ಚಿಕ್ಕೋಡಿ:ಮಲಗಿದ್ದ ದಂಪತಿಗೆ ಬೆಂಕಿ ಇಟ್ಟು ಕೊಲೆ ಮಾಡಿದ ಆರೋಪಿಗಳನ್ನು ಐಗಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಾವಿಯ ನೀರಿನ ಪಾಳೆಗೋಸ್ಕರ ಹತ್ತಿದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಮಹಾದೇವ ಮಾದರ್ ಹಾಗೂ ರೇಖಾ ಮಹಾದೇವ ಮಾದರ್ ದಂಪತಿ ಮನೆಯಲ್ಲಿ ಮಲಗಿರುವಾಗ ಕಳೆದ 10ರಂದು ತಡರಾತ್ರಿ 2 ಗಂಟೆಗೆ ದುಷ್ಕರ್ಮಿಗಳು ಮನೆಗೆ ಬೆಂಕಿ ಇಟ್ಟಿದ್ದರು.
ಇದನ್ನೂ ಓದಿರಿ:‘ಹೆಂಡತಿ ತಂಬಾಕು ತಿಂತಾಳೆ, ನಂಗೆ ಡಿವೋರ್ಸ್​ ಕೊಡಿಸಿ..’ ಗಂಡನ ಬೇಡಿಕೆಗೆ ಕೋರ್ಟ್​ ಹೇಳಿದ್ದೇನು?
ದುಷ್ಕೃತ್ಯದಿಂದ ತೀವ್ರವಾಗಿ ಗಾಯಗೊಂಡಿದ್ದ ಪತಿ ಮಹಾದೇವ ಹಾಗೂ ಪತ್ನಿ ರೇಖಾ ಮಾದರ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ರೇಷನ್​ನಲ್ಲಿ ಸೀಮೆ ಎಣ್ಣೆ ಪಡೆದು ಕೃತ್ಯ ಎಸಗಿದ್ದಾರೆನ್ನಲಾಗಿದೆ.
ಇದೀಗ ಆರೋಪಿಗಳಾದ ಶಂಕರ್ ಮಾದರ, ಸದಾಶಿವ ಮಾದರ ಹಾಗೂ ಸುನೀಲ ಮಾದರ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹದೇವ ಸೊಸೆ ಶಿಲ್ಪಾ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಐಗಳಿ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಡ್​ ಮೇಲೆ ಮಲಗಿರುವುದು ಮನುಷ್ಯನೇ ಅಲ್ಲ! ಏನಂತ ಗೆಸ್​ ಮಾಡೋದಕ್ಕೂ ನಿಮ್ಮಿಂದ ಸಾಧ್ಯ ಇಲ್ಲ

ಸಿಎಂ ಕೆಸಿಆರ್​ ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿ ಚಿನ್ನದ ಸೀರೆ ಕಾಣಿಕೆ ನೀಡಿದ ಸಚಿವ!

ಮಕ್ಕಳ ಕಲ್ಯಾಣ ಸಮಿತಿ ಮತ್ತು ಆರೈಕೆ ಸಂಸ್ಥೆಗಳ ಕಾನೂನು ಬದಲಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
