ಚಿಕ್ಕಬಳ್ಳಾಪುರ:ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅನೆಮಡುಗು ಗ್ರಾಮದಲ್ಲಿ 9 ತಿಂಗಳ ತುಂಬು ಗರ್ಭಿಣಿಯನ್ನ ಭಾವನೊರ್ವ ಮಚ್ಚಿನಿಂದ ಕೊಚ್ಚಿ ಕೊಲೆ‌ ಮಾಡಿದ್ದಾನೆ.
ಜ್ಯೋತಿ(26) ಕೊಲೆಯಾದ ಮಹಿಳೆ. 40 ವರ್ಷದ ಹರೀಶ್ ಬಾಬು ಕೊಲೆ ಮಾಡಿದ ಪಾಪಿ. ಒಂದೇ ಮನೆಯಲ್ಲಿ ಜ್ಯೋತಿ ಹಾಗೂ ಈಕೆಯ ಗಂಡ ಅತ್ತೆ-ಮಾವ ಸೇರಿದಂತೆ ಆರೋಪಿ ಭಾವನೂ ವಾಸವಿದ್ದ. ಜ್ಯೋತಿಯ ಗಂಡ ಮಗಳ ಮನೆಗೆ ಚಿಂತಾಮಣಿಗೆ ಹೋಗಿದ್ದ ತಾಯಿಯನ್ನು ಕರೆ ತರೋಕೆಂದು ಹೋಗಿದ್ದ. ಇದೇ ವೇಳೆ ಮಾವ ತೋಟದ ಮನೆ ಬಳಿ ಇದ್ದರು ಎನ್ನಲಾಗಿದೆ.
ಇದನ್ನೂ ಓದಿ:ಸರ್ಕಾರಿ ನೌಕರರ ತುಟ್ಟಿಭತ್ಯೆಗೆ ತಡೆ, ಗಳಿಕೆ ರಜೆಯೂ ರದ್ದು
ಈ ವೇಳೆ ಮನೆಯಲ್ಲಿ ಏಕಾಂಗಿಯಾಗಿದ್ದ ಜ್ಯೋತಿ ಜತೆ ವಿನಾಕಾರಣ ನನಗೆ ಬಟ್ಟೆ ಒಗೆದುಕೊಡಲ್ಲ. ಸರಿಯಾಗಿ ನೋಡಿಕೊಳ್ಳಲ್ಲ ಎಂದು ತಗಾದೆ ತೆಗೆದಿರೋ ಪಾಪಿ ಹರೀಶ್ ಬಾಬು ತುಂಬು ಗರ್ಭಿಣಿ ಎಂದು ನೋಡದೇ ಮಚ್ಚಿನಿಂದ ತಲೆಗೆ ಬಲವಾಗಿ ಹೊಡೆದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ‌.
ಅದೇ ಗ್ರಾಮದ ಜ್ಯೋತಿ ತಾಯಿ ಮಗಳನ್ನು ನೋಡೊಕೆ ಅಂತ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಜ್ಯೋತಿ ಕೊನೆಯುಸಿರಿನಲ್ಲಿ ವಿಲ ವಿಲ ಒದ್ದಾಡುತ್ತಿದ್ಲಂತೆ. ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತಂದರೂ, ಅಷ್ಟರಲ್ಲೇ ಜ್ಯೋತಿ ಕೊನೆಯುಸಿರುಳೆದಿದ್ದಾಳೆ.
ಇದನ್ನೂ ಓದಿ:ಹಾದಿ ತಪ್ಪಿದ್ರೆ ಕಿಕ್​ಔಟ್, ರಾಜ್ಯದ ಸರ್ಕಾರಿ ನೌಕರರಿಗೆ ಸಿದ್ಧವಾಗುತ್ತಿದೆ ಮೂಗುದಾರ
ಜ್ಯೋತಿ ಗಂಡ ರೈಲ್ವೈ ಇಲಾಖೆ ಉದ್ಯೋಗಿಯಾಗಿದ್ದು, 8 ವರ್ಷಗಳ ನಂತರ ಮಗು ಆಗುತ್ತಿದ್ದ ಸಂತಸದಲ್ಲಿ ಮನೆ ಮಂದಿಯೆಲ್ಲಾ ಇದ್ದರು. ಇನ್ನೂ 10-12 ದಿನಗಳಲ್ಲಿ ಜ್ಯೋತಿಗೆ ಹೆರಿಗೆಯಾಗುವ ದಿನಾಂಕ ಸಹ ವೈದ್ಯರು ನೀಡಿದ್ರಂತೆ. ಚಿಂತಾಮಣಿಗೆ ಹೋಗಿದ್ದ ಗಂಡ ಸಹ ತನಗೆ ಸೀಮಂತಕ್ಕೆ ತರುವುದಾಗಿ ಹೇಳಿ ಹೋಗಿದ್ನಂತೆ. ಆದರೆ, ಅಷ್ಟರಲ್ಲೇ ಭಾವ ನಾದಿನಿಯ ಪ್ರಾಣವನ್ನು ಬಲಿ ಪಡೆದುಬಿಟ್ಟಿದ್ದಾನೆ. ಸದ್ಯ ಪಾಪಿ ಭಾವ ಹರೀಶ್ ಬಾಬು ನನ್ನ ದಿಬ್ಬೂರಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಭಾರತದ ಸ್ಪಷ್ಟ ನಿಲುವು, ಪಾಕಿಸ್ತಾನದ ವಿವೇಕಹೀನ ವರ್ತನೆಗೆ ತಕ್ಕ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
