೋ ಗಮನಿಸಿದ ಜಯೇಶ್, ಸ್ನೇಹಿತನ ಸಂಬಂಧಿಕ ಎಂದು ನಂಬಿ 1 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಬಳಿಕ ಸ್ನೇಹಿತನಿಗೆ ಕರೆ ಮಾಡಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಪಿಎಫ್ ರೀಫಂಡ್ ನೆಪದಲ್ಲಿ 28 ಸಾವಿರ ರೂ. ಮೋಸ
ಕಾರ್ವಿುಕ ಭವಿಷ್ಯ ನಿಧಿ ಹಣ ಪಡೆಯಲು ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಕರೆ ಮಾಡಿದ್ದ ಅಪರಿಚಿತ, ಪಿಎಫ್ ಹಣ ಜಮೆ ಮಾಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾನೆ. ಪಿಳ್ಳಗಾನಹಳ್ಳಿಯ ಚಿಕ್ಕಮಾದು ಎಂಬುವರು ಮೋಸಕ್ಕೆ ಒಳಗಾದವರು. ಚಿಕ್ಕಮಾದು ಪತ್ನಿ ಗಾರ್ವೆಂಟ್​ನಲ್ಲಿ ಕೆಲಸ ಮಾಡುತ್ತಿದ್ದು, ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಪಿಎಫ್ ಕಚೇರಿಗೆ ಹೋದಾಗ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ನಂಬರ್ ಕೊಟ್ಟು ಕರೆ ಮಾಡುವಂತೆ ಸೂಚಿಸಿದ್ದ. ಕರೆ ಮಾಡಿದಾಗ ಸ್ವೀಕರಿಸಿಲ್ಲ. ಮತ್ತೊಂದು ಅಪರಿಚಿತ ನಂಬರ್​ನಿಂದ ಕರೆ ಮಾಡಿದ್ದ ವ್ಯಕ್ತಿ, ಪಿಎಫ್ ಕಚೇರಿಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದ. ಪಿಎಫ್ ಹಣ ರೀಫಂಡ್ ಮಾಡುತ್ತೇವೆ. ನಿಮ್ಮ ಕಾರ್ಡ್ ಹಾಗೂ ನಾಮನಿರ್ದೇಶನಕ್ಕೆ ಮತ್ತೊಬ್ಬರ ಬ್ಯಾಂಕ್ ಖಾತೆ ವಿವರ ನೀಡುವಂತೆ ಕೇಳಿದ್ದ. ಚಿಕ್ಕಮಾದು, ತನ್ನ ಮತ್ತು ಸಹೋದರನ ಬ್ಯಾಂಕ್ ಖಾತೆ ವಿವರ ನೀಡಿದ್ದರು. ಇದಾದ ಬಳಿಕ ಹಂತಹಂತವಾಗಿ ಖಾತೆಯಿಂದ 28,498 ರೂ. ಕಡಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
