ಚಿಕ್ಕಬಳ್ಳಾಪುರ:ಗೌರಿಬಿದನೂರು ತಾಲೂಕಿನ ನಗರಗೆರೆಯಲ್ಲಿ ಹಣಕ್ಕಾಗಿ ತಂದೆ ತಾಯಿಗಳೇ 17 ದಿನದ ಗಂಡು ಮಗುವನ್ನು ದಲ್ಲಾಳಿಗಳ ಮೂಲಕ ಮಾರಿದ್ದಾರೆ. ನಗರಗೆರೆಯ ಗಂಗಮ್ಮ ಮತ್ತು ಮಂಜುಳಾ ದಂಪತಿಯ ತೀವ್ರ ವಿಚಾರಣೆ ನಡೆಸಿದ ಪೊಲೀಸರಿಗೆ ಬೆಂಗಳೂರು ಮೂಲದ ದಂಪತಿಗೆ ಮಗುವನ್ನು ಕೊಟ್ಟಿರುವುದು ತಿಳಿದು ಬಂದಿದೆ. ಇದೀಗ ಹಣಕ್ಕೆ ಮುಗ್ಧ ಜೀವದೊಂದಿಗೆ ವ್ಯವಹಾರ ಕುದುರಿಸಿರುವ ದಲ್ಲಾಳಿ, ಖರೀದಿಸಿದವರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ನಗರಗೆರೆ ದಂಪತಿಗೆ ಈಗಾಗಲೇ ಇಬ್ಬರು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಹಿಂದೆ ಒಂದು ಮಗು ಸತ್ತು ಹೋಗಿದೆ. ಇದರ ನಡುವೆ ಇತ್ತೀಚೆಗೆ ಸಮೀಪದ ವಾಟದಹೊಸಹಳ್ಳಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿದೆ. ಇದು ಮೊದಲೇ ಮಕ್ಕಳ ಹೊರೆ ಎಂದುಕೊಂಡಿದ್ದ ಪಾಲಕರಿಗೆ ಬೇಡವಾಗಿದೆ. ಇದರ ವಿಚಾರವನ್ನು ತಿಳಿದುಕೊಂಡ ದಲ್ಲಾಳಿಗಳು ಮಗುವನ್ನು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ದಂಪತಿಗೆ ಕೊಡಿಸಿದ್ದಾರೆ. ಇದಕ್ಕೆ ಹಣವನ್ನು ಪಡೆಯಲಾಗಿದೆ. ಇದರ ರಹಸ್ಯ ಗ್ರಾಮದಲ್ಲೆಲ್ಲ ಹರಿದಾಡಿದ್ದು ಯಾರೋ ಅಪರಿಚಿತರು ಮಕ್ಕಳ ಸಹಾಯವಾಣಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದರಿಂದ ಕಾರ್ಯ ಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ದಂಪತಿಯನ್ನು ಪ್ರಶ್ನಿಸಿದಾಗ ಅನುಮನಾಸ್ಪದವಾಗಿ ನಡೆದುಕೊಂಡಿದ್ದು ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿದ ಬಳಿಕ ಮಗುವಿನ ಮಾರಾಟದ ವಿಚಾರ ಹೊರಗೆ ಬಂದಿದೆ ಎನ್ನಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮಹಿಳಾ ಮೇಲ್ವಿಚಾರಕಿ ಸುನೀತಾ ಗುರುಬಸಪ್ಪ ಬೋಯರ್ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
