ಬೆಂಗಳೂರು:ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಸೋಲಿಸಿದ್ದಕ್ಕಾಗಿ ಎಸ್.​ಎಲ್ ಭೋಜೇಗೌಡ ಅವರಿಗೆ ಜೆಡಿಎಸ್​ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ. ನಗರಸಭಾ ಸದಸ್ಯ ಎ.ಸಿ ಕುಮಾರ್ ನೇತೃತ್ವದಲ್ಲಿ ಅಭಿನಂದನದಾ ಕಾರ್ಯಕ್ರಮ ನಡೆದಿದೆ.
ನಗರದ ಹೊಸಮನೆ ರಸ್ತೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಎಸ್.​ಎಲ್ ಭೋಜೇಗೌಡ ಅವರಿಗೆ ಹಾಲಿನಿಂದ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಚುನಾವಣಾ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಇದ್ದರೂ, ಎಸ್.​ಎಲ್ ಭೋಜೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯ ಗೆಲುವಿನಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು.
ಇದನ್ನೂ ಓದಿ:ಸಿ.ಟಿ.ರವಿ ಸೋಲಿಗೆ ಅವರ ನಾಲಗೆಯೇ ಕಾರಣ: ಎಸ್.ಎಲ್.ಭೋಜೇಗೌಡ
ದತ್ತ ಪೀಠ ಮತ್ತು ಹಿಂದುತ್ವ ಹೋರಾಟದ ಮೂಲಕ ರಾಜಕೀಯ ನೆಲೆ ಕಂಡು ಕೊಂಡ ಸಿ.ಟಿ.ರವಿ ಅಲ್ಪ ಕಾಲದಲ್ಲೇ ಅತಿ ವೇಗವಾಗಿ ಬೆಳೆದರು. ಆದರೆ ತಮ್ಮನ್ನು ನಾಯಕನನ್ನಾಗಿ ಬೆಳೆಸಿದ ಮತದಾರರು ಮತ್ತು ನಾಯಕರ ಬಗ್ಗೆ ಬೆಳೆಸಿಕೊಂಡ ತಿರಸ್ಕಾರ ಮನೋಭಾವವೇ ಅವರಿಗೆ ಈ ಚುನಾವಣೆಯಲ್ಲಿ ಮುಳುವಾಗಿದೆ. ನಿಯಂತ್ರಣ ಇಲ್ಲದ ಹೇಳಿಕೆಗಳು ಹಾಗೂ ನಾನೀಗ ರಾಷ್ಟ್ರೀಯ ನಾಯಕ ಎಂಬ ಅಹಂ ಅವರ ಪಾಲಿಗೆ ಮುಳುವಾಗಿ ಪರಿಣಮಿಸಿದವು.
ಅವರದ್ದೇ ಪಕ್ಷದ ಕಾರ್ಯಕರ್ತ, ಒಂದು ಕಾಲದ ಆಪ್ತ ಎಚ್.ಡಿ. ತಮ್ಮಯ್ಯ ತಿರುಗಿ ಬಿದ್ದು, ಕಾಂಗ್ರೆಸ್​​ನಿಂದ ಸ್ಪರ್ಧೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆ. ಇಲ್ಲಿ ತಮ್ಮಯ್ಯ ನಿಮಿತ್ತ ಮಾತ್ರ. ಶತ್ರುವಿನ ಶತ್ರು ಮಿತ್ರ ಎನ್ನುವ ನೀತಿಯೇ ರವಿ ಸೋಲಿನಲ್ಲಿ ಹೆಚ್ಚು ಕೆಲಸ ಮಾಡಿದೆ. ಲಿಂಗಾಯತ ಸಮಾಜ ಅವರ ವಿರುದ್ಧ ಈ ಪ್ರಮಾಣದಲ್ಲಿ ತಿರುಗಿಬೀಳಬಹುದು ಎನ್ನುವ ಅಂದಾಜು ಇರಲಿಲ್ಲ. ಒಮ್ಮೆ ಅವರು ನೀಡಿದ್ದರು ಎನ್ನಲಾದ ಹೇಳಿಕೆ ಲಿಂಗಾಯತ ಸಮಾಜ ಒಗ್ಗೂಡಲು ಕಾರಣವಾಯಿತು.
ಇದನ್ನೂ ಓದಿ:VIDEO | ಕರ್ನಾಟಕದಲ್ಲಿ ಸ್ಪಷ್ಟ ಬಹುಮತ; ಹನುಮಾನ್ ಚಾಲೀಸಾ ಪಠಿಸಿದ ಕಾಂಗ್ರೆಸ್ ನಾಯಕರು
ನಾನು ಲಿಂಗಾಯತರ ವಿರುದ್ಧ ಹೇಳಿಕೆ ನೀಡಿಲ್ಲ ಎಂದು ರವಿ ಸ್ಪಷ್ಟನೆ ನೀಡಿದರೂ ಅಷ್ಟರ ವೇಳೆಗೆ ಲಿಂಗಾಯತ ಸಮಾಜ ತೀರ್ಮಾನ ತೆಗೆದುಕೊಂಡು ಆಗಿತ್ತು. ಸಿದ್ದರಾಮಯ್ಯ ಕೂಡ ಸಿ.ಟಿ.ರವಿ ವಿಧಾನಸಭೆ ಮೆಟ್ಟಿಲು ತುಳಿಯಬಾರದು ಎನ್ನುವ ಹಠಕ್ಕೆ ಬಿದ್ದಿದ್ದರು. ಹೀಗಾಗಿ ಚಿಕ್ಕಮಗಳೂರಿಗೆ ಬಂದು ತಮ್ಮ ಸಮಾಜದ ಮತಗಳನ್ನು ಕಾಂಗ್ರೆಸ್‌ ಪರ ಕ್ರೋಡೀಕರಿಸಿದರು. ಎರಡು ದೊಡ್ಡ ಸಮಾಜಗಳು ರವಿ ವಿರುದ್ಧ ಮತ ಹಾಕುವ ನಿರ್ಣಯ ಮಾಡಿದಾಗಲೇ ರವಿ ಸೋಲು ಖಚಿತವಾಗಿತ್ತು. ಕಾಂಗ್ರೆಸ್‌ನ ಕೆಲವರು ಸಿ.ಟಿ. ರವಿ ಪರವಾಗಿ ಕೆಲಸ ಮಾಡಿದರೆ, ಬಿಜೆಪಿಯ ಕೆಲವರು ತಮ್ಮಯ್ಯ ಪರವಾಗಿ ಕೆಲಸ ಮಾಡಿ ನಷ್ಟವನ್ನು ಬ್ಯಾಲೆನ್ಸ್ ಮಾಡಿದ್ದಾರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
