ಬೆಂಗಳೂರು:ಕೆಳದಿ ರಾಣಿ ಚೆನ್ನಮ್ಮ ಅವರ ಜೀವನಗಾಥೆಯನ್ನು ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ 350ನೇ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಡಿದವರ ಇತಿಹಾಸ, ಆದರ್ಶವನ್ನು ಭವಿಷ್ಯದ ಪೀಳಿಗೆಗೆ ತಿಳಿಸಿಕೊಡಬೇಕಾಗಿದ್ದು, ಚೆನ್ನಮ್ಮ ಹೋರಾಟ, ದಿಟ್ಟ ನಿಲುವು ಮುಂದಿನ ಪೀಳಿಗೆಗೆ ಆದರ್ಶನೀಯ ಎಂದರು. ಮುಂದಿನ ವರ್ಷ ಕೆಳದಿಯಲ್ಲೇ ರಾಣಿ ಚೆನ್ನಮ್ಮನವರ ಪಟ್ಟಾಭಿಷೇಕ ಮಹೋತ್ಸವವನ್ನು ಕೆಳದಿ ಉತ್ಸವದ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಅಲ್ಲದೆ, ಶೌರ್ಯ ಮತ್ತು ಧೀರೋದಾತ್ತತೆಗೆ ಸ್ಪೂರ್ತಿಯ ಸೆಲೆಯಾದ ಕೆಳದಿ ಸುತ್ತಮುತ್ತಲ ಪ್ರದೇಶ ಅಭಿವೃದ್ಧಿಪಡಿಸಿ ಪುನರುತ್ಥಾನ ಮಾಡಲಾಗುವುದು ಎಂದು ಪ್ರಕಟಿಸಿದರು.
ಕಂದಾಚಾರದ ವಿರುದ್ಧ ಗಟ್ಟಿ ನಿಲುವು ಮೇಲ್ಪಂಕ್ತಿಯಾಗಿದ್ದಾರೆ. ಅಲ್ಲದೆ, ತನ್ನ ರಾಜ್ಯದ ಮೇಲೆ ಪದೇ ಪದೆ ದಾಳಿ ಮಾಡಿ ಹತ್ಯೆಗೆ ಪ್ರಯತ್ನಿಸಿದವರನ್ನು ಕ್ಷಮಿಸಿ, ಆಶ್ರಯ ನೀಡಿದ ಧೀರ ರಾಣಿ ಕೆಳದಿ ಚೆನ್ನಮ್ಮ ಎಂದು ಸಿಎಂ ಬೊಮ್ಮಾಯಿ ಕೊಂಡಾಡಿದರು. ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಸಚಿವರಾದ ಮುರುಗೇಶ್ ನಿರಾಣಿ, ಡಾ.ಕೆ.ಸುಧಾಕರ್ ಇನ್ನಿತರರು ಇದ್ದರು.
ಮೀನುಗಾರಿಕೆ ನಡೆಸುತ್ತಿದವರ ಮೇಲೆ ಸಮುದ್ರದ ಮಧ್ಯೆ ನೌಕಾದಳ ಸಿಬ್ಬಂದಿ ಹಲ್ಲೆ..?
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twenty − 6 =
Remember me
