ಬೆಂಗಳೂರು:ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಸುಲ್ತಾನ್ ಪೇಟೆ ಬಳಿ ನಡೆದಿದೆ.
ನಿನ್ನೆ ತಡರಾತ್ರಿ ಬಿಲ್ಡಿಂಗ್ ಕಾಮಗಾರಿಗಾಗಿ ಬಂದಿದ್ದ ದಂಪತಿಯ ಮಗು ಸಾವಿಗೀಡಾಗಿದೆ. 6 ವರ್ಷ ಪ್ರಾಯದ ಮಹೇಶ್ವರಿ ಸಾವನ್ನಪ್ಪಿದ ಮಗು.
ಇದನ್ನೂ ಓದಿ:ಲಿಫ್ಟ್ ಮಾಡಿ ನೀರು ತಂದರೆ ತಪ್ಪಿಲ್ಲ, ಕರ್ನಾಟಕ ಪರ ವಕೀಲ ಮೋಹನ ಕಾತರಕಿ ಅಭಿಮತ, ಮಹದಾಯಿ ಯೋಜನೆ ಸ್ವರೂಪ ಬದಲಾವಣೆ ಕಾರ್ಯಾಗಾರ
ಈಕೆ ಆಟವಾಡುತ್ತಾ ಲಿಫ್ಟ್​ಗೆ ಎಂದು ತೋಡಿದ್ದ ಗುಂಡಿಗೆ ಬಿದ್ದಿದ್ದಾಳೆ. ಅಲ್ಲಿ ಐದು ಅಂತಸ್ತಿನ ಬಿಲ್ಡಿಂಗ್ ಕಾಮಗಾರಿ ನಡೆಯುತಿತ್ತು. ಇಂದು ಬೆಳಿಗ್ಗೆ ಗುಂಡಿಯಲ್ಲಿ ಮಗುವಿನ ಶವ ತೇಲುತ್ತಿರುವುದು ಪತ್ತೆಯಾಗಿದೆ.
ಈ ಬಗ್ಗೆ ಮಗುವಿನ ತಾಯಿ ಕಮಲಮ್ಮ ಹೇಳಿಕೆ ನೀಡಿದ್ದು ‘ನಿನ್ನೆ ನಾವು ಆಸ್ಪತ್ರೆಯಿಂದ ಮನೆಗೆ ಬಂದಿದ್ವಿ. ನಾವು ನೋಡಿದಾಗ ಮಗು ಆಟ ಆಡುತ್ತಿತ್ತು. 10 ನಿಮಿಷ ಬಳಿಕ ನೋಡಿದಾಗ ಮಗು ಕಾಣಿಸಿಲ್ಲ. ನಾವು ಅಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಆಕೆ ಕಂಡುಬಂದಿಲ್ಲ.

ಅಗ ಅಲ್ಲಿ ಲಿಫ್ಟ್​ನಲ್ಲಿ ಮಗು ಬಟ್ಟೆ ಬಿದ್ದಿದ್ದು ಕಾಣಿಸಿದೆ. ಹೋಗಿ ನೋಡಿದರೆ ಮಗು ಒಳಗಡೆ ಬಿದ್ದಿತ್ತು. ತಕ್ಷಣ ಮಗವುನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ವೈದ್ಯರು ಅದಾಗಲೇ ಮಗು ಸಾವನ್ನಪ್ಪಿದೆ ಎಂದು ಹೇಳಿದರು’ ಎಂದು ದುಃಖ ತುಂಬಿದ ಧ್ವನಿಯಿಂದ ಹೇಳಿದ್ದಾರೆ.
ಮಾಹಿತಿ ಸಿಕ್ಕಿದ್ದೇ ತಡ, ಸ್ಥಳಕ್ಕೆ ಕೆ.ಆರ್ ಮಾರ್ಕೆಟ್ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಲಿಫ್ಟ್​ ಒಳಗೆ ಕಾಲಿಡ್ತಿದ್ದಂತೆ ನಡೆಯಿತು ಘೋರ ದುರಂತ: ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಾಕೆ ದುರ್ಮರಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 5 =
Remember me
