ಹಾಸನ:ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಇನ್ನು ಎರಡು ತಿಂಗಳು ಬಾಕಿ ಇದೆ ಎನ್ನುವಾಗಲೇ ವರನೊಬ್ಬ ವಧುವಿಗೆ ಕೈಕೊಟ್ಟಿರುವ ಘಟನೆ ಹಾಸನದಲ್ಲಿ ನಡೆದಿದ್ದು, ವಧುವಿನ ಕುಟುಂಬ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.
ಹಾಸನದ ಬೇಲೂರು ಗ್ರಾಮವೊಂದರ ನಿವಾಸಿ ಕಾವ್ಯಾಗು ಮತ್ತು ಚಿಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದ ನಿಶ್ಚಿತ್​ ಸಿ.ಎಸ್​. ಪ್ರೇಮಿಗಳ ದಿನಾಚರಣೆ (ಫೆ.14)ಯಂದು ನಿಶ್ಚಿತಾರ್ಥ ನೇರವೇರಿದೆ. ಇದೇ ಮೇ 09ಕ್ಕೆ ಮದುವೆ ದಿನಾಂಕ ನಿಗದಿಯಾಗಿದ್ದು, ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದೆ.
ಇದನ್ನೂ ಓದಿರಿ:Web Exclusive | ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಾಧಿಸಿದ ಅರ್ಜುನ್; 195 ರಾಷ್ಟ್ರ, ರಾಜಧಾನಿಗಳನ್ನು ಗುರ್ತಿಸುವ ಪ್ರತಿಭಾವಂತ
ಕಲ್ಯಾಣ ಮಂಟಪದಲ್ಲೇ ನಿಶ್ಚಿತಾರ್ಥ ಆಗಬೇಕು. ಹೋಳಿಗೆ ಊಟ, ವಿಡಿಯೋಗ್ರಫಿ ಬೇಕು ಎಂದು ನಿಶ್ಚಿತ್​ ಪಾಲಕರು ಬೇಡಿಕೆ ಇಟ್ಟಿದ್ದರು. ಅದರಂತೆಯೇ ವಧುವಿನ ತಂದೆ ಎಲ್ಲವನ್ನೂ ಅದ್ಧೂರಿಯಾಗಿಯೇ ಮಾಡಿಕೊಟ್ಟಿದ್ದರು. ಆದರೆ, ವರನೀಗ ಮದುವೆ ಬೇಡ ಎಂದ ಉಲ್ಟಾ ಹೊಡೆಯುತ್ತಿದ್ದಾನೆ. ಇದರಿಂದ ಮನನೊಂದ ವಧು ಆತ್ಮಹತ್ಯೆಗು ಯತ್ನಿಸಿದ್ದಾಳೆ.
ಈ ಬಗ್ಗೆ ಅರೆಹಳ್ಳಿ ಠಾಣೆ ಮೆಟ್ಟಿಲೇರಿದ್ರು ವಧುವಿನ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಹಾಸನ ಎಸ್ಪಿ ಕಚೇರಿಗೆ ವಧು ಹಾಗೂ ಪೋಷಕರು ದೂರು ನೀಡಿದ್ದಾರೆ. ದೂರಿನಲ್ಲಿ ಮದುವೆಗೂ ಮುಂಚೆ ನಿಶ್ಚಿತ್​, ನನ್ನನ್ನು ಗೋವಾಗೆ ಕರೆದುಕೊಂಡ ಹೋದರು. ಹೇಳಿದಂತೆ ಕೇಳಲು ಒತ್ತಾಯಿಸಿದರು. ಆದರೆ, ನಾನು ಒಪ್ಪಲಿಲ್ಲ. ಇದೇ ಕಾರಣಕ್ಕೆ ನನ್ನ ಮೇಲೆ ಕೋಪಿಸಿಕೊಂಡರು. ಬಳಿಕ ನಿಶ್ಚಿತ್​ ಮತ್ತು ಅವರ ತಾಯಿ ನನ್ನ ಮೇಲೆ ಸಂದೇಹ ವ್ಯಕ್ತಪಡಿಸಿ, ನನ್ನ ವ್ಯಕ್ತಿತ್ವ ಸರಿಯಿಲ್ಲ ಇಂದು ಕುಂಟು ನೆಪ ಹೇಳಿ ಮದುವೆ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ವಧು ಆರೋಪಿಸಿದ್ದಾರೆ.
ಇದನ್ನೂ ಓದಿರಿ:ಪೈರಸಿ ಹಾವಳಿ: ಮೊದಲು ನಾವು ಬದಲಾಗಬೇಕು ಎನ್ನುತ್ತಾರೆ ಪುನೀತ್ ರಾಜ್​ಕುಮಾರ್
ನಿಶ್ಚಿತ್​ ನನ್ನೆದುರು ಬಂದು ಮಾತನಾಡುವುದುಕ್ಕೂ ತಯಾರಿಲ್ಲ. ನಾನು ಆತನನ್ನೇ ಮದುವೆಯಾಗುವುದು. ಇದು ನನ್ನ ಮರ್ಯಾದೆ ಪ್ರೆಶ್ನೆ. ಇಲ್ಲವಾದರೆ ನಾನು ಸಾಯುತ್ತೇನೆಂದು ವಧು ಹೇಳಿದ್ದಾಳೆ. ಮೇ 9ಕ್ಕೆ ಆತನ ಜತೆಯೇ ನನ್ನ ಮಗಳ ಮದುವೇ ಮಾಡಿಯೇ ತೀರುತ್ತೇನೆಂದು ವಧುವಿನ ತಂದೆ ಯುವರಾಜ್ ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಪ್ರ್ಯಾಂಕ್​ ಹೆಸರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಭಾರತದ ಯೂಟ್ಯೂಬರ್​ಗಳಿಗೆ ಕಾದಿದೆ ಸಂಕಷ್ಟ!

ಮತ್ತೆ ಒಂದಾದ ಹರ್ಷ-ಶಿವರಾಜ್ ಕುಮಾರ್: ವೇದನಾದ ಶಿವಣ್ಣ

‘ಕೃಷ್ಣ ಟಾಕೀಸ್’: ಹೆದರಿಸಲು ಬಂದ್ರು ಅಜೇಯ್-ಅಪೂರ್ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
