ಬೆಂಗಳೂರು:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ವಿಚಾರವಾಗಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ “ಕುಮಾರಸ್ವಾಮಿ ಎಲ್ಲಾ ಸಂದರ್ಭದಲ್ಲೂ ಎಲ್ಲರ ಮೇಲೂ ಮಾತನಾಡ್ತಾನೆ ಬಂದಿದ್ದಾರೆ. ಪ್ರಧಾನಿಯಿಂದ ರಾಜ್ಯದ ನಾಯಕರ ಬಗ್ಗೆಯೂ ಮಾತನಾಡ್ತಾ ಬಂದಿದ್ದಾರೆ. 25 ವರ್ಷದಿಂದಲ್ಲೂ ಮಾತನಾಡ್ತಾ ಬಂದ್ದಾರೆ. ಅಧಿವೇಶನ ನಡೆಯುತ್ತಿದೆ ದಾಖಲೆ ಬಿಡುಗಡೆ ಮಾಡಲಿ. ನಾವೇನಾದ್ರು ಅವರಿಗೆ ಬಿಡುಗಡೆ ಮಾಡಬೇಡಿ ಎಂದು ಹೇಳಿದ್ದೀವಾ? ದಾಖಲೆ ಇದ್ರೆ ಬಿಡುಗಡೆ ಮಾಡ್ಲಿ” ಎಂದು ನೇರವಾಗಿ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್​ ಪಾಪ್ಯುಲಾರಿಟಿ ಸಹಿಸಲಾರದೆ ಬಿಜೆಪಿಯವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಚೆಲುವರಾಯಸ್ವಾಮಿ
ಇದೇ ವೇಳೆ ಅವರು YST ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು “ಸರ್ಕಾರ ರಚನೆ ಮಾಡುವಾಗ ಅವರು ಅವರ ಅಣ್ಣ ತಮ್ಮಂದಿರ ಜೊತೆ ಚರ್ಚೆ ಮಾಡಿಲ್ವಾ? ಯತಿಂದ್ರ ಮಾಜಿ ಶಾಸಕ ನನ್ನ ಜೊತೆ ಅಥವ ಬೇರೆಯವರ ಜೊತೆ ಚರ್ಚೆ ಮಾಡಿದ್ರೆ ತಪ್ಪೇನು? ಅವರು ನಮ್ಮ ಪಕ್ಷದ ನಾಯಕ. ಸುಮ್ಮನೆ ಅನಾವಶ್ಯಕವಾಗಿ ಯೋಚನೆ ಮಾಡದೆ ಮಾತನಾಡೋದು ಸರಿಯಲ್ಲ. ಅವರು ಮಾಜಿ ಮುಖ್ಯಮಂತ್ರಿಯಾಗಿ ಯೋಚನೆ ಮಾಡಿ ಮಾತನಾಡಬೇಕು” ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ವಿರುದ್ಧ ಲೂಲೂ ಮಾಲ್ ನಿರ್ಮಾಣಕ್ಕೆ ಸಂಬಂಧಿಸಿದ ಅಕ್ರಮ ಆರೋಪದ ವಿಚಾರದ ಕುರಿತಾಗಿಯೂ ಸಚಿವ ಚೆಲುವರಾಯಸ್ವಾಮಿ ಮಾತನಾಡಿದ್ದಾರೆ. ಈ ಸಂದರ್ಭ ಎಚ್​ಡಿಕೆಗೆ ತಿರುಗೇಟು ನೀಡಿದ ಅವರು “ಡಿಕೆ ಶಿವಕುಮಾರ್ ಬಿಸಿನೆಸ್ ಮಾಡಿಕೊಂಡು ಬಂದವರು. ಇವರ ಕುಟುಂಬದ ಆಸ್ತಿ ಬಗ್ಗೆಯೂ ಚರ್ಚೆ ಮಾಡಲಿ. ನಮ್ಮ ಕುಟುಂಬದಲ್ಲಿ ನಾಲ್ಕು ಜನರದ್ದು ಇಷ್ಟು ಇದೆ ಎಂದು ಅವರೇ ಹೇಳಿಬಿಡಲಿ.
ಇದನ್ನೂ ಓದಿ:ಆಟೋ ಚಾಲಕರ ಸಮಸ್ಯೆಗಳ ಬಗ್ಗೆ ಚೆಲುವರಾಯಸ್ವಾಮಿ ಮಾತಾಡಿದ್ದೇನು?
ನಾವು ಯಾರು ಹೇಳೋದಕ್ಕೆ ಹೋಗೊದಿಲ್ಲ‌. ಅವರೇ ಹೇಳಿಬಿಡಲಿ ಅವರಲ್ಲಿ ಎಷ್ಟು ಆಸ್ತಿ ಇದೆ ಎಂದು. ಇವರು ಬಿಸಿನೆಸ್ ಮಾಡಿಕೊಂಡು ಬಂದಿದ್ದಾರೆ. ಅವರು ಏನ್ ಮಾಡಿಕೊಂಡು ಬಂದಿದ್ದಾರೆ ಹೇಳಿಬಿಡಲಿ. ಬಿಡಿ, ಇವೆಲ್ಲ ಮಳೆ ಆಗ್ತಿಲ್ಲ ಜನರ ಸಮಸ್ಯೆ ಬಗ್ಗೆ ಕೇಳಿಕೋದಕ್ಕೆ ಹೇಳಿ. ಕೇಂದ್ರದಿಂದ ಅಕ್ಕಿ ಬರ್ತಿಲ್ಲ. ಅದನ್ನ ಕೇಳೋದಕ್ಕೆ ಹೇಳಿ ವಿರೋಧ ಪಕ್ಷದದಲ್ಲಿದ್ದಾರೆ” ಎಂದು ಎಚ್​ಡಿಕೆಗೆ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
