ದಾವಣಗೆರೆ: ಇನ್ನು 15 ಕೆಎಸ್​ಆರ್​ಟಿಸಿ ಬಸ್​ ಚಲಾಯಿಸುತ್ತೇನೆ. ಯಾರು ನೋಟಿಸ್​ ಕೊಡ್ತಾರೆ ನಾನೂ ನೋಡ್ತೀನಿ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಇತ್ತೀಚೆಗೆ ಚಾಲಕರ ವಸ್ತ್ರ ಧರಿಸಿ ಕೆಎಸ್​ಆರ್​ಟಿಸಿ ಬಸ್​ ಚಲಾಯಿಸಿದ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಡಿಸಿ ನೋಟಿಸ್​ ಜಾರಿ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೆಎಸ್​ಆರ್​ಟಿಸಿ ಡಿಸಿಗೆ ಇವೆಲ್ಲಾ ಸರಿ ಇರಲ್ಲ ಎಂದು ಹೇಳಿದ್ದೇನೆ. ಇನ್ನೂ 15 ಬಸ್ ಬಿಡಿಸುತ್ತೇನೆ, ಹಾಗೂ ಬಸ್ ಚಲಾಯಿಸುತ್ತೇನೆ. ಎತ್ತಿನಗಾಡಿಯಿಂದ 10 ಚಕ್ರ ಹೊಂದಿರುವ ಲಾರಿಯನ್ನು ಚಲಾಯಿಸಿದ್ದೇನೆ. ಈ ಆತ್ಮ ವಿಶ್ವಾಸದಿಂದ ಮೊನ್ನೆ ಕೆಎಸ್​ಆರ್​ಟಿಸಿ ಬಸ್​ ಓಡಿಸಿದ್ದೇನೆ. ನಾನು ಬಸ್​ ಚಲಾಯಿಸುವುದನ್ನು ಮಹಿಳೆಯರು ಶಿಳ್ಳೆ ಹೊಡೆದು ಸ್ವಾಗತಿಸಿದ್ದಾರೆ. ಕಾನೂನಿಗೆ ಗೌರವ ಕೊಡುತ್ತೇನೆ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
