ಮೂಡಿಗೆರೆ:ಮಾಳವಿಕಾ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಕಾಫಿ ಡೇ ಗ್ಲೋಬಲ್​ ಲಿಮಿಟೆಡ್​ ಕಂಪನಿಯ ಐವರು ನಿರ್ದೇಶಕರಿಗೆ ಮೂಡಿಗೆರೆ ಜೆಎಂ​ಎಫ್​ಸಿ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
ಮಾಳವಿಕಾ ಸಿದ್ದಾರ್ಥ ಹೆಗ್ಡೆ, ಕಂಪನಿ ನಿರ್ದೇಶಕರಾದ ಸದಾನಂದ ಪೂಜಾರ್​, ಜಯರಾಜ್​ ಸಿ.ಹುಬ್ಲಿ, ಕಿರೀಟಿ ಸಾವಂತ್​ ಮತ್ತು ಜಾವಿದ್​ ಫರ್ವೀಜ್​ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಿದೆ. ಮತ್ತೊಬ್ಬ ನಿರ್ದೇಶಕ ನಿತಿನ್​ ಬಾಗಮನೆ ಈಗಾಗಲೇ ಹೈಕೋರ್ಟ್​ನಲ್ಲಿ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಮೇಲ್ಮನವಿ ಸಲ್ಲಿಸಿರುವುದರಿಂದ ಅವರು ಮೂಡಿಗೆರೆ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗಲಿಲ್ಲ ಎನ್ನಲಾಗಿದೆ. ಅಂದಹಾದೆ ಏನಿದು ಪ್ರಕರಣ?
ಏನಿದು ಪ್ರಕರಣ?:ಕಾಫಿ ಡೇ ಗ್ಲೋಬಲ್​ ಲಿಮಿಟೆಡ್​ ಕಂಪನಿ ನೀಡಿದ್ದ ಚೆಕ್​ಗಳು ಅಮಾನ್ಯವಾಗಿವೆ ಎಂದು ಮಾಕೋನಹಳ್ಳಿಯ ಕಾಫಿ ಬೆಳೆಗಾರ ಕೆ. ನಂದೀಶ್​ ಎಂಬುವರು ಜುಲೈ 15ರಂದು ಮೂಡಿಗೆರೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಕಾಫಿ ಡೇ ಗ್ಲೋಬಲ್​ ಇಂಡಿಯಾ ತಮ್ಮಿಂದ ಖರೀದಿ ಮಾಡಿದ ಕಾಫಿಗೆ 45 ಲಕ್ಷ ರೂ. ಹಣ ಕೊಡಬೇಕಿದ್ದು, ವಿವಿಧ ಮೊತ್ತದ 10 ಚೆಕ್​ ನೀಡಿದ್ದರು ಎನ್ನಲಾಗಿದ್ದು, ಈ ಚೆಕ್​ಗಳು ಬೌನ್ಸ್​ ಆಗಿದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದರು.
ಅ. 6ರಂದು ನ್ಯಾಯಾಲಯಕ್ಕೆ ಹಾಜರಾಗಲು ಕಂಪನಿಯ ಎಂಟು ನಿರ್ದೇಶಕರಿಗೆ ಸಮನ್ಸ್​ ಜಾರಿಯಾಗಿತ್ತು. ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಬಂಧನಕ್ಕೆ ಜಾಮೀನುರಹಿತ ವಾರಂಟ್​ ಹೊರಡಿಸಲಾಗಿತ್ತು.
ಈ ದೃಶ್ಯ ನೋಡಿದ್ರೆ ನಿಮ್ಮ‌ ಮೈ ಜುಮ್ ಅನ್ನೋದು ಗ್ಯಾರಂಟಿ!

ಭಿಕ್ಷುಕನಾಗಿ ಚಿಂದಿ ಆಯುತ್ತಿದ್ದ ನಿವೃತ್ತ ಪೊಲೀಸಪ್ಪನಿಗೆ ಹೊಸ ಜೀವನ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − nine =
Remember me
