ಬೆಂಗಳೂರು:ಗ್ರಾಮೀಣ ಪ್ರದೇಶದ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನ ಹಾಗೂ ನಿರ್ವಹಣೆಯಲ್ಲಿ ಅಕ್ರಮಗಳಾಗಿರುವುದು ನಿಜವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಬಹಿರಂಗಪಡಿಸಿದರು.
ಮೇಲ್ಮನೆಯ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿಯ ರಘುನಾಥ್ ರಾವ್ ಮಲ್ಕಾಪುರೆ ಕೇಳಿದ ಪ್ರಶ್ನೆ ಮೇಲೆ ನಡೆದ ಗಂಭೀರ ಚರ್ಚೆಗೆ ಸಚಿವರು ಪ್ರತಿಕ್ರಿಯಿಸಿ, ಅನುಷ್ಠಾನ ಗೊಳಿಸಿರುವ ಎಲ್ಲ ನೀರು ಶುದ್ಧೀಕರಣ ಘಟಕಗಳ ವಸ್ತುಸ್ಥಿತಿ ಸಮೀಕ್ಷೆ ನಡೆಸಿ ಏಪ್ರಿಲ್ ಅಂತ್ಯದೊಳಗೆ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಮೆ.ಇಪ್ಸೋಸ್ ಸಂಶೋಧನಾ ಖಾಸಗಿ ಸಂಸ್ಥೆಗೆ ಒಪ್ಪಿಸಿದ್ದು, ವರದಿ ಬಂದ ನಂತರ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಸದನ ಸಮಿತಿಗೂ ಸಿದ್ಧ:ಸಮೀಕ್ಷಾ ವರದಿ ತೃಪ್ತಿಕರವೆನಿಸದಿದ್ದರೆ ಸದನ ಸಮಿತಿ ರಚನೆಗೂ ಸಿದ್ಧವಾಗಿದ್ದು, ಯಾವುದೇ ಕಾರಣಕ್ಕೂ ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗುವುದಕ್ಕೆ ಬಿಡುವುದಿಲ್ಲ ಎಂದು ಗುಡುಗಿದರು. ಈ ಹಿಂದೆ ಇದೇ ಮನೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಸದನ ಸಮಿತಿ ತನಿಖೆಗೆ ಒತ್ತಾಯಿಸಿದ್ದನ್ನು ಈಶ್ವರಪ್ಪಗೆ ನೆನಪಿಸಿದ ಹಲವು ಸದಸ್ಯರು, ಸದನ ಸಮಿತಿ ತನಿಖೆಯೇ ಸೂಕ್ತವೆಂಬ ಒತ್ತಾಯಕ್ಕೆ ಸಚಿವರು ಸ್ಪಂದಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬದ್ಧವೆಂದು ಸ್ಪಷ್ಪಪಡಿಸಿದರು.
ಧರ್ಮಸ್ಥಳ ಸಂಸ್ಥೆಗೆ ಹಸ್ತಾಂತರ?
ಗ್ರಾಮೀಣ ಪ್ರದೇಶದ ಕುಡಿಯವ ನೀರು ಶುದ್ಧೀಕರಣ ಘಟಕಗಳ ಅನುಷ್ಠಾನ ಮತ್ತು ನಿರ್ವಹಣೆಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಹಸ್ತಾಂತರಿಸಲು ಸರ್ಕಾರ ಸಿದ್ಧವಿದ್ದು, ಅಗತ್ಯಬಿದ್ದರೆ ಈ ಕುರಿತು ಧರ್ಮಸ್ಥಳ ಧರ್ಮಾಧಿಕಾರಿ ಜತೆ ಮಾತುಕತೆ ನಡೆಸಲು ಬದ್ಧವೆಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು.
ನೆಲಮಂಗಲ ತಾಲೂಕಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದನ್ನು ಪ್ರಸ್ತಾಪಿಸಿದ ಅಪ್ಪಾಜಿಗೌಡ, ಶಾಸಕರ ಅನುದಾನ ಬಳಸಿಕೊಂಡು ಈ ಸಂಸ್ಥೆಗೆ ಕೊಟ್ಟು 15 ವರ್ಷಗಳ ತನಕ ನಿರ್ವಹಣೆ ಗುತ್ತಿಗೆ ಮಾಡಿಕೊಳ್ಳುವುದು ಎಂದರು. ಈ ಮಾತಿಗೆ ಸಹಮತಿಸಿದ ಸಚಿವರು, ಎಲ್ಲ ಶಾಸಕರು ಒಪ್ಪಿದರೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 17 =
Remember me
