ಬೆಳಗಾವಿ: ಗೋಡೆಗೆ ಹಚ್ಚುವ ಬಣ್ಣಕ್ಕೆ ಬೆರೆಸಲು ತೆಗೆದಿಟ್ಟಿದ್ದ ಟರ್ಪಂಟೈನ್ ಎಣ್ಣೆಯನ್ನು ಕುಡಿದು ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ತಾಲೂಕಿನ ಬಾಳೆಕುಂದ್ರಿ ಬಿ.ಕೆ. ಗ್ರಾಮದಲ್ಲಿ ಶನಿವಾರ ಈ ದಾರುಣ ಘಟನೆ ನಡೆದಿದೆ. ಗ್ರಾಮದ ರೀಧಾ ಇಮ್ರಾನ್ ಜಮಾದಾರ ಎಂಬ ಹೆಣ್ಣು ಮಗುವೇ ಮೃತಪಟ್ಟ ನತದೃಷ್ಟೆ.
ಇದನ್ನೂ ಓದಿ:ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​
ಆಕೆಯ ಪಾಲಕರು ಗೋಡೆಗೆ ಹಚ್ಚುವ ಆಯಿಲ್ ಪೇಂಟನ್ನು ತಂದು ಎತ್ತಿನ ಗಾಡಿಗೆ ಹಚ್ಚುವಲ್ಲಿ ತಲ್ಲೀನರಾಗಿದ್ದರು. ಟರ್ಪಂಟೈನ್ ಎಣ್ಣೆಯನ್ನು ಅದರಲ್ಲಿ ಮಿಕ್ಸ್ ಮಾಡುವ ಉದ್ದೇಶದಿಂದ ತಂದಿಟ್ಟುಕೊಂಡಿದ್ದರು. ಅದರ ಮುಚ್ಚಳ ತೆರೆದೇ ಇತ್ತು.
ಇದನ್ನೂ ಓದಿ:ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!
ಆಟವಾಡುತ್ತ ಮನೆಯಿಂದ ಹೊರಗೆ ಬಂದ ಮಗು, ಅದನ್ನು ನೀರಿನ ಬಾಟಲಿ ಎಂದು ತಿಳಿದು ಬಣ್ಣದ ಡಬ್ಬಿಯ ಬದಿಗಿದ್ದ ಟರ್ಪಂಟೈನ್‌ಅನ್ನು ಕುಡಿಯಿತು.ಕೆಲವೇ ನಿಮಿಷಗಳಲ್ಲಿ ಇದನ್ನು ನೋಡಿದ ಪಾಲಕರು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಲಾಕ್‌ಡೌನ್ ಇದ್ದಾಗಲೂ ಸನ್ಮಾನ ಮಾಡಿಸಿಕೊಂಡಿದ್ದ ಪಿಎಸ್‌ಐಗೆ ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
