ಸಿದ್ದಾಪುರ:ರಾಜ್ಯದ ಕೆಲವು ಪ್ರದೇಶಗಳಲ್ಲಿ ಚಿರತೆ ಉಪಟಳ ವರದಿ ಆಗುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಹೆಚ್ಚಾಗಿ ಇವು ಕಾಡಿನ ಅಂಚಿನಲ್ಲಿ ಕಾಣಿಸಿಕೊಳ್ಳುವ ಇವು ಆಹಾರದ ಕೊರತೆಯಿಂದ ಜನವಸತಿ ಇರುವ ಪ್ರದೇಶಗಳ ಕಡೆಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಇದೀಗ ಸಿದ್ದಾಪುರದ ಸಿಸಿ ಕ್ಯಾಮರಾದಲ್ಲಿ ಚಿರತೆ ಉಪಟಳ ಸೆರೆಯಾಗಿದೆ.
ಸಿದ್ದಾಪುರ ತಾಲೂಕಿನ ಸಂಪಗೋಡ ಗ್ರಾಮದ ಬೊಮ್ಮಜನಿಯಲ್ಲಿ ರಾತ್ರಿ ಸಮಯದಲ್ಲಿ ಮನೆಗೆ ಧಾವಿಸಿ ಒಂದು ನಾಯಿ ಹಾಗೂ ಎರಡು ಮರಿಯನ್ನು ಚಿರತೆ ತೆಗೆದುಕೊಂಡು ಹೋಗಿದ್ದು ಸಿಸಿ ಕ್ಯಾಮರಾದದಲ್ಲಿ ಸೆರೆಯಾಗಿದೆ.
ಹಲವು ದಿನಗಳಿಂದ ಬೊಮ್ಮಜನಿ ಪ್ರದೇಶದ ಸುತ್ತ ಮುತ್ತ ರಾತ್ರಿ ಸಮಯದಲ್ಲಿ ಚಿರತೆಯೊಂದು ಸುತ್ತಾಡುತ್ತಿತ್ತು. ಹತ್ತಿರದ ಮನೆಗಳವರೆಗೂ ಬಂದು ಹೋಗುತ್ತಿತ್ತು. ಕಳೆದ ಗುರುವಾರ ರಾತ್ರಿ ಹೊಂಚು ಹಾಕಿ ಮನೆಯಲ್ಲಿ ಸಾಕಿದ್ದ ಒಂದು ನಾಯಿ ಹಾಗೂ ಎರಡು ಮರಿಗಳನ್ನು ಲಪಟಾಯಿಸಿಕೊಂಡು ಹೋಗಿದೆ. ಇದರಿಂದ ಸುತ್ತಮುತ್ತಲಿನ ಜನತೆ ಆತಂಕಗೊಂಡಿದೆ. ಇದೀಗ ಅರಣ್ಯ ಇಲಾಖೆ ಕೂಡಲೇ ಚಿರತೆ ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
