ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಂತ್ರಜ್ಞಾನ ಆಧಾರಿತ ‘ಗೆಟ್​ಸೆಟ್​ಗೊ’ ಆನ್​ಲೈನ್ ಕೋಚಿಂಗ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕೋವಿಡ್-19ರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ಆನ್​ಲೈನ್ ತರಬೇತಿಯೊಂದೆ ಈ ಸಮಸ್ಯೆಗೆ ಪರಿಹಾರ ಎಂದು ಸರ್ಕಾರ ಮನಗಂಡಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹಕ್ಕೆ ಸಹಕಾರ ನೀಡುವುದರೊಂದಿಗೆ ಆತ್ಮಸ್ಥೈರ್ಯ ತುಂಬುವುದು ಮುಖ್ಯವಾಗಿದೆ ಎಂದರು.
ಸಿಇಟಿ, ನೀಟ್​ಗೆ ತಯಾರಾಗುತ್ತಿರುವ ವಿದ್ಯಾರ್ಥಿಗೆ ಈ ಆನ್​ಲೈನ್ ಕೋಚಿಂಗ್ ವರದಾನವಾಗಲಿದೆ. ಕೆಸಿಇಟಿ, ನೀಟ್​ಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಈ ವೇದಿಕೆಯನ್ನು ಉಚಿತವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ಇಂಥ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ ಒಟ್ಟು 1.94 ಲಕ್ಷ ವಿದ್ಯಾರ್ಥಿಗಳು ಇದರ ಲಾಭ
ಪಡೆಯಬಹುದು. ಕಳೆದ 5 ತಿಂಗಳಿಂದ ಇದರ ತಯಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅದು ವಿದ್ಯಾರ್ಥಿಗಳ ನೆರವಿಗೆ ಬಂದಿದೆ ಎಂದರು.
ರಾಷ್ಟ್ರಮಟ್ಟದಲ್ಲಿ ನೀಟ್ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.15 ಸೀಟ್ ಲಭ್ಯವಿದ್ದು, ಈ ಉತ್ತಮ ಅವಕಾಶ ಪಡೆದುಕೊಳ್ಳಲು ಅನುಕೂಲವಾಗುವಂತೆ ನಮ್ಮ ವಿದ್ಯಾರ್ಥಿಗಳಿಗೆ ಸರ್ಕಾರ ಆನ್​ಲೈನ್ ತರಬೇತಿಯ ಸೌಕರ್ಯ ಕಲ್ಪಿಸಿದೆ ಎಂದು ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಒಟ್ಟು 80 ಲಕ್ಷ ರೂ. ವೆಚ್ಚವಾಗಿದೆ. ಅಂದರೆ, ಪ್ರತಿ ವಿದ್ಯಾರ್ಥಿಯ ಕಲಿಕೆಗೆ ಕೇವಲ 40 ರೂ. ವೆಚ್ಚವಾಗುತ್ತದೆ. ದುಬಾರಿ ಶುಲ್ಕದ ವಿಶೇಷ ಕೋಚಿಂಗ್ ಪಡೆಯಲಾಗದ ಬಡ ವಿದ್ಯಾರ್ಥಿಗಳು ಈ ಕೋರ್ಸ್​ನಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಮುಖ್ಯಾಂಶಗಳು
ಕೆಸಿಇಟಿ- 2020 ಪರೀಕ್ಷೆಗೆ ಹೆಸರು ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಈ ಆನ್​ಲೈನ್ ಕೋರ್ಸ್ ಉಚಿತವಾಗಿ ಲಭ್ಯ.
ಸಿಂಚು ಇನ್ಪೋಟೆಕ್ ಮತ್ತು ದೀಕ್ಷಾ ಆನ್​ಲೈನ್ ಪರೀಕ್ಷೆಗೆ ಪೂರಕವಾದ ಎಲ್ಲ ಕಲಿಕಾ ವಿಷಯ ಒಳಗೊಂಡಿರುವ ವೆಬ್ ಪೋರ್ಟಲ್ ಮತ್ತು ಆಂಡ್ರಾಯ್್ಡ ಆಪ್ ಅಭಿವೃದ್ಧಿ.
ಕ್ರಾ್ಯಶ್ ಕೋರ್ಸ್​ನಲ್ಲಿ ಪಠ್ಯ ಸಾರಾಂಶ, ಅಭ್ಯಾಸ ಪ್ರಶ್ನೆಗಳು, ಪ್ರತಿ ಅಧ್ಯಾಯದ ಪರೀಕ್ಷೆಗಳು, ಅಣಕು ಪರೀಕ್ಷೆಗಳು, ಪುನರಾವರ್ತನೆ ವೀಡಿಯೋ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಪರೀಕ್ಷೆಗಳ ಸಾಧನೆ ಮಾಹಿತಿ, ವಿಶ್ಲೇಷಣೆ ಇತರ ಬಳಕೆದಾರರ ಶ್ರೇಯಾಂಕವನ್ನು ತಮ್ಮ ಸಾಧನೆ ಜತೆಗೆ ಹೋಲಿಕೆ.
ಪುನರಾವರ್ತನೆ ವಿಡಿಯೋಗಳು ಯೂಟ್ಯೂಬ್ ಚಾನಲ್​ನಲ್ಲಿ ಲಭ್ಯ. ಯುಟ್ಯೂಬ್​ನಲ್ಲಿ ನೇರವಾಗಿ ಚಾನಲ್​ಗೆ ಹೋಗಿಯೂ ವೀಡಿಯೋಗಳನ್ನು ಸಬ್​ಸ್ಕ್ರೈಬ್ ಮಾಡಿ ವೀಕ್ಷಣೆ.
VIDEO|ಪಾಸ್ ಇಲ್ಲದಿದ್ದರೂ ಆಟೋದಲ್ಲಿ ಹೋಗುತ್ತಿದ್ದ ಮಹಿಳೆ: ಪ್ರಶ್ನಿಸಿದ್ದಕ್ಕೆ ಪೊಲೀಸರಿಗೇ ಆವಾಜ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + sixteen =
Remember me
