ಬೆಂಗಳೂರು:ಕೃಷಿ ಸಚಿವ ಚೆಲುವರಾಯಸ್ವಾಮಿ ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ಧಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಕುರಿತು ಆಡಳಿತ ಪಕ್ಷ ಕಾಂಗ್ರೆಸ್​ ಹಾಗೂ ವಿಪಕ್ಷಗಳ ನಡುವಿನ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ತಮ್ಮ ವಿರುದ್ಧ ಪತ್ರ ಬರೆದಿರುವ ಕುರಿತು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಚೆಲುವರಾಯಸ್ವಾಮಿ ಅದು ಫೇಕ್​ ಅಲ್ಲದೇ ಮತ್ತೇನ್ನೂ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೃಷಿ ಅಧಿಕಾರಿಗಳ ಹೆಸರಿನಲ್ಲಿ ದೂರು ಕೊಟ್ಟಿರುವವರು ನಮ್ಮ ಇಲಾಖೆಯಲ್ಲಿಯೇ ಇಲ್ಲ. ಪತ್ರದಲ್ಲಿ ನಮೂದಿಸಲಾಗಿರುವ ಹೆಸರು ಹಾಗೂ ವಿಳಾಸಗಳೂ ಎಲ್ಲಾ ನಕಲಿ. ಅವರ ಫೋನ್​ ನಂಬರ್​ಗಳು ಕೂಡ ಸಿಕ್ಕಿಲ್ಲ. ರಾಜ್ಯಪಾಲರ ಕಚೇರಿಗೆ ಪತ್ರ ತಲುಪಿದ ಬಗ್ಗೆ ತನಿಖೆ ನಡೆಯುತ್ತಿದೆ. ಪತ್ರದಲ್ಲಿರುವ ಏಳು ಸಹಿಗಳು ಒಂದೇ ರೀತಿಯಿದ್ದು, ಕುಮಾರಸ್ವಾಮಿಯವರು ನಾನೇ ಸಹಿ ಮಾಡಿದ್ದೆಂದು ಒಪ್ಪಿಕೊಳ್ಳಲಿ ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ:ಮಾನಸಿಕ ಒತ್ತಡ; ಹೈದರಾಬಾದ್​ ಐಐಟಿ ಹಾಸ್ಟೆಲ್​ನಲ್ಲಿ ಪ್ರಾಣಬಿಟ್ಟ ವಿದ್ಯಾರ್ಥಿನಿ
ಮಾಜಿ ಸಿಎಂ ಆಗಿರುವ ಕುಮಾರಸ್ವಾಮಿಗೆ ಜ್ಞಾನ, ತಿಳುವಳಿಕೆ ಇರಬೇಕು. ಅವರು ಒಕ್ಕಲಿಗರನ್ನ ಸಹಿಸಲ್ವೋ, ಇನ್ನೊಬ್ಬರನ್ನ ಸಹಿಸಲ್ವೋ ಅದು ಅವರಿಗೆ ಬಿಟ್ಟಿದ್ದು. ಅವರು ಮಂಡ್ಯ ಜಿಲ್ಲೆಯನ್ನ ಏನಾದ್ರೂ ದತ್ತು ತೆಗೆದುಕೊಂಡಿದ್ದಾರಾ. ಕುಮಾರಸ್ವಾಮಿಗೆ ಮಂಡ್ಯದಲ್ಲಿ ಬೇರೆ ಯಾರೂ ರಾಜಕಾರಣ ಮಾಡಬಾರದು. ಮಂಡ್ಯ ಅಭಿವೃದ್ಧಿ ಆಗಬಾರದೆಂಬುದು ಅವರ ಅಭಿಲಾಷೆ ಎಂದು ಕಿಡಿಕಾರಿದ್ದಾರೆ.
ಅವರ ಬೆದರಿಕೆಗಳಿಗೆ ಯಾರೂ ಹೆದರೋದಿಲ್ಲ. ಈ ಸರ್ಕಾರವನ್ನಾ ನಾನು ಏನೋ ಮಾಡ್ತೀನಿ ಅನ್ಕೊಂಡಿದ್ದಾರೆ. ಅವರು ಸಿಎಂ ಆಗಿದ್ದಾಗ ಏನೇನು ಮಾಡಿದ್ರು ಅಂತ ಎಲ್ಲಾ ನೋಡಿದ್ದಾರೆ. ಹೆಚ್ಡಿಕೆಗಿಂತ 100ಪಟ್ಟು ಗೌರವಯುತವಾಗಿ ಆಡಳಿತ ನಡೆಸುತ್ತೇವೆ. ಕುಮಾರಸ್ವಾಮಿಗೆ ಹಳೇ ಮೈಸೂರು ಭಾಗದಲ್ಲಿ ಶಕ್ತಿ ಕುಂದುತ್ತೆ ಅನ್ನೋ ಭಯ ಇದೆ. ಅದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಜಿ ಸಿಎಂ ಎಚ್​ಡಿಕೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
