ಚಿಕ್ಕಮಗಳೂರು:ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನ ಸರ್ಕಾರಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಬುರ್ಖಾ- ಹಿಜಾಬ್ ಧರಿಸಿ ಅಡ್ಡಾಡುತ್ತಿರುವ ದೃಶ್ಯಗಳು ಕಂಡುಬಂದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಶುರುವಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿತ್ತು. ಕೊನೆಗೆ ನ್ಯಾಯಾಲಯದಿಂದಲೂ ಸಮವಸ್ತ್ರದ ಪರವಾಗಿ ಆದೇಶ ಬಂದಿತ್ತು. ಅದಾದ ಮೇಲೆ ಇರಾನ್‍ನಲ್ಲಿ ಹಿಜಾಬ್‍ ವಿರೋಧಿ ಚಳವಳಿಯೇ ನಡೆದಿತ್ತು. ಇದಾದ ಮೇಲೆ ವಿವಾದ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ವಿವಾದ ಭುಗಿಲೇಳುವಂತಹ ಪರಿಸ್ಥಿತಿಯೇ ಈ ಕಾಲೇಜಿನಲ್ಲೂ ಶುರುವಾಗಿತ್ತು.

ಇದನ್ನೂ ಓದಿ:ಹಿಜಾಬ್ ತೆಗೆದು ಚೆಸ್ ಆಡಿದ ಇರಾನ್​ನ ಆಟಗಾರ್ತಿಗೆ ಸಿಕ್ತು ಸ್ಪೇನ್​ನ ಪೌರತ್ವ!
ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಐ.ಡಿ.ಎಸ್.ಜಿ. ಕಾಲೇಜು ಅಡಳಿತ ಮಂಡಳಿಯಿಂದ ವಾರದ 6 ದಿನವೂ ಸಮವಸ್ತ್ರ ಧರಿಸಬೇಕೆಂದು ಆದೇಶ ಹೊರಬಿದ್ದಿದೆ. ಈ ಮೂಲಕ ಶುರುವಾಗಿದ್ದ ವಿವಾದ ತಣ್ಣಗಾಗಿದೆ.
ಇದನ್ನೂ ಓದಿ:ಹಿಜಾಬ್ ಧರಿಸಿ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟ: ಪರ್ಯಾಯ ಆಯ್ಕೆ ಕೇಳಿದ ವೈದ್ಯ ವಿದ್ಯಾರ್ಥಿನಿಯರ ಮನವಿ ತಿರಸ್ಕೃತ
ಆದೇಶದಲ್ಲಿ ಸಮವಸ್ತ್ರ ಧರಿಸದ ವಿದ್ಯಾರ್ಥಿಗಳಿಗೆ ಕಾಲೇಜು ಆವರಣ ಪ್ರವೇಶಕ್ಕೆ ನಿಷೇಧ ಎಂದು ಉಲ್ಲೇಖಿಸಲಾಗಿದ್ದು ಜತೆಗೆ ಐಡಿ ಕಾರ್ಡ್ ತೋರಿಸಿಯೇ ತರಗತಿಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ. ನಿನ್ನೆ ಮೊದಲ ವರ್ಷದ ವಿದ್ಯಾರ್ಥಿನಿ ಹಿಜಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್ ಧರಿಸಿ ಕಾಲೇಜಿನ ಕೊಠಡಿಯಲ್ಲಿದ್ದ ವಿಡಿಯೋ ವೈರಲ್ ಅಗಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + sixteen =
Remember me
