ಬಾಗಲಕೋಟೆ:ಕೆಲ ದಿನಗಳ ಹಿಂದೆ ಬಾಗಲಕೋಟೆಯ ಕೃಷಿ ಇಲಾಖೆ ಜೆಡಿ ಡಾ. ಚೇತನಾ ಪಾಟೀಲ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಈ ಸಂದರ್ಭ ಅಕ್ರಮ ಆಸ್ತಿಯ ಕಡೆಗೆ ಬೆರಳು ತೋರಿಸುವ ದಾಖಲೆಗಳು ಲಭ್ಯವಾಗಿದ್ದವು. ಅದೇ ಸಂದರ್ಭದಲ್ಲಿ ಅವರು ಸಾಕಿದ್ದ ಆಮೆಗಳೂ ಅಧಿಕಾರಿಗಳಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಇದೀಗ ಹೆಚ್ಚಿನ ವಿಚಾರಣೆಗಾಗಿ ಚೇತನಾ ಪಾಟೀಲರ ಲಾಕರ್​ ಮುಂತಾದವುಗಳನ್ನು ಪರಿಶೀಲಿಸಿದಾಗ ಸಾಕಷ್ಟು ಚಿನ್ನಾಭರಣ, ಬೆಳ್ಳಿ ಮುಂತಾದವು ಲಭಿಸಿದೆ.
ಇದನ್ನೂ ಓದಿ:ತಹಶೀಲ್ದಾರ್​ ಮನೇಲಿ ಸಿಕ್ತು ಲೀಟರ್​​ಗಟ್ಟಲೆ ಮದ್ಯ!; ಲೋಕಾಯುಕ್ತ ದಾಳಿ ವೇಳೆ ಪತ್ತೆ
ಚೇತನಾ ಪಾಟೀಲರ ಎರಡು ಲಾಕರ್​ಗಳನ್ನು ತೆರೆದಾಗ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ ಪತ್ತೆಯಾಗಿದೆ. ಒಂದು ಲಾಕರ್ ನಲ್ಲಿ 3.5 ಕೆಜಿ ಬೆಳ್ಳಿ, 850 ಗ್ರಾಮ್ ಚಿನ್ನ ಪತ್ತೆಯಾದರೆ ಮತ್ತೊಂದು ಲಾಕರ್ ನಲ್ಲಿ 600 ಗ್ರಾಮ್ ಬೆಳ್ಳಿ ಸಿಕ್ಕಿದೆ.
ಎರಡು ಬ್ಯಾಂಕ್ ಲಾಕರ್ ಗಳಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಹಣ ಪತ್ತೆಯಾಗಿದ್ದು 826 ಗ್ರಾಮ್ ಚಿನ್ನ, 4 ಕೆಜಿ 300 ಗ್ರಾಮ್ ಬೆಳ್ಳಿ ಹಾಗೂ 3 ಲಕ್ಷ 99 ಸಾವಿರ ನಗದು ಹಣ ಪತ್ತೆಯಾಗಿದೆ.
ಇದನ್ನೂ ಓದಿ:ಭ್ರಷ್ಟ ಅಧಿಕಾರಿಗಳಿಗೆ ಶಾಕ್ ರಾಯಚೂರು ಎಡಿಯ ಕಲಬುರಗಿ ತೋಟದ ಮನೆ ಮೇಲೆ ಲೋಕಾಯುಕ್ತರ ದಾಳಿ : ಬೀಗ ಒಡೆದು ಪರಿಶೀಲನೆ
ಇನ್ನು ಮುಧೋಳ ರೆಡ್ಡಿ ಬ್ಯಾಂಕ್ ಹಾಗೂ ಯುನಿಯನ್ ಬ್ಯಾಂಕ್​ಗಳಲ್ಲಿ ಇಟ್ಟಿದ್ದ ಚಿನ್ನಾಭರಣ ಕೂಡ ಪತ್ತೆಯಾಗಿದ್ದು ಬೆಳ್ಳಿ ಕೊಡ, ಬೆಳ್ಳಿ ದೀಪ, ಬೆಳ್ಳಿ ಬಟ್ಟಲು, ಬೆಳ್ಳಿ ಆರತಿ, ಚಿನ್ನದ ಸರಗಳು, ಚಿನ್ನದ ಬಳೆಗಳು ಒಳಗೊಂಡಂತೆ ವಿವಿಧ ಚಿನ್ನಾಭರಣಗಳು ಲಾಕರ್ ನಲ್ಲಿ ಪತ್ತೆಯಾಗಿದೆ.
ಅದಷ್ಟೇ ಅಲ್ಲದೇ ಅವರು ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಹರಾಜಿನಲ್ಲಿ 1 ಕೋಟಿ 04 ಲಕ್ಷ ಮೊತ್ತದ ಫ್ಲಾಟ್ ಖರೀದಿ ಮಾಡಿದ್ದಾರೆ. ಇನ್ನು, ಚೇತನಾ ಅವರ ತಾಯಿ ಊರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿಯೂ ಆಸ್ತಿ ಖರೀದಿ ಮಾಡಿದ್ದಾರೆ ಎನ್ನಲಾಗಿದ್ದು ಬೇನಾಮಿ ಆಸ್ತಿಯನ್ನೂ ಹೊಂದಿರುವ ಅನುಮಾನ ವ್ಯಕ್ತವಾಗಿದೆ.
ಬೇನಾಮಿ ಆಸ್ತಿ ಪತ್ತೆಗಾಗಿ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಹಾಗೂ ಇತರ ಲೋಕಾ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಿದ್ದು ಡಾ.ಚೇತನಾ ಪಾಟೀಲರ ಆಸ್ತಿ- ಪಾಸ್ತಿ ಶೋಧ ಕಾರ್ಯ ಮುಂದುವರೆಯುತ್ತಿದೆ.
ಇದನ್ನೂ ಓದಿ:ಲೋಕಾಯುಕ್ತ ದಾಳಿ | ಬಾಗಲಕೋಟೆ ಕೃಷಿ ನಿರ್ದೇಶಕಿ ಮನೆಯಲ್ಲಿ ಆಮೆ ಪತ್ತೆ!
ಇನ್ನು ಬೀಳಗಿ ಕೃಷಿ ಸಹಾಯಕ ನಿರ್ದೇಶಕ ಕೃಷ್ಣಾ ಶಿರೂರ ಸಂಬಂಧಿಸಿದ ಲಾಕರ್​ನಲ್ಲೂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದು ಬಾಗಲಕೋಟೆಯ ಕೆವಿಜಿ ಬ್ಯಾಂಕ್ ಲಾಕರ್​ನಲ್ಲಿ ಸಿಕ್ಕಿದೆ. ಅವರ ಲಾಕರ್​ನಲ್ಲಿ 570 ಗ್ರಾಮ್ ಚಿನ್ನ, 400 ಗ್ರಾಮ್ ಬೆಳ್ಳಿ ಸಿಕ್ಕಿದ್ದು ಇಷ್ಟರ ಬೆಲೆ ಒಟ್ಟು 15 ಲಕ್ಷ 80 ಸಾವಿರ ರೂ. ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fourteen =
Remember me
