ಚಿಕ್ಕಬಳ್ಳಾಪುರ:ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್, ಸರ್ಕಾರಿ ನೌಕರರು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಕ್ರಿಕೆಟ್ ಪಂದ್ಯಗಳನ್ನಾಡುವ ಮೂಲಕ ಉಲ್ಲಾಸಗೊಂಡರೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಮಂಗ್ಲಿ ಅವರ ಸೂಪರ್ ಹಿಟ್ ಹಾಡುಗಳ ಗಾಯನಕ್ಕೆ ಜನ ಮೂಕವಿಸ್ಮಿತರಾದರು.
ಜ.7ರಿಂದ ಪ್ರಾರಂಭವಾಗಿರುವ ಚಿಕ್ಕಬಳ್ಳಾಪುರ ಉತ್ಸವ ಪ್ರತಿನಿತ್ಯ ಕ್ರೀಡೆ ಮತ್ತು ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳಿಂದ ಗಮನ ಸೆಳೆಯುತ್ತಿರುವುದರ ನಡುವೆ ನಾಲ್ಕನೇ ದಿನದ ವಿವಿಧ ಕಾರ್ಯಕ್ರಮಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು. ನಟಿ ಅನುಶ್ರೀ ನಿರೂಪಣೆಯೊಂದಿಗೆ ಸಂಜೆಯ ಉತ್ಸವವು ಆಕರ್ಷಣೆಯ ರಂಗು ಪಡೆದುಕೊಂಡಿತು.
ಕ್ರೀಡಾಪಟುಗಳಾದ ಅಧಿಕಾರಿಗಳು:ನಗರದ ಸಿವಿವಿ ಕ್ಯಾಂಪಸ್​ನಲ್ಲಿ ಮಂಗಳವಾರ ಕ್ರೀಡಾಕೂಟದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಕಂದಾಯ, ಪೊಲೀಸ್, ಜಿಲ್ಲಾಡಳಿತ ಭವನ, ತಾಲೂಕು ಆಡಳಿತ, ಸರ್ಕಾರಿ ನೌಕರರ ಸಂಘ ಸೇರಿ ಟೂರ್ನಿಗೆ 24 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದವು. ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ಸಿಬ್ಬಂದಿ ಎಂಬ ಭೇದ ತೋರದೆ ಉತ್ಸಾಹದಿಂದ ಕ್ರಿಕೆಟ್ ಆಡಿ ಗಮನ ಸೆಳೆದರು. ಪೈಪೋಟಿಯಲ್ಲಿ ತಂಡಗಳು ಗೆಲುವನ್ನು ತಮ್ಮದಾಗಿಸಿಕೊಳ್ಳಲು ಕಸರತ್ತು ನಡೆಸಿದವು. ಆಗಾಗ ಹಿರಿಯ ಅಧಿಕಾರಿಗಳು ವೈಯಕ್ತಿಕವಾಗಿ ಬಹುಮಾನ ಘೊಷಿಸಿ ತಮ್ಮ ಗುಂಪಿನ ಕ್ರೀಡಾಪಟುವಿಗೆ ಉತ್ಸಾಹ ತುಂಬಲು ಯತ್ನಿಸಿದರು. ಕೊನೆಗೆ ಗೆಲ್ಲುತ್ತಿದ್ದಂತೆ ಸಹೋದ್ಯೋಗಿಗಳು ಕುಣಿದು ಕುಪ್ಪಳಿಸಿದರು. ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪಂದ್ಯಾವಳಿಗಳನ್ನು ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಅಭಿವೃದ್ಧಿಯ ಸಂಭ್ರಮದ ಉತ್ಸವ ಸಂದರ್ಭದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟವು ಕೆಲಸದ ಒತ್ತಡವನ್ನು ನಿವಾರಿಸುವಲ್ಲಿ, ಪರಸ್ಪರ ಬಾಂಧವ್ಯ ವೃದ್ಧಿ ಮತ್ತು ಉತ್ತಮ ಕರ್ತವ್ಯ ನಿರ್ವಹಣೆಗೆ ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮತ್ತಿತರರು ಇದ್ದರು.
ಸುಧಾಕರ್ ಮಾದರಿಯ ವ್ಯಕ್ತಿ:ರಾಜ್ಯದ 224 ಕ್ಷೇತ್ರಗಳಲ್ಲೂ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಅವರಂತಹ ಮಾದರಿ ವ್ಯಕ್ತಿಗಳು ಅಧಿಕಾರಕ್ಕೆ ಬಂದು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭವಿಷ್ಯದ ದೊಡ್ಡ ನಾಯಕರ ನೇತೃತ್ವದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಅವಿಸ್ಮರಣೀಯ. ಇದು ಜನರ ದೊಡ್ಡ ಜಾತ್ರೆ. ಇಲ್ಲಿನ ಕಾರ್ಯಕ್ರಮದ ಸಂಭ್ರಮವು ಕಣ್ಣು ತೆರೆಸಿದೆ ಎಂದರು. ಒಬ್ಬ ವ್ಯಕ್ತಿಯನ್ನು ಇಲ್ಲಿ ಶಕ್ತಿಯಾಗಿ ಕಾಣಲಾಗಿದೆ. ಕರೊನಾ ಸೋಂಕು ಕಾಡಿದ ಎರಡೂವರೆ ವರ್ಷಗಳಲ್ಲಿ ಚಿಕ್ಕ ವಯಸ್ಸಾದರೂ ದೊಡ್ಡ ಅನುಭವಿಯಂತೆ ಕಾರ್ಯನಿರ್ವಹಿಸಿದ್ದಾರೆ. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ, ಸಿಎನ್​ಆರ್ ರಾವ್, ಶಿಕ್ಷಣ ತಜ್ಞ ಎಚ್.ಎನ್.ನರಸಿಂಹಯ್ಯ ಹುಟ್ಟಿದ ಇಲ್ಲಿನ ಇತಿಹಾಸದ ಪುಟದಲ್ಲಿ ಸುಧಾಕರ್ ಸಹ ಶಾಶ್ವತವಾಗಿ ಉಳಿಯುತ್ತಾರೆ ಎಂದು ಆಶಿಸಿದರು.
ಇದು ಕರ್ನಾಟಕದ ಉತ್ಸವ:ಇದು ಹೆಸರಿಗೆ ಮಾತ್ರ ಚಿಕ್ಕಬಳ್ಳಾಪುರ ಉತ್ಸವ. ಆದರೆ, ಇಲ್ಲಿನ ವೈಭವ, ಅದ್ದೂರಿತನ ಮತ್ತು ಕಾರ್ಯಕ್ರಮಗಳು ಕರ್ನಾಟಕದ ಉತ್ಸವವನ್ನು ನೆನಪಿಸುತ್ತಿವೆ. ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕೆಲಸಗಳು, ಸಾಧನೆಗಳು ತಿಳಿದುಬರುತ್ತಿವೆ. ರಾಜ್ಯ ಮಟ್ಟದಲ್ಲೂ ಇಂತಹ ಉತ್ಸವಗಳು ಜನರಲ್ಲಿ ಹೊಸ ಹುರುಪು ತುಂಬುತ್ತವೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯು ಮೊದಲು ಬರಡಾಗಿತ್ತು. ಆದರೆ, ನೀರಾವರಿ ಯೋಜನೆಗಳಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ, ಹಸಿರು ಪ್ರದೇಶವಾಗಿ ಪರಿವರ್ತನೆಯಾಗಿದೆ. ದಾಖಲೆ ಪ್ರಮಾಣದಲ್ಲಿ ವಸತಿರಹಿತರಿಗೆ ಸ್ವಂತ ಸೂರು ಲಭಿಸುತ್ತಿದೆ. ರಾಜ್ಯ ಸರ್ಕಾರವು ವಿಶೇಷವಾಗಿ ಹಲವು ಕೊಡುಗೆಗಳ ಮೂಲಕ ಈ ಭಾಗಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ.
|ವಿ.ಸೋಮಣ್ಣವಸತಿ ಸಚಿವ
ನನ್ನನ್ನು ರಕ್ಷಿಸಿದವರು ಸುಧಾಕರ್:ಕರೊನಾ ಸೋಂಕಿನ ಸಂದರ್ಭದಲ್ಲಿ ರಾಜ್ಯದ ಜನರನ್ನು ಸೇರಿ ನನ್ನನ್ನು ರಕ್ಷಿಸಿದ ವ್ಯಕ್ತಿ ಡಾ.ಕೆ.ಸುಧಾಕರ್ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಸೋಂಕಿನ ಸಮಸ್ಯೆಯನ್ನು ಸ್ವತಃ ಅನುಭವಿಸಿದ್ದೇನೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಸಚಿವರು ನನಗೆ ಧೈರ್ಯ ತುಂಬಿದರು. ಗುಣಮಟ್ಟದ ಚಿಕಿತ್ಸೆಯ ಮೂಲಕ ರಕ್ಷಿಸಿದರು. ಇದನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಎಂದರು. ಕರೊನಾ ಸೋಂಕು ನಿರ್ವಹಣೆಯು ಕಠಿಣವಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿ, ರಾಜ್ಯದಲ್ಲಿ ವಿಶೇಷ ಅಭಿಯಾನ, ಲಸಿಕಾರಣಗಳ ಮೂಲಕ ಸಮರ್ಪಕವಾಗಿ ಎದುರಿಸುವಂತಾಯಿತು ಎಂದರು.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
