|ಎಂ.ಪಿ. ವೆಂಕಟೇಶ್ಮದ್ದೂರು
ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿರುವಾಗಲೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಮನ್​ವುುಲ್) ಮತ್ತೊಂದು ಅಕ್ರಮ ಬೆಳಕಿಗೆ ಬಂದಿದೆ. ಹಾಲಿಗೆ ಉಪ್ಪಿನಂಶದ ರಾಸಾಯನಿಕ ಕಲಬೆರಕೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ಹಾಲು ಸರಬರಾಜಿಗೆ ಖಾಸಗಿ ಟ್ಯಾಂಕರ್​ಗಳನ್ನು ಬಳಸಿ, ಬೇಕಾಬಿಟ್ಟಿ ನೀರು ಮಿಶ್ರಣ ಮಾಡುವ ಮೂಲಕ ದಿನಕ್ಕೆ ಕನಿಷ್ಠ 3 ಲಕ್ಷ ಲೀಟರ್​ಗಳಷ್ಟು ಹಾಲನ್ನು ಕದ್ದು ಮಾರಿಕೊಳ್ಳುತ್ತಿದ್ದ ಬಹುದೊಡ್ಡ ಹಗರಣ ಕಳೆದ ವರ್ಷ ಬೆಳಕಿಗೆ ಬಂದಾಗ ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಮಾತ್ರವಲ್ಲ, ‘ನಂದಿನಿ’ ಹಾಲಿನ ಬಗ್ಗೆ ಅನುಮಾನ ಮೂಡುವಂತಾಗಿತ್ತು. ಇದೀಗ ಮದ್ದೂರು ತಾಲೂಕು ಕೆ.ಹೊನ್ನಲಗೆರೆಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚೌಡೇಶ್ವರಿ ಹಾಲು ಶೇಖರಣಾ ಮಾರ್ಗದ ಮೂಲಕ ಸರಬರಾಜಾಗಿರುವ ಹಾಲಿನಲ್ಲಿ ಉಪ್ಪಿನಂಶದ ರಾಸಾಯನಿಕ ಕಲಬೆರಕೆ ಆಗಿರುವುದನ್ನು ಒಕ್ಕೂಟದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಮಾರುಕಟ್ಟೆಗೆ ಧಕ್ಕೆ:ಭಾರತ ಆಹಾರ ಸಂರಕ್ಷಣಾ ಕಾಯ್ದೆ ಪ್ರಕಾರ ಹಾಲಿನ ಕಲಬೆರಕೆ ಶಿಕ್ಷಾರ್ಹ ಅಪರಾಧ. ಡೇರಿಗಳಿಂದ ಸರಬರಾಜಾಗುವ ಹಾಲಿನಲ್ಲಿ ರಾಸಾಯನಿಕ ಬೆರೆಸಿ ಕಲಬೆರಕೆ ಆದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಗೆ ಧಕ್ಕೆ ಉಂಟಾಗಿ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಜ.17ರಂದು ನಡೆದ ಒಕ್ಕೂಟದ 425ನೇ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಡೇರಿಯಿಂದ ಪ್ರತಿದಿನ ಸಂಗ್ರಹವಾಗುತ್ತಿದ್ದ ಸುಮಾರು 1600 ಲೀ. ಹಾಲು ಶೇಖರಣೆಯನ್ನು ಜ.18ರಿಂದ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಕೆ.ಹೊನ್ನಲಗೆರೆ ಡೇರಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಆದೇಶ ನೀಡಿದ್ದಾರೆ.
ಹಾಲಿಗೆ ನೀರು ಬೆರೆಸಿರುವುದು ಪರೀಕ್ಷೆಯಲ್ಲಿ ಬೆಳಕಿಗೆ ಬರದಂತೆ ರಾಸಾಯನಿಕ ಕಲಬೆರಕೆ ಮಾಡಲಾಗುತ್ತಿತ್ತು. ಹಾಲಿಗೆ Mಚ್ಝಠಿಟಛಛ್ಡಿಠ್ಟಿಜ್ಞಿ ಕೆಮಿಕಲ್ ಬೆರೆಸುವುದರಿಂದ ಲ್ಯಾಕ್ಟೊಮೀಟರ್​ನಲ್ಲಿ ನೀರಿನಂಶ ಬೆಳಕಿಗೆ ಬರದೆ ಹಾಲು ಪರಿಶುದ್ಧವೆಂಬಂತೆ ಬಿಂಬಿತವಾಗುತ್ತದೆ ಎನ್ನಲಾಗಿದೆ.
ಸಮಗ್ರ ತನಿಖೆ ಅಗತ್ಯ:ಯಾವಾಗಿನಿಂದ ಹಾಲು ಕಲಬೆರಕೆ ನಡೆಯುತ್ತಿದೆ, ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವ ಮಾಹಿತಿ ಹೊರಗೆ ಬರಬೇಕಿದೆ. ಅಷ್ಟೇ ಅಲ್ಲದೆ, ಬೇರೆ ಡೇರಿಗಳಲ್ಲೂ ಇದೇ ರೀತಿ ನಡೆಯುತ್ತಿದೆಯೇ ಎಂಬ ಬಗ್ಗೆಯೂ ಸಮಗ್ರ ಪರಿಶೀಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ನೋಟಿಸ್​ಗೂ ಪ್ರಯೋಜನವಿಲ್ಲ:2021 ಸೆ.29ರಿಂದ ಅ.5ರವರೆಗೆ ಡೇರಿಯಿಂದ ಪೂರೈಕೆಯಾದ ಹಾಲಿನಲ್ಲಿ ಸಕ್ಕರೆ ಅಂಶ ಕಲಬೆರಕೆಯಾಗಿರುವುದು ಕಂಡುಬಂದಿದೆ. ಅ.3ರಂದು ಬಂದ ಹಾಲಿನಲ್ಲಿ ಉಪ್ಪಿನಂಶದ ರಾಸಾಯನಿಕ ಕಲಬೆರಕೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಡೇರಿಗೆ ನೋಟಿಸ್ ನೀಡಲಾಗಿದೆ. ಇದಾದ ನಂತರ 2022 ಜ.8ರಂದು 35 ಕ್ಯಾನ್​ಗಳಿಂದ 1374 ಕೆ.ಜಿ. ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಸರಬರಾಜು ಮಾಡಲಾಗಿದೆ. ಈ ಎಲ್ಲ ಕ್ಯಾನ್​ಗಳಲ್ಲಿದ್ದ ಹಾಲನ್ನು ಪರಿಶೀಲಿಸಿದಾಗ 4 ಕ್ಯಾನ್​ಗಳಲ್ಲಿ Mಚ್ಝಠಿಟಛಛ್ಡಿಠ್ಟಿಜ್ಞಿ ಉಪು್ಪ ಮತ್ತು ಸಕ್ಕರೆ ಸೇರಿದಂತೆ ರಾಸಾಯನಿಕ ಕಲಬೆರಕೆ ಅಂಶ ಕಂಡುಬಂದಿದೆ. ಈ ವೇಳೆ ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಜ.13ರಂದು ಮತ್ತೆ ಡೇರಿಯಿಂದ ಒಕ್ಕೂಟಕ್ಕೆ ಬಂದಿದ್ದ 33 ಹಾಲಿನ ಕ್ಯಾನ್​ಗಳಲ್ಲಿದ್ದ ಹಾಲನ್ನು ಪರೀಕ್ಷೆಗೆ ಒಳಪಡಿಸಿದಾಗ 27 ಕ್ಯಾನ್​ಗಳಲ್ಲಿ ಘಛ್ಠಿಠ್ಟಿಚ್ಝಜಿಠಛ್ಟಿ ಕಲಬೆರಕೆ ಪತ್ತೆಯಾಗಿದೆ. ಇಷ್ಟಾದ ಬಳಿಕ ಕೈಗೊಂಡಿರುವ ಕ್ರಮದ ಸಮಜಾಯಿಷಿ ನೀಡುವಂತೆ ತಿಳಿವಳಿಕೆ ಪತ್ರ ಮತ್ತು ನೋಟಿಸ್ ನೀಡಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಇದು ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದೆ.
ಸಂಪರ್ಕಕ್ಕೆ ಸಿಗಲಿಲ್ಲ:ಹಾಲಿಗೆ ರಾಸಾಯನಿಕ ಅಂಶ ಕಲಬೆರಕೆ ಮಾಡಿರುವ ಸಂಬಂಧ ಪ್ರತಿಕ್ರಿಯಿಸಲು ಮನ್​ವುುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು, ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.
ವರ್ಗಾವಣೆಯಷ್ಟೇ ಸಾಧನೆ:ಕಳೆದ ವರ್ಷ ನಡೆದಿದ್ದ ಹಾಲಿಗೆ ನೀರು ಮಿಶ್ರಣ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎನ್ನುವ ಕನಿಷ್ಠ ಮಾಹಿತಿಯೂ ಹೊರಗೆ ಬರುತ್ತಿಲ್ಲ. ಹಗರಣ ಬೆಳಕಿಗೆ ಬಂದಿದ್ದ ವೇಳೆ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಷ್ಟೇ ಸಾಧನೆ ಎನ್ನುವಂತಾಗಿದೆ. ಇದಾದ ಬಳಿಕ ದೂರು ದಾಖಲಾಗಿ, ಲಾರಿಗಳನ್ನು ವಶಪಡಿಕೊಳ್ಳಲಾಗಿತ್ತು. ‘ವಿಜಯವಾಣಿ’ ಸರಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿದ್ದರು. ಇತ್ತ ಸಹಕಾರ ಇಲಾಖೆಯಿಂದಲೂ ತನಿಖೆ ನಡೆಯುತ್ತಿದೆ. ಕೆಲವೇ ದಿನದಲ್ಲಿ ವರದಿ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದರು. ಆದರೆ ಇಂದಿಗೂ ವರದಿ ಏನಾಗಿದೆ ಎನ್ನುವ ಯಾವುದೇ ಮಾಹಿತಿ ಸಿಗುತ್ತಿಲ್ಲ.
ರಾಜ್ಯದಲ್ಲಿ ಮಿತಿ ಮೀರಿದ ಕರೊನಾ ಹಾವಳಿ; ಇಂದು ಕೂಡ ಸೋಂಕಿತರು ಮತ್ತು ಮೃತರ ಸಂಖ್ಯೆಯಲ್ಲಿ ಹೆಚ್ಚಳ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
