ಮಂಡ್ಯ:ಅಂಚೆ ಕಚೇರಿಯಲ್ಲಿಟ್ಟರೂ ನಿಮ್ಮ ಹಣ ಸೇಫಲ್ಲ! ಹೌದು, ಮೃತ ಮಹಿಳೆಯೊಬ್ಬರ ಖಾತೆಗೆ ಖತರ್ನಾಕ್ ಅಧಿಕಾರಿಗಳಿಂದಲೇ ಜಿಲ್ಲೆಯಲ್ಲಿ ಕನ್ನ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಗ್ರಾಹಕರಲ್ಲಿ ಅಭದ್ರತೆಯ ಭಯ ಹುಟ್ಟುಹಾಕಿದೆ.
ಕೆರಗೋಡು ಗ್ರಾಮದ ವೃದ್ಧೆ ವಿಜಯಾಂಭ ಎಂಬುವವರು ಮಂಡ್ಯ ತಾಲೂಕಿನ ಕೆರಗೋಡು ಉಪ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದರು. ಇವರು ಮೃತಪಟ್ಟು 5 ವರ್ಷವಾದ ಬಳಿಕ ಅವರ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿದೆ. ಈ ಬಗ್ಗೆ ಮೃತರ ಕುಟುಂಬಸ್ಥರು ಅಂಚೆ ಕಚೇರಿಯ ಅಧಿಕಾರಿಗಳನ್ನ ಕೇಳಿದರೆ ತಮಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದೀಗ ಸದ್ದಿಲ್ಲದೆ ಸೆಟಲ್ಮೆಂಟ್​ ವ್ಯವಹಾರಕ್ಕೆ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿರಿಪ್ಲೀಸ್​… ನನ್ನ ಮಗಳನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದ ತಂದೆ ಕಣ್ಣೆದುರಲ್ಲೇ ಪ್ರಾಣಬಿಟ್ಟ ಕಂದಮ್ಮ! ವಿಮಾನದಲ್ಲಿ ನಡೆದದ್ದಾದರೂ ಏನು?
ವಿಜಯಾಂಬ 2011ರ ಜೂನ್​ 18ರಂದು ಮೃತಪಟ್ಟಿದ್ದಾರೆ. 2018ರಲ್ಲಿ ಮನೆಯನ್ನ ಸ್ವಚ್ಛ ಮಾಡುವಾಗ ಪಾಸ್​ಬುಕ್​ ಸಿಕ್ಕಿದ್ದು, ವಿಜಯಾಂಭ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಹಣ ಇರುವುದು ಆ ವೇಳೆ ಮನೆಯವರಿಗೆ ಗೊತ್ತಾಗಿದೆ. ಆ ಪಾಸ್​ಬುಕ್​ ಹಾಗೂ ವಿಜಯಾಂಭ ಅವರ ಡೆತ್​ ಸರ್ಟಿಫಿಕೇಟ್​ ತೆಗೆದುಕೊಂಡು ಅಂಚೆ ಕಚೇರಿಗೆ ಹೋಗಿ ವಿಚಾರಿಸಿದ್ದು, ಅವರ ಖಾತೆಯಿಂದ 2016ರ ಜೂನ್​ 28ರಂದೇ 19 ಸಾವಿರ ಹಣ ಡ್ರಾ ಆಗಿರುವುದು ಅಂದು ಬೆಳಕಿಗೆ ಬಂದಿದೆ. ಹಣ ಡ್ರಾ ಆದ ವೇಳೆ ವಿಜಯಾಂಬ ಮೃತಪಟ್ಟಿ 5 ವರ್ಷ ಆಗಿತ್ತು.
ಈ ಬಗ್ಗೆ ಮೃತರ ಕುಟುಂಬಸ್ಥರು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್​ಗೂ ದೂರು ನೀಡಿದ್ದಾರೆ. ಮಂಡ್ಯ ವಿಭಾಗದ ಅಧಿಕಾರಿಗಳಿಗೆ ತನಿಖೆ ನಡೆಸಿ ಎಂದು ಮನವಿ ಮಾಡಿದರೆ ಸೆಟಲ್ಮೆಂಟ್ ವ್ಯವಹಾರಕ್ಕೆ ಯತ್ನ ನಡೆದಿದೆ. ಸತತ ಮೂರು ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ವಿಜಯಾಂಭ ಅವರ ಅಳಿಯ ಶಿವಪ್ರಕಾಶ್, ಹಣಕ್ಕಿಂತ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ಪತ್ನಿಯನ್ನ ಜಾತ್ರೆಗೆ ಕಳಿಸಿ ಮನೆಗೆ ಬಂದವ ಪರಸ್ತ್ರೀ ಜತೆ ಹೆಣವಾದ! ಆ ಕೋಣೆಯಲ್ಲಿ ನಡೆದಿದ್ದೇನು?

ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + 11 =
Remember me
