ಬೆಂಗಳೂರು:ಮಕ್ಕಳ ಆಹಾರ ವಿತರಣೆ ಯೋಜನೆಯಲ್ಲಿ ವಾರ್ಷಿಕ 900ರಿಂದ 1,000 ಕೋಟಿ ರೂ. ಸೋರಿಕೆಯಾಗುತ್ತಿದೆ ಎಂದು ವಿಧಾನಸಭೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ವರದಿಯಲ್ಲಿ ಕಳವಳ ವ್ಯಕ್ತಪಡಿಸಿ, ಅವ್ಯವಹಾರ ತಡೆಗೆ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದೆ.
ಮಕ್ಕಳ ಆಹಾರ ವಿತರಣೆ ಕುರಿತಾದ 30 ಜಿಲ್ಲೆಗಳ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಈ ಸೋರಿಕೆ ಕಂಡುಬಂದಿದೆ. ಇಲಾಖೆಯಲ್ಲಿ ಮಧ್ಯವರ್ತಿಗಳೂ ಅವ್ಯವಹಾರ ಮಾಡಿರುವುದನ್ನು ಸಮಿತಿ ಗಮನಿಸಿದ್ದು, ಯಾರೇ ತಪ್ಪಿತಸ್ಥರಿರಲೀ ಅವರಿಗೆ ಶಿಕ್ಷೆಯಾಗಬೇಕು. ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಹಾಗೂ ತರಬೇತಿ ಕೇಂದ್ರದವರು ತಮ್ಮಿಂದಾಗಿರುವ ತಪು್ಪ ಒಪ್ಪಿಕೊಂಡಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಮಹಿಳೆಯರ ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ರಾಜ್ಯ ಮಹಿಳಾ ಆಯೋಗ, ಕಂದಾಯ ಹಾಗೂ ಆರೋಗ್ಯ ಮತ್ತು ಕಲ್ಯಾಣ ಇಲಾಖೆಗಳಲ್ಲಿ ಹಮ್ಮಿಕೊಂಡಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ವಿಧಾನಸಭೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಪರಿಶೀಲಿಸಿದ ವರದಿಯು ವಿಧಾನಪರಿಷತ್ತಿನಲ್ಲಿ ಸೋಮವಾರ ಮಂಡನೆಯಾಯಿತು.
ಮಹಿಳೆಯರು, ಮಕ್ಕಳು, ಹಿರಿಯರು, ಅಂಗವಿಕಲರು, ವಿಮುಕ್ತ ದೇವದಾಸಿಯರಿಗೆ ಅನುಕೂಲತೆ ಕಲ್ಪಿಸುವ ಕಾರ್ಯಕ್ರಮಗಳ ಅನುಷ್ಠಾನ, ಯೋಜನೆಗಳ ಫಲ ಅರ್ಹರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮ, ದಕ್ಷತೆ ಹಾಗೂ ಸಮನ್ವಯತೆ ಸಾಧಿಸುವ ಕುರಿತು ಇಲಾಖೆ ಅಧಿಕಾರಿಗಳಿಗೆ ಸಮಿತಿ ಹಲವಾರು ಸಲಹೆ, ಸೂಚನೆಗಳನ್ನು ನೀಡಿದೆ.
ಕಾರ್ಯಕ್ರಮ ಬಲವರ್ಧನೆ ಶಿಫಾರಸು
1 ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ ನಿರ್ವಹಣೆಗೆ ವಿಶೇಷ ಅನುದಾನ ಬಿಡುಗಡೆ. ಅಡುಗೆ ಮನೆ, ಶೌಚಗೃಹ ಒಂದೇ ಕಡೆ ವಿನ್ಯಾಸ.
2 ವಿವಿಧ ಇಲಾಖೆಗಳಲ್ಲಿ ಖರ್ಚಾಗದೆ ಉಳಿದ ಅನುದಾನ ಅಂಗವಿಕಲರ ಕಲ್ಯಾಣ ಇಲಾಖೆಗೆ ನೀಡಬೇಕು. ಈ ಬಗ್ಗೆ ಶಾಸಕರಿಂದ ಮನವಿ ಸಲ್ಲಿಕೆ.
3 ಶಿಕ್ಷಣಕ್ಕಾಗಿ ಮಾತ್ರ ಎಂಬ ಷರತ್ತು ವಿಧಿಸಿ ಅಂಗವಿಕಲ ಪಾಲಕರಿಗೆ ತ್ರಿಚಕ್ರ ವಾಹನ ನೀಡಿಕೆ.
4 ಹೊಸ ಬಾಲಭವನಗಳ ನಿರ್ಮಾಣ ಬದಲಿಗೆ ಹಾಲಿ ಬಾಲಭವನಗಳನ್ನು ಅಭಿವೃದ್ಧಿ.
5 ರಾಜ್ಯಮಹಿಳಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ಶೀಘ್ರ ನೇಮಕ.
6 ದೇವದಾಸಿಯರಿಗೆ ಎಚ್​ಐವಿ ಪರೀಕ್ಷೆ ಮಾಡಿಸುತ್ತೇವೆಂದು ಸುಳ್ಳು ಹೇಳಿ -ಠಿ;5,000 ವಸೂಲಿ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದರೂ ಕ್ರಮಕೈಗೊಂಡಿಲ್ಲ. ಹೆಚ್ಚಿನ ಗಮನ ಅಗತ್ಯ.
7 ವಸತಿರಹಿತ ಮಾಜಿ ದೇವದಾಸಿಯರಿಗೆ ನೀಡುತ್ತಿರುವ ಅನುದಾನದ ಮೊತ್ತ 2ರಿಂದ 5 ಲಕ್ಷ ರೂ.ಗೆ ಹೆಚ್ಚಳ ಕೋರಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ.
8 ದಮನಿರತ ಮಹಿಳೆಯರ ಗೌರವಯುತ ಜೀವನಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಕೌಶಲ ತರಬೇತಿ ಘಟಕ ಸ್ಥಾಪನೆ..
9 ಬುದ್ಧಿಮಾಂದ್ಯ ಮಕ್ಕಳ/ ವ್ಯಕ್ತಿಗಳ ಪಾಲಕರು ಮರಣ ಹೊಂದಿದಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಪಾವತಿಸುತ್ತಿರುವ ವಾರ್ಷಿಕ ಪರಿಹಾರ ಧನ 20,000 ರಿಂದ 30,000 ರೂ.ಗೆ ಹೆಚ್ಚಳ.
10 ಅಗತ್ಯವುಳ್ಳವರಿಗೆ ಮಾತ್ರ ವೃದ್ಧಾಶ್ರಮದಲ್ಲಿ ವಾಸಿಸುವ ಸೌಲಭ್ಯ. ಶೇ.100 ಅಂಗವಿಕಲತೆ ಉಳ್ಳವರು, ಹಿರಿಯ ನಾಗರಿಕರಿಗೆ ವಿಮಾ ಪಾಲಿಸಿ.
11 ಶೇ.75ಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ ಬಡವರಿಗೆ ಮಾಸಿಕ ನಿರ್ವಹಣಾ ಭತ್ಯೆ 1,400ರಿಂದ 3,000 ರೂ.ಗೆ ಏರಿಕೆ.
12 ಎಲ್ಲ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಮಾನಸಿಕ ಅಸ್ವಸ್ಥ, ಸೆರಬ್ರಲ್​ಪಾಲ್ಸಿ ಆಟಿಸಂ, ತೀವ್ರ ತೆರನಾದ ಬುದ್ಧಿಮಾಂದ್ಯರ ಪಾಲನೆಗೆ ಹಗಲು ಯೋಗಕ್ಷೇಮ ಕೇಂದ್ರ ಸ್ಥಾಪನೆ.
13 ಆರ್ಥಿಕವಾಗಿ ಹಿಂದುಳಿದ ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸ್ಕಾ್ಯನಿಂಗ್ ಮಾಡಿಸಲು ಅವಕಾಶ. ಈ ವೆಚ್ಚ ಸರ್ಕಾರದಿಂದಲೇ ಭರ್ತಿ.
14 ಗರ್ಭಿಣಿಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಕ್ಕರೆ ಕಾಯಿಲೆ ಹೆಚ್ಚಳದ ನಿಯಂತ್ರಣ.
15 ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಔಷಧ ನೀಡಿಕೆ ಕಡ್ಡಾಯ. ಸೂಕ್ತ ಆಂಬುಲೆನ್ಸ್ ವ್ಯವಸ್ಥೆ.
16 ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಗೆ ಸೂಕ್ತ ವಸತಿ ಗೃಹ, ಸೌಲಭ್ಯ ನೀಡಿಕೆ.
17 ಎಲ್ಲ ಜಿಲ್ಲೆಗಳಲ್ಲಿ ಕಿವುಡು ಹಾಗೂ ದೃಷ್ಟಿದೋಷ ವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆ ಸ್ಥಾಪನೆ.
18 ರಾಜ್ಯದ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ವಿದ್ಯಾರ್ಥಿಗಳ ವೇತನ 5,000 ರೂ.ದಿಂದ 10,000 ರೂ.ಗೆ ಹೆಚ್ಚಳ.
19 ಅಂಗನವಾಡಿ ಮಕ್ಕಳಿಗೆ ನೀಡುವ ಸಮವಸ್ತ್ರ ಮತ್ತು ಸ್ವೆಟರ್​ಗಾಗಿ ಮತ್ತೊಮ್ಮೆ ಪ್ರಸ್ತಾವನೆ.
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿದ್ದಾರೆ ಕೆಲಸವೇ ಇಲ್ಲದೆ ಸಂಬಳ ಬಾಚುವ ಪ್ರಾಧ್ಯಾಪಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eighteen =
Remember me
