ಶ್ರೀರಂಗಪಟ್ಟಣ:ದೇವಸ್ಥಾನಕ್ಕೆಂದು ಶನಿವಾರ ಪಟ್ಟಣಕ್ಕೆ ಬಂದ ತಾಯಿ-ಮಗಳಿಗೆ ಜಲಕಂಟಕ ಕಾದಿತ್ತು. 2 ವರ್ಷದ ಕಂದಮ್ಮನ ಸಮೇತ ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದು, ವಿಧಿಯಾಟದ ಮುಂದೆ ಮಗು ಬದುಕುಳಿಯಲಿಲ್ಲ.
ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಹರೀಶ್​ ಎಂಬುವರ ಪತ್ನಿ ಅಪೂರ್ವ(22) ಅವರನ್ನು ರಕ್ಷಣೆ ಮಾಡಲಾಗಿದೆ. ಈಕೆಯ ಮಗು ಕೀರ್ತನಾ ನದಿಯಲ್ಲಿ ಕಣ್ಮರೆಯಾಗಿದೆ.
ಇದನ್ನೂ ಓದಿರಿಬ್ರಹ್ಮಗಿರಿ ಬೆಟ್ಟ ಕುಸಿದು ಐವರು ನಾಪತ್ತೆ, ಮೂರು ದಿನದ ಬಳಿಕ ಒಬ್ಬರ ಮೃತದೇಹ ಪತ್ತೆ
ಅಪೂರ್ವ ತನ್ನ ಮಗುವಿನೊಂದಿಗೆ ಪಟ್ಟಣದ ದೇವಾಲಯಕ್ಕೆ ಆಗಮಿಸಿದ್ದರು. ಬಳಿಕ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯನ್ನು ವೀಕ್ಷಿಸಲು ವೆಲ್ಲೆಸ್ಲಿ ಸೇತುವೆ ಬಳಿ ಬಂದಿದ್ದಾರೆ. ಈ ವೇಳೆನಿಯಂತ್ರಣ ತಪ್ಪಿ ಮೆಟ್ಟಿಲುಗಳಿಂದ ಜಾರಿ ಇಬ್ಬರು ನೀರಿನೊಳಗೆ ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಮಾರು ಎರಡು ಕಿ.ಮೀ. ದೂರದ ಕರೀಘಟ್ಟ ಸೇತುವೆ ಬಳಿ ರಘು ಮತ್ತು ಸ್ನೇಹಿತರು ನದಿಗೆ ಹಾರಿ ಕೊಚ್ಚಿ ಹೋಗುತ್ತಿದ್ದ ತಾಯಿಯನ್ನು ರಕ್ಷಿಸಿದ್ದಾರೆ.
ಶ್ರೀರಂಗಪಟ್ಟಣ ಟೌನ್​ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತಾಯಿಯನ್ನು ಕರೆದೊಯ್ದು ಸಮಾಧಾನ ಪಡಿಸಿದರು. ಅಗ್ನಿಶಾಮಕ ಸಿಬ್ಬಂದಿ ಮಗುವಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್​ ಠಾಣೆಯಲ್ಲಿ ಪತಿ ಹರೀಶ್​ ದೂರು ನೀಡಿದ್ದಾರೆ.
ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ; ಪ್ರಮೋದ್​ ಮುತಾಲಿಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
