ಹಾಸನ:ಅರಕಲಗೂಡು ತಾಲೂಕಿನ ಬಸವನಹಳ್ಳಿ ಪಡುವಲಹಿಪ್ಪೆ ರಸ್ತೆ ತಿರುವಿನಲ್ಲಿ ಶನಿವಾರ ತಡರಾತ್ರಿ ವಿಷಕಾರಿ ರಾಸಾಯನಿಕ ಹೊತ್ತು ಸಾಗುತ್ತಿದ್ದ ಲಾರಿ ಉರುಳಿ ಬೆಂಕಿ ಹೊತ್ತಿ ಉರಿದು ಮೂವರು ಮೃತಪಟ್ಟಿದ್ದಾರೆ.
ತಾಲೂಕಿನ ಗೊರವನಹಳ್ಳಿ ಗ್ರಾಮದ ಲಾರಿ ಚಾಲಕ ಪುಟ್ಟರಾಜು ೪೨, ಪ್ರಮೋದ್ ೧೮, ಪರಮೇಶ್ ೪೦ ಸಾವಿಗೀಡಾದವರು.
ಮೈಸೂರಿನಿಂದ ಹಾಸನದ ಹಿಮತ್ ಸಿಂಗ್ ಬಟ್ಟೆ ಕಾರ್ಖಾನೆಗೆ ವಿಷಕಾರಿ ಪೌಡರ್ ಚೀಲಗಳು, ಕೆಮಿಕಲ್ ಬಾಕ್ಸ್ ಗಳನ್ನು ಹೊತ್ತು ಬರುತ್ತಿದ್ದ ಲಾರಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿ ಉರುಳಿ ಬಿದ್ದ ರಭಸಕ್ಕೆ ಬೆಂಕಿ ಹೊತ್ತಿ ಉರಿದಿದೆ. ಘಟನೆಯಿಂದಾಗಿ ಲಾರಿಯಡಿ ಇಬ್ಬರು ಸಿಲುಕಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿರಿ:6 ತಿಂಗಳ ಬಳಿಕ ಕೆರೆಯ ಆಳದಲ್ಲಿ ಪತ್ತೆಯಾಯ್ತು ಮೊಬೈಲ್​ ಫೋನ್​: ಸ್ವಿಚ್​ ಆನ್​ ಮಾಡಿದಾಗ ಕಾದಿತ್ತು ಶಾಕ್​!
ಹಾಸನ: ಅರಕಲಗೂಡು ತಾಲೂಕಿನ ಬಸವನಹಳ್ಳಿ ಪಡುವಲಹಿಪ್ಪೆ ರಸ್ತೆ ತಿರುವಿನಲ್ಲಿ ಶನಿವಾರ ತಡರಾತ್ರಿ ವಿಷಕಾರಿ ರಾಸಾಯನಿಕ ಹೊತ್ತು ಸಾಗುತ್ತಿದ್ದ ಲಾರಿ ಉರುಳಿ ಬೆಂಕಿ ಹೊತ್ತಿ ಉರಿದು ಮೂವರು ಮೃತಪಟ್ಟಿದ್ದಾರೆ.#Chemical#Lorry#Hassan#Accident#Death#FireAccidentpic.twitter.com/tU6aYla8Wg
— Vijayavani (@VVani4U)March 21, 2021

ಲಾರಿಯಿಂದ ಕೆಳಕ್ಕೆ ಜಿಗಿದು ಗಾಯಗೊಡಿದ್ದ ಚಾಲಕನನ್ನು ರಾತ್ರಿಯೇ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ, ಇಂದು ಬೆಳಗ್ಗೆ ಹಾಸನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲಾರಿಯಡಿ ಸಿಲುಕಿದ್ದ ಇಬ್ಬರ ಮೃತದೇಹಗಳನ್ನು ಹೊರತೆಗೆಯಬೇಕಿದೆ. ಕೆಮಿಕಲ್ ದುರ್ವಾಸನೆ ಬೀರುತ್ತಿದ್ದ ಲಾರಿ ಹತ್ತಿರ ಜನರು ಸುಳಿಯಲು ಸಾಧ್ಯವಾಗುತ್ತಿಲ್ಲ, ಸ್ಥಳದಲ್ಲಿ ಅರಕಲಗೂಡು ಪೊಲೀಸರು ಮೊಕ್ಕಾಂ ಹೂಡಿದ್ದು ಮುಂಜಾಗ್ರತೆ ವಹಿಸಿದ್ದಾರೆ.
ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಕಷ್ಟಗಳು ನಿವಾರಣೆ ಆಗುತ್ತವೆ: ವಾರಭವಿಷ್ಯ

Web Exclusive | ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲೇ ಹೆಚ್ಚು ದರ: ಒಂದು ಚೀಲವೂ ಮಾರಾಟವಾಗದ ತೊಗರಿ!

ಪ್ರತೀಕಾರ ತೀರಿಸಿಕೊಳ್ಳಲು ಕಾಂಗ್ರೆಸ್ ಮುಖಂಡನ ಕೊಲೆ, ಐವರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
