ಗಂಗಾವತಿ (ಕೊಪ್ಪಳ) :ತಾಲೂಕಿನ ಆನೆಗೊಂದಿ ಸಮೀಪದ ವಾಲಿಕಿಲ್ಲಾ ಬಳಿ ದೇವಸ್ಥಾನದಲ್ಲಿ ಅಡುಗೆ ಭಟ್ಟನಾಗಿದ್ದ ಯುವಕನನ್ನು ಗುರುವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ ತಿಂದು ಹಾಕಿದ ಘಟನೆ ನಡೆದಿದೆ.
ಮೇಗೋಟೆ ದುರ್ಗಾ ಬೆಟ್ಟದ ದೇಗುಲವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ‌ ಹುಲಗೇಶ್ ಈರಪ್ಪ ಮಡ್ಡೇರ್ (24) ನಿದ್ದೆಯಲ್ಲಿದ್ದಾಗ‌ ಚಿರತೆ ದಾಳಿ ಮಾಡಿದೆ. ಸುಮಾರು ಒಂದು ಕಿ.ಮೀ ದೂರದ ಕಾಡುಪೊದೆಯೊಳಗೆ ಹೊತ್ತೊಯ್ದು ಅರೆಬರೆಯಾಗಿ ತಿಂದು ಹಾಕಿದೆ.
ಇದನ್ನೂ ಓದಿ:ಇಂದು ಮುಂಬೈ-ಡೆಲ್ಲಿ ನಡುವೆ ಮೊದಲ ಕ್ವಾಲಿಫೈಯರ್ ಹಣಾಹಣಿ, ಗೆದ್ದವರು ಫೈನಲ್‌ಗೆ
ಘಟನೆ ಬೆಳಕಿಗೆ‌ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ‌ ಬಿದ್ದಿದ್ದಾರೆ. ಇತ್ತೀಚೆಗಷ್ಟೆ ದೇವಸ್ಥಾನಕ್ಕೆ ಆಗಮಿಸಿದ್ದ ಬಾಲಕನ ಮೇಲೆ ಚಿರತೆ ದಾಳಿಗೆ ಯತ್ನಿಸಿತ್ತು. ಬಳಿಕ ಅರಣ್ಯಾಧಿಕಾರಿಗಳಿಗಳು ಬೋನು ಇಟ್ಟು ಹೆಣ್ಣು ಚಿರತೆಯನ್ನು ಸೆರೆಹಿಡಿದಿದ್ದರು. ಮತ್ತೆ ಚಿರತೆ ದಾಳಿ ಮುಂದುವರೆದಿದ್ದು, ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ‌ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಗ್ರ ನಿಗ್ರಹ ಕುರಿತ ಭಾರತದ ವಾರ್ಷಿಕ ನಿರ್ಣಯ ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಸ್ವೀಕೃತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 4 =
Remember me
