ಚಿಕ್ಕಮಗಳೂರು:ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಸಾಮಾಜಿಕ ಜಾಲತಾಣವನ್ನೇ ತನ್ನ ಜಗತ್ತಾಗಿಸಿಕೊಂಡಿದ್ದ ಹುಡುಗಿ ಇದೀಗ ಬಾರದ ಲೋಕಕ್ಕೆ ಹೋಗಿದ್ದಾಳೆ. ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮನೆಯವರು ಹೇಳಿದರೂ ಸಹ ಪೊಲೀಸರಿಗೆ ಸಣ್ಣ ಅನುಮಾನ ಬಂದು ತನಿಖೆ ನಡೆಸಲು ಮುಂದಾಗಿದ್ದಾರೆ.
ಸಿಂಧೂ ಮೃತ ದುರ್ದೈವಿ. ಕಾಫಿನಾಡು ಚಿಕ್ಕಮಗಳೂರು ನಗರದ ಕಲ್ಯಾಣನಗರದ ನಿವಾಸಿ. ದ್ವಿತೀಯ ಪಿಯುಸಿಯಲ್ಲಿ ಫೇಲ್ ಅಗಿ ಸಿಂಧೂ ಮನೆಯಲ್ಲಿಯೇ ಇದ್ದಳು. ಓದುವುದರಲ್ಲಿ ಆಸಕ್ತಿ ಹೊಂದಿರದ ಆಕೆಯ ಮನಸ್ಸು ಸಾಮಾಜಿಕ ಜಾಲತಾಣದ ಮೇಲೆ ಸೆಳೆದಿತ್ತು. ಹೀಗಾಗಿಯೇ ಜಾಲತಾಣದಲ್ಲಿ ಸದಾ ಬಿಜಿಯಾಗಿರುತ್ತಿದ್ದಳು. ಅದರಲ್ಲೂ ಟಿಕ್​ಟಾಕ್​ನಲ್ಲಿ ಸಂಪೂರ್ಣ ಸಮಯ ಕಳೆಯುತ್ತಿದ್ದಳು. ಯಾವಾಗ ಟಿಕ್​ಟಾಕ್ ಬ್ಯಾನ್​ ಆಯ್ತೋ ಆವಾಗ ಆಕೆಯ ಗಮನ ರೋಪೋಸ್ ಮತ್ತು ಫೇಸ್​ಬುಕ್​ ಮೇಲೆ ಬಿತ್ತು. ವಿಡಿಯೋಗಳನ್ನು ಹರಿಬಿಟ್ಟು ಸಾವಿರಾರು ಲೈಕ್ ಪಡೆಯುತ್ತಿದ್ದ ಸಿಂಧೂ ನಿನ್ನೆಯಷ್ಟೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ:13 ಜಿಲ್ಲೆಗಳಲ್ಲಿ ಕೈ ಮೀರಿದ ಕರೊನಾ: ಸೋಂಕು ಪಾಸಿಟಿವಿಟಿ ದರ ಏರಿಕೆ
ಸಿಂಧೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ದೂರು ನೀಡಿದ್ದಾರೆ. ಆದರೆ, ದೂರು ಸ್ವೀಕರಿಸಿದ ಪೊಲೀಸರಿಗೆ ಅನುಮಾನವೊಂದು ಕಾಡತೊಡಗಿದೆ. ಇತ್ತ ಸಿಂಧೂ ತಲೆಗೆ ಪೆಟ್ಟಾಗಿರುವ ಮಾಹಿತಿ ಸಿಗುತ್ತಿದ್ದಂತೆ ಮೃತದೇಹವನ್ನು ಚಿಕ್ಕಮಗಳೂರಿನಲ್ಲಿ ಶವಪರೀಕ್ಷೆ ಮಾಡೋದು ಬೇಡ ಹಾಸನಕ್ಕೆ ಕಳುಹಿಸಿ ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷೆ ನಡೆಸಲು ಪೊಲೀಸ್​ ವರಿಷ್ಠಾಧಿಕಾರಿ ಸೂಚಿಸಿದ್ದಾರೆ. ಈಗಾಗಲೇ ಹಾಸನದಲ್ಲಿ ಶವಪರೀಕ್ಷೆ ನಡೆದಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಲೈಕ್ ಪಡೆಯುತ್ತಿದ್ದ ಸಿಂಧೂ ಸಾವಿನ ದಡ ಸೇರಿದ್ದಾಳೆ. ಅತ್ಮಹತ್ಯೆಯೇ ಮಾಡಿಕೊಂಡಿದ್ದಾಳೆ ಅನ್ನೋದು ಬಹುತೇಕ ಖಚಿತವಾಗುವ ಸಾಧ್ಯತೆಯು ಇದೆ ಎನ್ನಲಾಗುತ್ತಿದೆ. ಆದ್ರೆ ಆಕೆಯ ತಲೆಗಾದ ಗಾಯದ ಹಿಂದೆನೂ ನಡೆಯಿತು ಅನ್ನೋ ಮಾತ್ರ ನಿಗೂಡವಾಗಿಯೇ ಇದೆ.(ದಿಗ್ವಿಜಯ ನ್ಯೂಸ್​)
https://www.vijayavani.net/%e0%b2%b0%e0%b2%bf%e0%b2%af%e0%b2%be-%e0%b2%9a%e0%b2%95%e0%b3%8d%e0%b2%b0%e0%b2%b5%e0%b2%b0%e0%b3%8d%e0%b2%a4%e0%b2%bf-%e0%b2%95%e0%b3%81%e0%b2%b0%e0%b2%bf%e0%b2%a4%e0%b3%81-%e0%b2%ac%e0%b2%af/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + twelve =
Remember me
