ಚಿಕ್ಕಬಳ್ಳಾಪುರ:ಕರೊನಾ ವೈರಸ್​ ನಿಯಂತ್ರಿಸಲು ಹೇರಲಾಗಿದ್ದ ಲಾಕ್​ಡೌನ್​ ಸಮಯವನ್ನು ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಒಬ್ಬಳ ಜತೆ ಲವ್ವಿ ಡವ್ವಿ ನಡೆಸಿ, ಮತ್ತೊಬ್ಬಳ ಜತೆ ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:PHOTO GALLERY| ಪಾರುಲ್​ಗೆ ಬರ್ತಡೇ ಖುಷಿ​: ಬಚ್ಚನ್​ ಬ್ಯೂಟಿಯ ಹಾಟ್​ ಫೋಟೋ ನೋಡಿದ್ರೆ ಪ್ಯಾರ್​ಗೆ ಆಗ್ಬಿಡುತ್ತೆ!
ಪ್ರೇಮದ ಹೆಸರಲ್ಲಿ‌ ಪಲ್ಲಂಗದಾಟವಾಡಿದ‌ ವಂಚಕನ ಹೆಸರು ‌ಪ್ರಮೋದ್ ಕುಮಾರ್. ಈತ ಚಿಕ್ಕಬಳ್ಳಾಪುರ ತಾಲ್ಲೂಕು ಮರಸನಹಳ್ಳಿಯ ನಿವಾಸಿ. ಪ್ರೀತಿಯ ಹೆಸರಲ್ಲಿ ಮದುವೆಯಾಗುವುದಾಗಿ ತಮಿಳುನಾಡು ಮೂಲದ ನರ್ಸ್​ ಒಬ್ಬರನ್ನು ನಂಬಿಸಿ, ಆಕೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಅಲ್ಲದೆ, ಮೂರು ಬಾರಿ ಗರ್ಭಪಾತ ಕೂಡ ಮಾಡಿಸಿದ್ದಾನೆ ಎಂಬ ಆರೋಪ ಪ್ರಮೋದ್​ ವಿರುದ್ಧ ಕೇಳಿಬಂದಿದೆ.
ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಇದೇ ಸೂಕ್ತ ಸಮಯ ಅಂದುಕೊಂಡು ಪ್ರಮೋದ್​ ಮತ್ತೊಬ್ಬಳ ಜತೆ ಗುಟ್ಟಾಗಿ ಮದುವೆಯಾಗಿದ್ದಾನೆಂದು ನರ್ಸ್ ಗಂಭೀರ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ:ಗರ್ಭಿಣಿ ಆನೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ: ಮರಣೋತ್ತರ ವರದಿಯಲ್ಲಿ ನೋವಿನ ಸಂಗತಿ
ನರ್ಸ್​ ಪರಿಚಯ ಹೇಗೆ?ಚಿಕ್ಕಬಳ್ಳಾಪುರ ನಗರದ ಖಾಸಗಿ ಕ್ಲಿನಿಕ್​ನಲ್ಲಿ ಪ್ರಮೋದ್ ಕುಮಾರ್ ಮತ್ತು ನರ್ಸ್​ ಕೆಲಸ ಮಾಡುತ್ತಿದ್ದಾಗ ಇಬ್ಬರ ನಡುವೆ ಪರಿಚಯವಾಗಿತ್ತು. ಬಳಿಕ ಪ್ರೇಮಾಂಕುರವಾಗಿತ್ತು. ಪ್ರೇಯಸಿಯನ್ನು ಪ್ರಮೋದ್​ ಕುಟುಂಬದವರಿಗೆ ಪರಿಚಯ ಮಾಡಿ ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ನಡೆಸಿ, ಮೂರನೇ ಬಾರಿ ಗೊತ್ತಿಲ್ಲದಂತೆ ಟ್ಯಾಬ್ಲೆಟ್ ಕೊಟ್ಟು ಅಬಾರ್ಷನ್ ಮಾಡಿಸಿದ್ದ ಎನ್ನಲಾಗಿದೆ.
ಆತ್ಮಹತ್ಯೆ ಬೆದರಿಕೆಚಿಕ್ಕಬಳ್ಳಾಪುರಕ್ಕೆ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಮೋದ್ ಬೆದರಿಕೆಯೊಡ್ಡಿದ್ದ ಎಂದು ನರ್ಸ್​ ತಿಳಿಸಿದ್ದಾಳೆ. ಅಲ್ಲದೆ, ಮದುವೆಯಾಗುತ್ತೇನೆಂದು ಲಕ್ಷ ಲಕ್ಷ ಹಣ ಪೀಕಿದ್ದಾನೆಂದು ದೂರಿದ್ದಾಳೆ. ಇದೀಗ ಪ್ರಮೋದ್​ ಪೊಲೀಸರ ವಶವಾಗಿದ್ದಾನೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಬೇಡಮ್ಮ ಆನ್​ಲೈನ್ ಗುಮ್ಮ: ತಜ್ಞರು, ವೈದ್ಯರು, ನಟರ ಆಕ್ರೋಶ, ಇಲಾಖೆಯಲ್ಲೇ ಆಕ್ಷೇಪ
ಆನ್​ಲೈನ್​ ಕ್ಲಾಸ್​ ತೆಗೆದುಕೊಂಡಿದ್ದ ಶಿಕ್ಷಕಿ ವಿರುದ್ಧ ಅಸಭ್ಯ ಕಾಮೆಂಟ್: ಜಾಲತಾಣದಲ್ಲಿ ಫೋಟೋ ವೈರಲ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
