ಚಿಕ್ಕೋಡಿ: ಅದೆಷ್ಟೋ ಮಕ್ಕಳು ತಮ್ಮ ತಂದೆ-ತಾಯಿಯನ್ನು ಸಾಕಲು ಆಗದೇ ವೃದ್ಧಾಶ್ರಮಕ್ಕೆ ಕಳಿಸುವ ಇಂತಹ ಕಾಲದಲ್ಲಿ ಇಲ್ಲೊಬ್ಬ ಮಗ ಜನ್ಮ ನೀಡಿದ ತಾಯಿ-ತಂದೆಗಾಗಿ ದೇವಸ್ಥಾನ ನಿರ್ಮಿಸಿ, ಅವರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಮೂಲಕ ಇತರಿಗೆ ಆದರ್ಶವಾಗಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಸುರೇಶ್​ ತಳವಾರ ಎಂಬುವರು ತಮ್ಮ ಜಮೀನಿನಲ್ಲಿ ಇರುವ ಅಗಲಿದ ತಂದೆ ಗುರಪ್ಪ ತಳವಾರ ಹಾಗೂ ತಾಯಿ ಪಾರ್ವತಿ ತಳವಾರ ಅವರ ಸಮಾಧಿ ಮೇಲೆ ಪುತ್ಥಳಿ ಸ್ಥಾಪಿಸಿ ದೇವಸ್ಥಾನ ನಿರ್ಮಿಸಿ ಮಾತಾ ಪೀತಾ ಪ್ರೇಮ ಮೆರೆದಿದ್ದಾರೆ‌.
ಇದನ್ನೂ ಓದಿ:ಹೀರೋ ಆಗುವ ಕನಸು ಕಂಡಿದ್ದ ಯುವಕನಿಗೆ ಶಾಕ್​ ಕೊಟ್ಟ ನಿರ್ದೇಶಕಿ! ಅಶ್ಲೀಲ ಚಿತ್ರದ ಸುಳಿಗೆ ಸಿಲುಕಿ ಪರದಾಟ
ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹಾಗೂ ಸಮಾಜ ಸೇವಕರಾಗಿರುವ ಸುರೇಶ ತಳವಾರ ಹಾಗೂ ಅವರ ಸಹೋದರರು ಮೊದಲಿನಿಂದಲೂ ತಾಯಿ-ತಂದೆ ಮೇಲೆ ಅಪಾರ ಭಕ್ತಿ ಹೊಂದಿದವರು. 20 ವರ್ಷಗಳ ಹಿಂದೆ ಅವರ ತಂದೆ ಸಾವನ್ನಪ್ಪಿದ್ದರು. ಕಳೆದ ಎರಡು ವರ್ಷದ ಹಿಂದೆ ಅವರ ತಾಯಿ ಸಹ ತೀರಿ ಹೋದರು. ಪ್ರತಿ ವರ್ಷ ಅವರ ಪುಣ್ಯಸ್ಮರಣೆಯಂದು ಸಾವಿರಾರು ಜನರಿಗೆ ಅನ್ನಸಂತರ್ಪನೆ ಮಾಡುತ್ತಿದ್ದರು. ಈ ವರ್ಷ ತಂದೆ-ತಾಯಿ ಸದಾ ನಮ್ಮೊಂದಿಗೆ ಇರಬೇಕು ಎಂಬ ಭಾವನೆಯೊಂದಿಗೆ ಅವರ ದೇವಸ್ಥಾನ ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದಾರೆ.
ನಮ್ಮ ಜೊತೆ ತಂದೆ ತಾಯಿ ಇಲ್ಲದಿದ್ದರೂ ಅವರ ಆದರ್ಶ ಮತ್ತು ಮಾರ್ಗದರ್ಶನ ಸದಾ ನಮ್ಮ ಮೇಲೆ ಇರಬೇಕು ಎಂಬ ದೃಷ್ಟಿಯಿಂದ ದೇವಸ್ಥಾನ ನಿರ್ಮಿಸಿದ್ದೇವೆ. ನಾವಿಂದು ಏನಾದರು ಸಾಧಿಸಿದ್ದರೆ ಅದಕ್ಕೆ ಅವರ ಉತ್ತಮ ಮಾರ್ಗದರ್ಶನ ಹಾಗೂ ಆಶೀರ್ವಾದ ಕಾರಣ. ಎಷ್ಟು ಜನ್ಮ ಎತ್ತಿದರು ಹೆತ್ತವರ ಋಣ ತಿರಿಸಲಾಗದು. ಯಾವ ಮಕ್ಕಳು ತಂದೆ ತಾಯಿರನ್ನು ಕಡೆಗಣಿಸಬೇಡಿ ಎನ್ನುವ ಮನವಿಯನ್ನು ಸುರೇಶ ಮಾಡಿದರು.(ದಿಗ್ವಿಜಯ ನ್ಯೂಸ್​)
ಮಗು ಸತ್ತೇ ಹೋಯ್ತು ಅಂತ ಅಳುತ್ತಿದ್ದವರಿಗೆ ಕಾದಿತ್ತು ಅಚ್ಚರಿ! ಪೊಲೀಸ್ ಪವಾಡದಿಂದ ಮಗುವಿಗೆ ಸಿಕ್ತು ಮರುಜನ್ಮ

ಮಾರ್ಕ್ಸ್ ಕಾರ್ಡ್ ನೀಡಲು ವಿಳಂಬ ಮಾಡಿದ ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ವಿದ್ಯಾರ್ಥಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − three =
Remember me
