ಬೆಂಗಳೂರು:ಸಿನಿಮಾ ಹಾಗೂ ಫ್ಯಾಷನ್‌ ಕ್ಷೇತ್ರದಲ್ಲಿ ಸಖತ್‌ ಬ್ಯುಸಿಯಾಗಿದ್ದ ಬಾಲ ನಟ ಓಂ, 10 ನೇ ತರಗತಿಯ ಬೋರ್ಡ್‌ ಎಕ್ಸಾಂ ( ಐಸಿಎಸ್‌ಇ ಸಿಲಬಸ್)ನಲ್ಲಿ 97 % ಗಳಿಸುವ ಮೂಲಕ ಆಚಾರ್ಯ ಪಾಠಶಾಲೆಯ ಟಾಪರ್‌ಗಳಲ್ಲಿ ಒಬ್ಬನಾಗಿದ್ದಾನೆ.

ಕನ್ನಡ ವಿಷಯದಲ್ಲೂ ಅತಿ ಹೆಚ್ಚು ಅಂಕ: ಐಸಿಎಸ್‌ಸಿ ಸಿಲಬಸ್‌ನಲ್ಲಿ ಓದುವವರು ಕನ್ನಡದಲ್ಲಿ ವೀಕ್‌ ಅಲ್ಲ, ಎಂಬುದನ್ನು 100 ಕ್ಕೆ 97 ಅಂಕಗಳನ್ನು ಗಳಿಸುವ ಮೂಲಕ ಪ್ರೂವ್‌ ಮಾಡಿರುವ ಓಂ, ಗಣಿತದಲ್ಲಿ, ಇತಿಹಾಸದಲ್ಲಿ 100ಕ್ಕೆ 99 ಮಾರ್ಕ್ಸ್‌ ಗಳಿಸಿದ್ದಾನೆ. ಇನ್ನುಳಿದ ವಿಷಯಗಳೆಲ್ಲದರಲ್ಲೂ ಕ್ರಮವಾಗಿ 95, 96, 97 ಹೀಗೆ ಪಡೆದು ಶಾಲೆಯ ಟಾಪರ್‌ ಲಿಸ್ಟ್​ಗೆ ಸೇರಿದ್ದಾನೆ.
ಬಸವನಗುಡಿಯ ಆಚಾರ್ಯ ಪಾಠಶಾಲೆಯ ವಿದ್ಯಾರ್ಥಿಯಾಗಿರುವ ಓಂ, ಲೀ, ವೇಷಧಾರಿ, ಕಾಳಿದಾಸ ಕನ್ನಡ ಮೇಷ್ಟ್ರು ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾ ಹಾಗೂ 35ಕ್ಕೂ ಜಾಹೀರಾತುಗಳಲ್ಲಿ ನಟಿಸಿದ್ದು, ಇದರ ಜೊತೆಜೊತೆಗೆ ಓದನ್ನು ಕೂಡ ಬ್ಯಾಲೆನ್ಸ್‌ ಮಾಡಿದ್ದಾರೆ. ವೀಕೆಂಡ್‌ಗಳಲ್ಲಿ ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ ಚತುರ ಈತ.

ಬೋರ್ಡ್‌ ಎಕ್ಸಾಂನಲ್ಲಿ ಟಾಪರ್‌: ಈ ಸಾಲಿನ ಬೋರ್ಡ್‌ ಎಕ್ಸಾಂನಲ್ಲಿ ( ಐಸಿಎಸ್‌ಇ ಸಿಲಬಸ್‌) ಅತ್ಯಧಿಕ ಅಂಕಗಳನ್ನು ಗಳಿಸಿರುವ ಓಂ, ವ್ಯಾಸಂಗದ ಜೊತೆಜೊತೆಗೆ ಶಾಲೆಯ ಕ್ಯಾಪ್ಟನ್‌ಶಿಪ್‌ ಜವಾಬ್ದಾರಿ, ಎಪಿಎಸ್‌ ಕೌನ್ಸಿಲ್‌ನ ಜವಾಬ್ದಾರಿ ಕೂಡ ವಹಿಸಿಕೊಂಡು ಎಪಿಎಸ್‌ ಶಾಲೆಯ ಕಲ್ಚರಲ್‌ ಹಾಗೂ ಸಾಮಾಜಿಕ ಕಾಯಕ್ರಮಗಳಲ್ಲೂ ಭಾಗವಹಿಸಿರುವುದಲ್ಲದೇ, ಬೆಂಗಳೂರು ಸೌತ್‌ ಸ್ಕೂಲ್‌ ಲೀಡರ್ಸ್‌ ಸಮಾವೇಶದಲ್ಲೂ ಶಾಲೆಯ ಪ್ರತಿನಿಧಿಯಾಗಿ ಪಾಲ್ಗೊಂಡ ಹೆಗ್ಗಳಿಕೆ ಓಂನದು.
ವೋಟ್​ ಮಾಡಿ ವಜ್ರದ ಉಂಗುರಗಳನ್ನು ಗೆದ್ದ ನಾಲ್ವರಿಗೆ ಮರುಕ್ಷಣವೇ ಕಾದಿತ್ತು ಬಿಗ್​ ಶಾಕ್​!

ಎಸ್​ಆರ್​ಎಚ್​ ವಿರುದ್ಧ ಹೀನಾಯ ಸೋಲು! ಸ್ಟೇಡಿಯಂನಲ್ಲೇ ರಾಹುಲ್​ ವಿರುದ್ಧ ಎಲ್​ಎಸ್​ಜಿ ಮಾಲೀಕ ಆಕ್ರೋಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + 15 =
Remember me
