ದಕ್ಷಿಣ ಕನ್ನಡ:ಶಾಲಾ-ಕಾಲೇಜು ಬಳಿ ತಂಬಾಕು ಮಾರಾಟ ನಿಷೇಧಿಸಿದ್ದರೂ, ಅಂಗಡಿಗಳಲ್ಲಿ ನಿಯಮ ಮೀರಿ ಮಾರಾಟ ಮಾಡುತ್ತಿದ್ದ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕೈಕಂಬ ಪಿಲಿಕಜೆ ನಿವಾಸಿ 3ನೇ ತರಗತಿ ವಿದ್ಯಾರ್ಥಿನಿ ಅಯೊರ ‘ವಿಜಯವಾಣಿ’ ಓದುಗರ ವಿಭಾಗಕ್ಕೆ ಬರೆದ ಪತ್ರವನ್ನು ಮುಖ್ಯಮಂತ್ರಿಗಳ ಕಚೇರಿಗೆ ಪತ್ರಿಕೆ ತಲುಪಿಸಿದ ಎರಡು ಗಂಟೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಧಾರ್ವಿುಕ ಕೇಂದ್ರಗಳ ಬಳಿ ತಂಬಾಕು ನಿಷೇಧ ಮಾಡಿದ ವಿಚಾರ ಸೆ.14ರ ವಿಜಯವಾಣಿ ಮುಖಪುಟದಲ್ಲಿ ಪ್ರಕಟವಾಗಿದ್ದು, ಇದನ್ನು ಓದಿದ ಬಾಲಕಿ ಶಾಲೆಗಳಿಂದ 100 ಮೀ. ದೂರದವರೆಗೆ ತಂಬಾಕು ಮಾರಾಟ ಮಾಡಬಾರದೆಂಬುದನ್ನು ತಿಳಿದುಕೊಂಡಿದ್ದಾಳೆ. ಶಾಲೆ ಬಳಿ ತಂಬಾಕು ವಸ್ತುಗಳ ಪೊಟ್ಟಣ ಬಿದ್ದಿರುವುದನ್ನು ಪಾಲಕರಲ್ಲಿ ಹೇಳಿಕೊಂಡಿದ್ದಾಳೆ. ಈ ಸಂದರ್ಭ ಪಾಲಕರು ಅದರಲ್ಲಿ ಹೇಳಿರುವಂತೆ ದೂರು ನೀಡಲು ಸೂಚಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತಳಾದ ಬಾಲಕಿ ಖಾಲಿ ಹಾಳೆ ತೆಗೆದುಕೊಂಡು, ತನ್ನೂರು ಕೈಕಂಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯಿರುವ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದಾರೆ ಮತ್ತು ಅದರ ಪೊಟ್ಟಣ ಶಾಲೆ ಆವರಣದಲ್ಲಿ ಬಿದ್ದಿರುತ್ತದೆ. ನಿಯಮವಿದ್ದರೂ ನಿಷೇಧ ಮಾಡದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ ಸೆ.15ಕ್ಕೆ ಪತ್ರ ಸಿದ್ಧಪಡಿಸಿದ್ದಳು.
ಕವರ್ ಸಮಸ್ಯೆಯಿಂದ ಕಳುಹಿಸಿಲ್ಲ!:ಕೈಕಂಬ ಪ್ರದೇಶ ಗ್ರಾಮೀಣ ಭಾಗವಾದ ಕಾರಣ ಪತ್ರವನ್ನು ಸಂಬಂಧಪಟ್ಟವರಿಗೆ ಕಳುಹಿಸಿಕೊಡಲು ಕವರ್ ಲಭ್ಯವಿರಲಿಲ್ಲ. ಈ ಕಾರಣದಿಂದ ಕೆಲವು ದಿನಗಳಿಂದ ಪತ್ರವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಳು. ಬಳಿಕ ‘ವಿಜಯವಾಣಿ’ ಸಂಪಾದಕೀಯ ವಿಭಾಗಕ್ಕೆ ಪತ್ರ ಕಳುಹಿಸಿದ್ದು, ಅಲ್ಲಿಂದ ಶುಕ್ರವಾರ ಸಾಯಂಕಾಲ 5.30ಕ್ಕೆ ಸಿಎಂ ಸಚಿವಾಲಯದ ಕುಂದುಕೊರತೆ ವಿಭಾಗದ ವಿಶೇಷಾಧಿಕಾರಿ ಡಾ.ವೈಷ್ಣವಿ ಅವರಿಗೆ ರವಾನಿಸಲಾಗಿತ್ತು.
ಪೊಲೀಸ್ ದಾಳಿ:ಸಿಎಂ ಕಚೇರಿಯಿಂದ ಮಾಹಿತಿ ಪೊಲೀಸ್ ಇಲಾಖೆಗೆ ರವಾನೆಯಾಗಿದ್ದು, ಕಡಬ ಎಸ್​ಐ ಅಭಿನಂದನ್ ನೇತೃತ್ವದಲ್ಲಿ ರಾತ್ರಿ 7.30ಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂದರ್ಭ ಶಾಲೆಯಿಂದ 20 ಮೀಟರ್ ದೂರದಲ್ಲಿ ನವೀನ್ ಎಂಬುವರಿಗೆ ಸೇರಿದ ಧನಶ್ರೀ ಫ್ಯಾನ್ಸಿ ಮತ್ತು ಫೂಟ್​ವೇರ್ ಅಂಗಡಿಯಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದು ತಂಬಾಕು ನಿಷೇಧ ಕಾಯ್ದೆಯಡಿ ದಂಡ ವಿಧಿಸಲಾಗಿದೆ.
ಪ್ರತಿಕ್ರಿಯೆಗೆ ಸಂತೋಷ:ಸಿಎಂ ಕಚೇರಿಯಿಂದ ಬಾಲಕಿ ಮನೆಗೆ ಕರೆ ಬಂದಿದ್ದು, ಪತ್ರದ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಪೊಲೀಸ್ ದಾಳಿ ನಡೆದ ವಿಚಾರವೂ ತಿಳಿದಿದೆ. ಪತ್ರಕ್ಕೆ ಇಷ್ಟೊಂದು ತ್ವರಿತಗತಿಯಲ್ಲಿ ಸಿಕ್ಕಿರುವ ಪ್ರತಿಕ್ರಿಯೆಗೆ ಬಾಲಕಿ ಸಂತೋಷಗೊಂಡಿದ್ದಾಳೆ ಎಂದು ತಾಯಿ ಸಾಜಸ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸಾಮಾನ್ಯ ಜ್ಞಾನಕ್ಕೆ ಪತ್ರಿಕೆ:ಮೊಬೈಲ್ ಬಳಕೆ ಹೆಚ್ಚಾದ ಬಳಿಕ ಪತ್ರಿಕೆಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆಂಬ ಮಾತಿದೆ. ಆದರೆ ಈ ಕುಟುಂಬ ಮೊಬೈಲ್ ಬಳಕೆಯನ್ನು ಹೆಚ್ಚಾಗಿ ಮಾಡದೆ ಸಾಮಾನ್ಯ ಜ್ಞಾನಕ್ಕೆ ಪತ್ರಿಕೆಯನ್ನು ಓದುವ ಕಾರ್ಯ ಮಾಡುತ್ತಿದ್ದಾರೆ. ಬಾಲಕಿ ನಿತ್ಯ ಒಂದು ತಾಸು ಪತ್ರಿಕೆಯನ್ನು ಓದುವುದನ್ನು ಅಯೊರ ರೂಢಿಸಿಕೊಂಡಿದ್ದಾಳೆ.
ನಾನು ವಿಜಯವಾಣಿ ಓದುವಾಗ ನನ್ನಲ್ಲಿ ಮೂಡುವ ಪ್ರಶ್ನೆಗಳಿಗೆ ನನ್ನ ಇಂಗ್ಲಿಷ್ ಮೇಡಂ ಉತ್ತರ ಕೊಟ್ಟು ಅರ್ಥ ಮಾಡಿಸುತ್ತಾರೆ. ದಿನಪತ್ರಿಕೆಯಿಂದಾಗಿ ಹುಟ್ಟಿದ ಪ್ರಶ್ನೆಗಳಿಗೆ ಅಂತನೇ ಒಂದು ಪುಸ್ತಕ ಇದೆ ನನ್ನ ಜೊತೆ. ನನಗೆ ವಿಜಯವಾಣಿಯ ಸಂಪಾದಕರಿಂದ ಮತ್ತು ಮುಖ್ಯಮಂತ್ರಿಗಳ ಕಚೇರಿಯಿಂದ ಫೋನ್ ಬಂದದ್ದಕ್ಕೆ ತುಂಬಾ ಖುಷಿ ಆಗಿದೆ.
| ಅಯೊರ 3ನೇ ತರಗತಿ ವಿದ್ಯಾರ್ಥಿನಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × three =
Remember me
