ಚಿಕ್ಕಮಗಳೂರು: ಮೀನು ಹಿಡಿಯಲು ಹೊಂಡದಲ್ಲಿ ಹಾಕಿದ್ದ ಬಲೆಯಲ್ಲಿ ಹಾವುಗಳು ಸಿಕ್ಕಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಗ್ತಿಹಳ್ಳಿಯಲ್ಲಿ ನಡೆದಿದೆ.
ಮುಗ್ತಿಹಳ್ಳಿ ಸಮೀಪ ಲೋಕೇಶ್​ ಎಂಬುವವರಿಗೆ ಸೇರಿದ ​ ಹೊಂಡ ಇದೆ. ಇಲ್ಲಿ ಮೀನುಗಳು ಅಧಿಕವಾಗಿದ್ದು ಅವುಗಳನ್ನು ಹಿಡಿಯಲು ಲೋಕೇಶ್​ ಬಲೆ ಬಿಟ್ಟಿದ್ದರು. ಮರು ದಿನ ಬಂದು ಬಲೆಯನ್ನು ನೀರಿನಿಂದ ಎಳೆದಾಗ ಬಲೆಯಲ್ಲಿ ಮೀನಿಗೆ ಬದಲಾಗಿ 4 ಹಾವುಗಳು ಬಲೆಗೆ ಸಿಕ್ಕಿದ್ದವು. ಇದನ್ನು ನೋಡಿ ಗಾಬರಿಗೊಂಡ ಲೋಕೇಶ್​ ಬಲೆಯನ್ನು ನೀರಿನಲ್ಲೆ ಬಿಟ್ಟು ಸ್ನೇಕ್​ ನರೇಶ್​ ಅವರಿಗೆ ಮಾಹಿತಿ ನೀಡಿದರು.
ಕೂಡಲೇ ಸ್ನೇಕ್​ ನರೇಶ್​ ಸ್ಥಳಕ್ಕೆ ಆಗಮಿಸಿ ಬಲೆಯಲ್ಲಿ ಸಿಕ್ಕಿದ್ದ ಹಾವುಗಳನ್ನು ರಕ್ಷಿಸಿದರು. ಬಲೆಯಲ್ಲಿ 3 ನಾಗರಹಾವು ಹಾಗೂ ಒಂದು ಕೇರೆ ಹಾವು ಸಿಲುಕಿದ್ದವು. ಇವುಗಳಲ್ಲಿ 2 ನಾಗರಹಾವುಗಳು ಸತ್ತಿದ್ದವು. 2 ಹಾವುಗಳನ್ನು ರಕ್ಷಣೆ ಮಾಡಿ ಸ್ಥಳೀಯ ಅರಣ್ಯಕ್ಕೆ ಬಿಟ್ಟರು.
ಲೋಕೇಶ್​ ಕುಟುಂಬ ಮೃತಪಟ್ಟ 2 ನಾಗರ ಹಾವುಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿತು. ಅಲ್ಲದೆ ಹೊಂಡದ ಬಳಿ ನಾಗರ ಕಲ್ಲು ನಿರ್ಮಿಸಿ ಪೂಜಿಸುವುದಾಗಿ ಲೋಕೇಶ್​ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − five =
Remember me
