ಚಿಕ್ಕಮಗಳೂರು:ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಅರ್ಧಗಂಟೆ ರಸ್ತೆಯಲ್ಲೇ ನರಳಾಡಿ ಕರೊನಾ ವಾರಿಯರ್ಸ್​ ಪ್ರಾಣ ಬಿಟ್ಟಿರುವ ಘಟನೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್​ನಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಮುಂಚೆಯೇ ಬಂದರೂ ಸಮಯ ಪ್ರಜ್ಞೆ ಮೆರೆಯದ ಬಿಜೆಪಿ ಶಾಸಕ ಸುರೇಶ್ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮೃತಪಟ್ಟ ಕರೊನಾ ವಾರಿಯರ್​ನನ್ನು ರಮೇಶ್​ ಎಂದು ಗುರುತಿಸಲಾಗಿದೆ. ಹೆಲ್ತ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದ ರಮೇಶ್​, ನಿನ್ನೆ ಕರೊನಾ ಕರ್ತವ್ಯ ಮುಗಿಸಿ ಬರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿತ್ತು.
ಇದೇ ವೇಳೆ ಶಾಸಕ ಸುರೇಶ್​ ಅವರ ಕಾರು ಅಲ್ಲಿಗೆ ಬಂದಿತ್ತು. ಆಂಬ್ಯುಲೆನ್ಸ್​ ಕರೆ ಮಾಡಿದರೂ ಅರ್ಧ ಗಂಟೆಯಾದ್ರೂ ಬರಲೇ ಇಲ್ಲ. ಇತ್ತ ರಮೇಶ್​ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರೂ ಶಾಸಕರು ಮಾತ್ರ ಕಾರು ನಿಲ್ಲಿಸಿಕೊಂಡು ಕಾರಿನೊಳಗಡೆಯೇ ಕುಳಿತಿದ್ದರು.
ತಡವಾಗಿ ಬಂದ ಆಂಬ್ಯುಲೆನ್ಸ್​ನಲ್ಲಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ರಮೇಶ್​ ಕೊನೆಯುಸಿರೆಳೆದಿದ್ದಾರೆ. ಶಾಸಕರು ಸಮಯ ಪ್ರಜ್ಞೆ ಮೆರೆದಿದ್ದರೆ ರಮೇಶ್​ ಜೀವ ಉಳಿಯುತ್ತಿತ್ತು. ಕೇವಲ ಎರಡು ನಿಮಿಷದ ಪ್ರಯಾಣದ ಅಂತರದಲ್ಲೇ ಆಸ್ಪತ್ರೆ ಇತ್ತು. ಆದರೆ, ಶಾಸಕರ ನಿರ್ಲಕ್ಷ್ಯದಿಂದ ಒಬ್ಬ ಕರೊನಾ ವಾರಿಯರ್​ನನ್ನು ಕಳೆದುಕೊಂಡಂತಾಗಿದೆ.(ದಿಗ್ವಿಜಯ ನ್ಯೂಸ್​)
18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ: ದೇಶದಲ್ಲಿ ಕಂಡುಬಂದ ಮೊದಲ ಪ್ರಕರಣ

ಬಿಎಸ್​ವೈ ವಿರುದ್ಧ ಬಿಜೆಪಿಯೊಳಗೇ ಪ್ರತಿಪಕ್ಷ; ಸಿಎಂ ಬದಲಾವಣೆ ನೆಪದಲ್ಲಿ ಕಮಲವೇ ಖೆಡ್ಡಕ್ಕೆ, ಯಡಿಯೂರಪ್ಪ ಬೆನ್ನಿಗೆ ನಿಂತ ಡೆಲ್ಲಿ ವರಿಷ್ಠರು

PNB Scam: ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 8 =
Remember me
