ಬೆಳಗಾವಿ:ತಾಲೂಕಿನ ಬಿ.ಕೆ.ಕಂಗ್ರಾಳಿ ಗ್ರಾಮದ ಜಮೀನೊಂದರಲ್ಲಿ 2 ವರ್ಷದ ಬಾಲಕನೊಬ್ಬ ಹಾವಿನ ಬಾಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಾಲಿ ಜಮೀನಿನಲ್ಲಿ ಬಾಲಕ ನಡೆದುಕೊಂಡು ಬರುತ್ತಿರುವುದನ್ನು ಆತನ ತಂದೆ ವಿಡಿಯೋ ಮಾಡುತ್ತಿರುತ್ತಾರೆ. ಈ ಕಡೆ ಬಾ ಎಂಬ ತಂದೆ ಹೇಳಿದ ವಿರುದ್ಧ ದಿಕ್ಕಿಗೆ ನಡೆಯುವ ಬಾಲಕನಿಗೆ ಪಕ್ಕದಲ್ಲೇ ಭಾರಿ ಗಾತ್ರದ ನಾಗರ ಹಾವು ಇರುವುದು ತಿಳಿಯುವುದಿಲ್ಲ. ವಿಡಿಯೋ ಮಾಡುತ್ತಿರುವ ತಂದೆಗೂ ಗೊತ್ತಾಗಿರುವುದಿಲ್ಲ. ನಡೆಯುತ್ತ ಮುಂದೆ ಸಾಗುವ ಬಾಲಕ ಹಾವನ್ನು ಮುಟ್ಟುತ್ತಾನೆ.
ಅದೃಷ್ಟವಶಾತ್ ಕಚ್ಚದೆ, ಹೆಡೆ ಎತ್ತಿ ಸುಮ್ಮನೆ ಹೊರಟು ಹೋಗುತ್ತದೆ. ನೆಲಮಟ್ಟದಿಂದ ಎದ್ದ ಹಾವು ನುಸುಳಿ ಹೋಗುವುದನ್ನು ನೋಡುವ ತಂದೆ ಹೌಹಾರಿ ಮಗು ಎತ್ತಿಕೊಳ್ಳಲು ಮುಂದಾಗುತ್ತಾರೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ರಾಜು ಪಾಟೀಲ ಎನ್ನಲಾಗಿದೆ.

VIDEO } ಮಾತೃವಾತ್ಸಲ್ಯ ಮಕ್ಕಳಿಗಷ್ಟೇ ಮೀಸಲಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + two =
Remember me
