ಬೆಂಗಳೂರು:ಕೆಲಸಕ್ಕಾಗಿ ಜಾಲತಾಣದಲ್ಲಿ ಸ್ವವಿವರ ಅಪ್ಲೋಡ್ ಮಾಡಿದ್ದ ಯುವಕನಿಗೆ ಡೇಟಾ ಸೈಂಟಿಸ್ಟ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಸೈಬರ್ ಕಳ್ಳರು 18 ಸಾವಿರ ರೂ. ಪಡೆದು ವಂಚಿಸಿದ್ದಾರೆ.
ಹೆಸರಘಟ್ಟ್ಟ ನಿವಾಸಿ ಹರಿಭರತ್ ವಂಚನೆಗೊಳಗಾದವ. ಈತ ಕೊಟ್ಟ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿರಿಒಂದೇ ಗುಂಡಿಗೆ 9 ಶವ ಎಸೆದು ಅಂತ್ಯಸಂಸ್ಕಾರ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ!
ಹರಿಭರತ್ ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದು, ಉದ್ಯೋಗಕ್ಕಾಗಿ ಜಾಲತಾಣದಲ್ಲಿ ಸ್ವವಿವರ ಅಪ್ಲೋಡ್ ಮಾಡಿದ್ದರು. ಫಾಯಸ್ ಎಂಬ ಹೆಸರಿನಲ್ಲಿ ಕರೆ ಮಾಡಿದ್ದ ಮಹಿಳೆ, ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಹುದ್ದೆ ಖಾಲಿ ಇದೆ ಎಂದಿದ್ದಳು. ಹುದ್ದೆಯ ಆಯ್ಕೆಗಾಗಿ ಆನ್‌ಲೈನ್‌ನಲ್ಲಿ 2 ಸಲ ಸಂದರ್ಶನ ನಡೆಸಿದ್ದಾಳೆ. ಬಳಿಕ ಹುದ್ದೆಗೆ ಕನಿಷ್ಠ ಶೇ. 85 ಅಂಕ ಪಡೆಯಬೇಕಿತ್ತು. ನಿಮಗೆ ಕಡಿಮೆ ಅಂಕ ಬಂದಿದೆ. ಕಂಪನಿಯಿಂದ ಹೊಸ ಕೋರ್ಸ್ ತರಬೇತಿ ನೀಡುತ್ತಿದ್ದೇವೆ. ಅದನ್ನು ಪೂರ್ಣಗೊಳಿಸಿದರೆ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ನಂಬಿಸಿದ್ದಳು.
ಕೋರ್ಸ್ ಶುಲ್ಕ 18 ಸಾವಿರ ರೂ. ಪಾವತಿಸಬೇಕು ಎಂದಿದ್ದಳು. ಆಕೆಯ ಮಾತನ್ನು ನಂಬಿದ ಯುವಕ 18 ಸಾವಿರ ರೂ. ಬ್ಯಾಂಕ್ ಖಾತೆಗೆ ಸಂದಾಯ ಮಾಡಿದ್ದಾನೆ. ಇದಾದ ಬಳಿಕ ಸಂಪರ್ಕಕ್ಕೆ ಸಿಗದೇ ಇದ್ದಾಗ ವಂಚನೆಯಾಗಿರುವುದು ಗೊತ್ತಾಗಿ ದೂರು ಕೊಟ್ಟಿದ್ದಾನೆ. ಪ್ರಕರಣ ದಾಖಲಿಸಿ ತನಿಖೆ ಕಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಟ್ಟಾಭಿಷೇಕದಲ್ಲಿ ಡಿಕೆಶಿ ಮನದಾಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
