ಚಿಕ್ಕಮಗಳೂರು:ಮಹಾಮಾರಿ ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ಗೌರಿಗದ್ದೆ ಆಶ್ರಮದ ಅವಧೂತ ವಿನಯ್​ ಗುರೂಜಿ ಅವರು ಭಕ್ತರಿಗೆ ಸಂದೇಶ ರವಾನಿಸಿದ್ದಾರೆ.
ಪಾರಿಜಾತ ಎಲೆಯ ಕಷಾಯ ಕುಡಿದರೆ ಕರೊನಾದಿಂದ ಗುಣ ಹೊಂದುತ್ತಾರೆ. 5 ಎಲೆ, ಕಾಳು ಮೆಣಸು ಹಾಗೂ ಶುಂಠಿ ಹಾಕಿ ಮಾಡಿದ ಕಷಾಯವನ್ನು ಕುಡಿಯಲು ಗುರೂಜಿ ಸೂಚನೆ ನೀಡಿದ್ದಾರೆ. ಕರೊನಾ ಇರುವವರು ಹಾಗೂ ಇಲ್ಲದವರು ಎಲ್ಲರೂ ಕುಡಿಯಿರಿ ಎಂದು ಗುರೂಜಿ ಹೇಳಿದರು.
ಇದನ್ನೂ ಓದಿರಿ:ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಜನರ ಆಕ್ರೋಶಕ್ಕೆ ಡಿಸಿ ಉತ್ತರ ಹೀಗಿದೆ…
ಮೂರು ದಿನಗಳ ಹಿಂದೆ ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿದ್ದ ವಿನಯ್ ಗುರೂಜಿ, ಕರೋನಾ ಎರಡನೇ ಮತ್ತು ಮೂರನೇ ಅಲೆ ಬಗ್ಗೆ ಈ ಮೊದಲೇ ನಾನು ಹೇಳಿದ್ದೆ. ಮೂರನೇ ಅಲೆ ಬರುವ ಮೊದಲೇ ನಾವು ಎಚ್ಚೆತ್ತು ಕೊಳ್ಳಬೇಕಿದೆ. ಸೊಳ್ಳೆಯನ್ನ ಹೋಗಲಾಡಿಸಲು ಆಗಲ್ಲ. ಆದ್ರೆ ಸೊಳ್ಳೆ ಬಾರದಂತೆ ಪರದೆ ಹಾಕಿಕೊಳ್ಳಬಹುದು ಅದೇ ನಿಜ ಸ್ಥಿತಿ ಎನ್ನುವ ಮೂಲಕ ಕರೊನಾ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಅಗ್ನಿಹೋತ್ರ, ಯೋಗ, ‌ರಾಸಾಯನಿಕ ಮುಕ್ತ ಜೀವನ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
2020ರ ಮೇ ನಲ್ಲೂ ಕರೊನಾ ಕುರಿತು ಮಾತನಾಡಿದ್ದ ವಿನಯ್​ ಗುರೂಜಿ, ನಾವು ಇನ್ನೂ ಎರಡು ವರ್ಷ ಗಾಂಧೀಜಿ ಅವರು ಹೇಳಿದಂತೆ ಸರಳ ಜೀವನ ನಡೆಸಬೇಕು. ಇಲ್ಲದವರಿಗೆ ಇದ್ದವರು ಸಹಾಯ ಮಾಡಬೇಕು. ಪ್ರವಾಸ, ಶಾಪಿಂಗ್ ಎಂದು ವೃಥಾ ಖರ್ಚು ಮಾಡುವ ಬದಲು ಅಗತ್ಯವಿರುವ ಧಾನ್ಯವನ್ನು ಸಂಗ್ರಹಿಸಿಕೊಳ್ಳೋಣ. 10ರಿಂದ 11 ಜತೆ ಬಟ್ಟೆಗಳ ಖರೀದಿ ಮಾಡುವ ಬದಲು 3 ರಿಂದ 4 ಜತೆ ಖರೀದಿಸೋಣ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕುಳಿತುಕೊಳ್ಳಬಾರದು. ನಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮಾಡಬೇಕು ಎಂದಿದ್ದರು.
ಭಾರತದಲ್ಲಿ ಸ್ಪಾಟ್​ಗೋಲ್ಡ್ ಎಕ್ಸ್​ಚೇಂಜ್; ಷೇರುಗಳಂತೆ ಲಭ್ಯವಾಗಲಿದೆ ಇಜಿಆರ್

ಒಂದೇ ದಿನ ಸೂಪರ್​ಮೂನ್-ಬ್ಲಡ್​ಮೂನ್; ಮೇ 26ರ ಚಂದ್ರಗ್ರಹಣದ ದಿನ ಕೌತುಕ

ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಜನರ ಆಕ್ರೋಶಕ್ಕೆ ಡಿಸಿ ಉತ್ತರ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
