ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಸಕ ಜಮೀರ್​ ಅಹ್ಮದ್​ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕೃಷ್ಣಾದಲ್ಲಿ ಮಾತನಾಡಿದ ಅವರು, ಪಾದರಾಯನಪುರದಲ್ಲಿ ನಡೆದ ಗೂಂಡಾಗಿರಿಯ ಬಗ್ಗೆ ನಿನ್ನೆ ರಾತ್ರಿಯಿಡೀ ಚರ್ಚೆಯಾಗಿದೆ. ಯಾರ ಆರೋಗ್ಯ ಕಾಪಾಡಲು ಕಾಳಜಿ ವಹಿಸಿದ್ದೆವೋ ಅವರೇ ಗಲಭೆ ಸೃಷ್ಟಿಸಿದ್ದಾರೆ. ಇದನ್ನು ಸಹಿಸುವುದಿಲ್ಲ. ಆರೋಪಿಗಳ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬಹುದೋ ಅದನ್ನೆಲ್ಲ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಗೂಂಡಾ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್​ ಎಂಬ ಪ್ರಶ್ನೆಯಲ್ಲ. ಯಾರು ತಪ್ಪು ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ.
ಪಾದರಾಯನಪುರಕ್ಕೆ ರಾತ್ರಿ ಹೋಗಬಾರದಿತ್ತು. ಆದರೂ ನನ್ನ ಗಮನಕ್ಕೆ ತರದೆ ಆರೋಗ್ಯಾಧಿಕಾರಿಗಳು, ಪೊಲೀಸರು ಹೋಗಿದ್ದಾರೆ ಎಂದು ಶಾಸಕ ಜಮೀರ್​ ಅಹ್ಮದ್​​ ಹೇಳಿದ್ದರ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿ ಒಮ್ಮೆಲೇ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಯಾರ್​ ರೀ..? ಅವರಿಗೆ ಏನ್​ ಸಂಬಂಧ? ಜಮೀರ್​ ಯಾರು ನಮಗೆ ಹೇಳೋದಿಕ್ಕೆ..ನಮ್ಮ ಕೆಲಸ ಮಾಡಲು ಜಮೀರ್​ ಅಹ್ಮದ್​ ಅಪ್ಪಣೆ ಬೇಕಾ? ಅವರಿಗೂ, ಇದಕ್ಕೂ ಏನು ಸಂಬಂಧ ಎಂದು ಕಟುವಾಗಿ ಪ್ರಶ್ನಿಸಿದರು.ಅವರು ಈ ರೀತಿ ನೀಡ್ತಿರೋ ಹೇಳಿಕೆಯಿಂದ ನಾವೇನು ಅಂದುಕೊಳ್ಳಬೇಕು? ಗಲಾಟೆಗೆ ಅವರೇ ಪ್ರಚೋದನೆ ನೀಡುತ್ತಿದ್ದಾರೆಂದು ಭಾವಿಸಬೇಕಾ..ಶಾಸಕರಾಗಿ ಅವರು ಮೊದಲು ಜನರಿಗೆ ತಿಳಿವಳಿಕೆ ಹೇಳಲಿ. ಅದರ ಬದಲು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ಜಮೀರ್ ಅವರದ್ದು ಬೇಜವಾಬ್ದಾರಿಯ ಪರಮಾವಧಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://www.instagram.com/p/B_Mye0XH-RR/
ಮುಧೋಳ, ಜಮಖಂಡಿಯಲ್ಲಿ ಹೆಚ್ಚಾಗಿದೆ ಕರೊನಾ ಭೀತಿ; ರಸ್ತೆಗಳಿಗೆ ಕಲ್ಲು, ಮಣ್ಣು ಸುರಿಯುತ್ತಿರುವ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
