ಸಿರಿಗೆರೆ(ಚಿತ್ರದುರ್ಗ):ಗ್ರಾಮದಲ್ಲಿ ಮಂಗಳವಾರ ಬೆಳಗಿನ ಚಿರತೆಯೊಂದು ಬೋನ್‌ಗೆ ಬಿದ್ದಿದ್ದು, ಇದರಿಂದಾಗಿ ಗ್ರಾಮದ ಜನರು ನಿಟ್ಟಿಸಿರು ಬಿಡುವಂತಾಗಿದೆ. ಎರಡು ಕರುಗಳನ್ನು ಎಳೆದೊಯ್ದಿದ್ದ ಚಿರತೆ ಇತ್ತೀಚೆಗೆ ಗ್ರಾಮದ ಜನರಲ್ಲಿ ಆತಂಕ ಉಂಟು ಮಾಡಿತ್ತು. ಕತ್ತಲಾದ ಮೇಲೆ ಗ್ರಾಮಸ್ಥರು ಹೊಲಗಳಿಗೆ ಹೋಗಲೂ ಅಂಜುವಂತಾಗಿತ್ತು.
ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ನಾಯಿವೊಂದನ್ನು ಕಟ್ಟಿದ್ದ ಬೋನ್‌ನ್ನು ಅದು ಓಡಾಡುತ್ತಿದೆ ಎಂಬ ಶಂಕೆಯಿದ್ದ ಜಾಗದಲ್ಲಿ ಇಟ್ಟಿದ್ದರು. ಬೋನ್‌ಗೆ ಬಿದ್ದ ಬಳಿಕ ಕೊಂಚ ಗಾಯಗೊಂಡಿರುವ ಅಂದಾಜು 10 ವರ್ಷದ ಈ ಗಂಡು ಚಿರತೆಯನ್ನು ಮೇಲಧಿಕಾರಿಗಳ ಚರ್ಚೆ ಬಳಿಕ ಎಲ್ಲಿಗೆ ಬಿಡಬೇಕೆಂಬುದರ ಕುರಿತು ನಿರ್ಧರಿಸಲಾಗುವುದು,ಸದ್ಯ ಅದಕ್ಕೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೊಳಲ್ಕೆರೆ ಉಪಅರಣ್ಯ ವಲಯ ಅಧಿಕಾರಿ ಎಂ.ಬಿ.ಇದಾಯಿತ್ ತಿಳಿಸಿದ್ದಾರೆ.
ಇದನ್ನೂ ಓದಿ:ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ ಮುಕ್ತಾಯ: ಕರೊನಾ ಲಸಿಕೆ ಬಗ್ಗೆ ಗುಡ್​ ನ್ಯೂಸ್​!
ಬೋನ್‌ಗೆ ಚಿರತೆ ಬಿದ್ದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ನೂರಾರು ಗ್ರಾಮಸ್ಥರು ಅದನ್ನು ವೀಕ್ಷಿಸಲು ಸ್ಥಳಕ್ಕೆ ದೌಡಾಯಿಸಿದ್ದರು.
ಟ್ರಾಫಿಕ್ ಸಿಗ್ನಲ್​ನ ಬ್ಯಾಟರಿ ಕಳವು – ಶಂಕರಮಠ ಜಂಕ್ಷನ್​ನಲ್ಲಿ ಕೃತ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − four =
Remember me
