ಚಿಕ್ಕಬಳ್ಳಾಪುರ:ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಮದ್ಯ ಸಿಗದೇ ಪರದಾಡಿದ್ದ ಮದ್ಯ ಪ್ರಿಯರಿಗೆ ಸೋಮವಾರದಿಂದ ಆಲ್ಕೋಹಾಲ್​ ಲಭ್ಯವಾಗುತ್ತಿದ್ದು, ತುಂಬಾ ಖುಷಿಯಾಗಿದ್ದಾರೆ. ಆದರೆ, ಗುಂಡಿನ ಮತ್ತೇ ಗಮ್ಮತ್ತು ಅಳತೆ ಮೀರಿದರೆ ಆಪತ್ತ ಎಂಬಂತೆ ಅನೇಕ ಅನಾಹುತಗಳಿಗೂ ಮದ್ಯ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ:ಮನೆಯ ಧೂಳು ತುಂಬಾ ಡೇಂಜರ್​: ಸಂಶೋಧನೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ
ಚಿಕ್ಕಬಳ್ಳಾಪುರದಲ್ಲಿ ಮದ್ಯಪಾನಕ್ಕೆ ಮೊದಲ ಬಲಿಯಾಗಿದೆ. ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದ ನಿವಾಸಿ ವಿನೋದ್ ಗೌಡ (34) ಕಂಠಪೂರ್ತಿ ಮದ್ಯ ಸೇವಿಸಿ, ಅದರ ಮತ್ತಿನಲ್ಲಿ ಕಾರಿನಲ್ಲಿ ಬೇಕಾಬಿಟ್ಟಿ ಸುತ್ತಾಡಿ ತಮ್ಮ ಸಾವನ್ನು ತಾವೇ ತಂದುಕೊಂಡಿದ್ದಾರೆ.
ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ, ಮನೆಯೊಂದರ ಕಾಂಪೌಂಡ್​ಗೆ ಡಿಕ್ಕಿ ಹೊಡೆದು ವಿನೋದ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ವಿನೋದ್​ ಲಾಕ್​ಡೌನ್​ನಿಂದಾಗಿ ಗ್ರಾಮಕ್ಕೆ ಬಂದಿದ್ದ, ಆದರೆ, ಅತಿಯಾದ ಮದ್ಯ ಸೇವನೆಯಿಂದ ದುರಂತ ಸಾವಿಗೀಡಾಗಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಒಟಿಪಿ ಕೊಡದಿದ್ರೂ ಖಾತೆಗೆ ಬೀಳುತ್ತೆ ಕನ್ನ !
ಎಚ್ಚರ ತಪ್ಪಿದರೆ ಕಂಟಕ! ಕರೊನಾ ಆತಂಕ ಉಲ್ಬಣ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 15 =
Remember me
