ಚಿಕ್ಕಬಳ್ಳಾಪುರ: ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿರುವುದರಲ್ಲಿ ಗಿನ್ನಿಸ್ ದಾಖಲೆ ಬರೆದಿರುವ ತಮಿಳುನಾಡಿನ ಕೆ.ಪದ್ಮರಾಜನ್ ಹಾದಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿ.ಎನ್.ರವಿ ಸಹ ಸಾಗುತ್ತಿದ್ದಾರೆ.ಹೌದು! ಸೋಲೋ ಗೆಲುವೋ ಇವರು ಈ ಭಾಗದಲ್ಲಿ ವಿವಿಧ ಚುನಾವಣೆಯಲ್ಲಿ ಮೊದಲಿನಿಂದಲೂ ಸ್ಪರ್ಧಿಸುತ್ತ ಗಮನ ಸೆಳೆಯುತ್ತಿದ್ದಾರೆ. ಅದರಂತೆ ಈ ಬಾರಿಯೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.ಗೌರಿಬಿದನೂರು ತಾಲೂಕಿನ ಗೊಟಕನಾಪುರದ ನಿವಾಸಿ. ವೃತ್ತಿ ಕೃಷಿ. ಪ್ರವೃತ್ತಿ ಸಮಾಜಸೇವೆ. ಇವರು ಜಿ.ಪಂ, ತಾ.ಪಂ, ಪುರಸಭೆ, ಎಪಿಎಂಸಿ, ಎಂಎಲ್‌ಎ ಸೇರಿ ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸಿಕೊಂಂಡು ಬರುತ್ತಿದ್ದಾರೆ. ಒಮ್ಮೆಯೂ ಗೆದ್ದಿಲ್ಲ. ಆದರೆ, ಚುನಾವಣೆ ವೇಳೆ ಸ್ಪರ್ಧೆ, ಪ್ರಚಾರ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ.ಪ್ರೌಢ ಶಿಕ್ಷಣ ಪೂರೈಸಿರುವ ಜಿ.ಎನ್.ರವಿ ಮೊದಲು ಗೌರಿಬಿದನೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ 3 ಬಾರಿ ಜಿ.ಪಂ.ಗೆ ಸ್ಪರ್ಧಿಸಿ ಸೋತಿದ್ದು ಇನ್ನೂ ಜೆಡಿಎಸ್‌ನಿಂದ 1 ಹಾಗೂ ಪಕ್ಷೇತರರಾಗಿ 2 ಬಾರಿ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪುರಸಭೆ ಚುನಾವಣೆಗೆ ಎರಡು ಬಾರಿ, ತಾ.ಪಂಗೆ ಒಂದು ಬಾರಿ, ಎಪಿಎಂಸಿ ಚುನಾವಣೆಗೆ ಎರಡು ಬಾರಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಮತ್ತೊಂದೆಡೆ ಪತ್ನಿ ಜಿ.ಎನ್.ಮಂಜುಳಾರವರನ್ನೂ ಎರಡು ಬಾರಿ ಚುನಾವಣೆ ಕಣಕ್ಕಿಳಿಸಿದ್ದು ವಿಶೇಷ.
* ಸೋತರೂ ಮತಗಳಿಕೆಯ ಖುಷಿಕಳೆದ ನಾಲ್ಕು ವಿಧಾನಸಭೆ ಚುನಾವಣೆಯಿಂದಲೂ ಗೌರಿಬಿದನೂರು ವಿಧಾನಸಭೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ರವಿ ಸ್ಪರ್ಧಿಸಿದ್ದು 2008 ರ ಚುನಾವಣೆಯಲ್ಲಿ 699 ಮತ, 2013 ರಲ್ಲಿ 424 ಮತ, 2018 ರ ಚುನಾವಣೆಯಲ್ಲಿ 234 ಮತಗಳು, 2023 ರ ಚುನಾವಣೆಯಲ್ಲಿ 250 ಮತಗಳು ಸಿಕ್ಕಿವೆ. ಇನ್ನೂ ಕಳೆದ 2019 ರ ಲೋಕಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದಾಗ ಅಸಮರ್ಪಕ ದಾಖಲೆಗಳ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿತ್ತು. ಇನ್ನೂ 2014 ರ ಲೋಕಸಭಾ ಚುನಾವಣೆಯಲ್ಲಿ 7127 ಮತಗಳು, 2009 ರ ಲೋಕಸಭಾ 7955 ಮತಗಳನ್ನು ಪಡೆದಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ ಪ್ರತಿ ಬಾರಿಯೂ ಮೂರಂಕಿಯ ಮತಗಳು ಬೀಳುತ್ತಿರುವುದು ಖುಷಿಯ ವಿಚಾರ. ಈಗ ಸೋತರೂ ಭವಿಷ್ಯದಲ್ಲಿ ಮತದಾರರು ಗೆಲ್ಲಿಸುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
