ಚಿಕ್ಕಬಳ್ಳಾಪುರ:ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲ್ಲೂಕು ಯಗವ ಮದ್ದಲಖಾನೆ ಬಳಿ ನಡೆದಿದೆ.
ಹರೀಶ್ (25) ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಗಣೇಶ್ ಎಂಬುವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಪ್ರೇಯಸಿಯನ್ನು ಕೊಂದ ವ್ಯಕ್ತಿ ನೇಣಿಗೆ ಶರಣಾಗಿದ್ದೇಕೆ?
ವೆಂಕಟೇಶ್ ಮಗಳು ಸಿರೀಶಾ ಹಾಗೂ ಹರೀಶ್​ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ವಿವಾಹಕ್ಕೆ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ಇದೇ ಕಾರಣದಿಂದ ಮನನೊಂದು ಸಿರೀಶಾ ವರ್ಷದ ಹಿಂದೆ ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು.
ಮಗಳ ಸಾವಿಗೆ ಹರೀಶ್ ಕಾರಣವೆಂದು ಹೊಂಚು ಹಾಕಿ ಸಿರೀಶಾ ತಂದೆ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಸದ್ಯ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪತ್ನಿ, ಮಗಳಿಗೆ ವಿಷ ನೀಡಿ ನೇಣಿಗೆ ಶರಣಾದ ವ್ಯಕ್ತಿ: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು
ವೆಂಕಟೇಶ್​ ಮನೆ ಮುಂದೆ ಗಲಾಟೆಕೊಲೆ ಮಾಡಿದ ವೆಂಕಟೇಶ್ ಮನೆ ಮುಂದೆ ಹರೀಶ್​ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಮನೆ ಬಾಗಿಲು ಹಾಗೂ ಕಿಟಕಿ ಗಾಜು ಹೊಡೆದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.(ದಿಗ್ವಿಜಯ ನ್ಯೂಸ್​​)
ಚೀನಾ ಸೇನೆ ಹಿನ್ನೆಲೆ ಇದ್ದರೂ ಅಮೆರಿಕದಲ್ಲಿ ಸಂಶೋಧನೆ; ಮಾಹಿತಿ ಬಚ್ಚಿಟ್ಟಿದ್ದಕ್ಕೆ ಮೂವರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
