ಚಿಕ್ಕೋಡಿ:ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ ಹಿನ್ನೆಲೆಯಲ್ಲಿ ನದಿ ಬಿಟ್ಟು ನಾಡಿನ ಕಡೆ ಮೊಸಳೆಗಳು ಹೆಜ್ಜೆ ಹಾಕಿವೆ. ಇದರಿಂದ ಕೃಷ್ಣಾ ನದಿ ತೀರದ ಜನ ಆತಂಕದಲ್ಲಿ ದಿನ ದೂಡುವಂತಾಗಿದೆ.
ಇಂದು ಬೆಳಂಬೆಳಗ್ಗೆ ಸವದಿ ದರ್ಗಾ ಗ್ರಾಮದ ಬಳಿಯ ಕೃಷ್ಣಾ ನದಿ ತೀರದಿಂದ ತೋಟದ ವಸತಿಗೆ ಮೊಸಳೆಯೊಂದು ಆಹಾರ ಅರಸಿಕೊಂಡು ಬಂದಿದೆ. ಪ್ರಕಾಶ ಸನದಿ ಎಂಬುವರ ತೋಟದ ಮನೆಗೆ ನಸುಕಿನ ಜಾವ 3 ಗಂಟೆ ಸುಮಾರಿಗೆ ಆಹಾರ ಅರಸಿ ಬಂದಿದೆ.
ಇದನ್ನೂ ಓದಿ:ದೇಶಭಕ್ತ ಮಕ್ಕಳ ಜನನಕ್ಕಾಗಿ ಆರ್​ಎಸ್​ಎಸ್​​ನಿಂದ ಗರ್ಭ ಸಂಸ್ಕಾರ ಅಭಿಯಾನ
ಬೆಳಗ್ಗೆ ಮೇಕೆಗಳ ಕಿರಿಚಾಟದಿಂದ ಪ್ರಕಾಶ ಸನದಿ ಕುಟುಂಬಸ್ಥರು ಎಚ್ಚರಗೊಂಡು ನೋಡಿದಾಗ ಮೊಸಳೆ ದಾಳಿ ಮಾಡಿರುವುದನ್ನು ನೋಡಿ ಬಡಗಿಯಿಂದ ಹೊಡೆದು ಮೇಕೆಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ.
ಇಷ್ಟೆಲ್ಲ ಆದರೂ ಕೂಡಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಇನ್ನೂ ಆಗಮಿಸಿಲ್ಲ. ಹೀಗಾಗಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕೃಷ್ಣಾ ನದಿ ಬತ್ತಿದ ಬೆನ್ನಲ್ಲೆ ನದಿಯಲ್ಲಿರುವ ಮೊಸಳೆಗಳು ನಾಡಿನತ್ತ ಹೆಜ್ಜೆ ಹಾಕ್ಕಿದ್ದು, ನದಿ ತೀರದ ಜನರು ರಾತ್ರಿ ಹೊತ್ತು ತಿರುಗಾಡಲು ಭಯ ಭೀತರಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಮುಂದಿನ 10 ವರ್ಷವೂ ನಮ್ಮದೇ ಸರ್ಕಾರ ಇರುತ್ತೆ, ಅಲ್ಲಿಯ ತನಕ ಯೋಜನೆಯೂ ಇರುತ್ತೆ: ಸಾರಿಗೆ ಸಚಿವ

14ರ ಪೋರ ಇನ್ನು ಎಲಾನ್ ಮಸ್ಕ್ ಒಡೆತನದ ಸಂಸ್ಥೆಯಲ್ಲಿ ಇಂಜಿನಿಯರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fifteen =
Remember me
