ಬೆಳಗಾವಿ:ಎರಡು ವರ್ಷದ ಗಂಡು ಮಗುವನ್ನು ಅಪಹರಿಸಿದ್ದ ಐವರು ಅಪಹರಣಕಾರರನ್ನು ಅಥಣಿ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ಬಂಧಿತರನ್ನು ಪ್ರಶಾಂತ್ ಬಡಕಂಬಿ, ಜ್ಯೋತಿಬಾ ಬಂಗಿ, ಅನಿಲ್ ಬಡಕಂಬಿ, ಜಂಬುಸಾಗರ ನಾಡಗೌಡ ಹಾಗೂ ಕುಮಾರ್ ಹಿರೇಮನಿ ಎಂದು ಗುರುತಿಸಲಾಗಿದೆ. ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಜೋಪಡಿಪಟ್ಟಿಯ ಹುಸೇನವ್ವ ಬಹುರೂಪಿ ಎಂಬುವರ ಎರಡು ವರ್ಷದ ಮಗ ಯಲ್ಲಪ್ಪನನ್ನು ಅಪಹರಿಸಿದ್ದರು.
ಇದನ್ನೂ ಓದಿರಿ:ಐಪಿಎಲ್ ಆಟಗಾರರ ಹರಾಜಿಗಿಲ್ಲ ಶ್ರೀಶಾಂತ್, ರೇಸ್‌ನಲ್ಲಿ ಉಳಿದ ತೆಂಡುಲ್ಕರ್ ಪುತ್ರ
ಫೆಬ್ರವರಿ 6 ರಂದು ಸಂಜೆ 4 ಗಂಟೆ ಸುಮಾರಿಗೆ ಮಗು ಕಿಡ್ನಾಪ್ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡ ರಚಿಸಿದ್ದರು. ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ ಅಥಣಿ ಪೊಲೀಸರಿಗೆ ತನಿಖೆ ವೇಳೆ ಹಣದ ಆಸೆಗಾಗಿಯೇ ಮಗುವಿನ ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿತ್ತು. ಯಾವುದೇ ಸುಳಿವು ಇರದ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ಲೋಕೇಶನ್ ಸೇರಿ ಇತರ ವೈಜ್ಞಾನಿಕ ತಂತ್ರಜ್ಞಾನ ಬಳಸಿ ತನಿಖೆ ಮುಂದುವರಿಸಿದ್ದರು.
ಕೊನೆಗೂ ಗುರುವಾರ ಸಂಜೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಆರೋಪಿಗಳು ಬಿಚ್ಚಿಟ್ಟಿದ್ದು, ಗಂಡು ಮಗು ಇಲ್ಲದಿದ್ದಕ್ಕೆ ಅಥಣಿಯ ಓರ್ವ ಮಹಿಳೆ, ಆರೋಪಿಗಳ ಬಳಿ ಅನಾಥ ಆಶ್ರಮದಿಂದ ಗಂಡು ಮಗು ತಂದು ಕೊಡುವಂತೆ ಕೇಳಿದ್ದಳಂತೆ.
ಮಹಿಳೆಯ ಬಳಿ 4 ಲಕ್ಷಕ್ಕೆ ಬೇಡಿಕೆ ಇಟ್ಟು ಎರಡು ಲಕ್ಷಕ್ಕೆ ಡೀಲ್ ಫೈನಲ್ ಮಾಡಿದ್ದ ಆರೋಪಿಗಳು ಎರಡು ವರ್ಷದ ಮಗು ಕಿಡ್ನಾಪ್ ಮಾಡಿ ಮಹಿಳೆಗೆ ನೀಡಿದ್ದರು. ಅನಾಥ ಆಶ್ರಮದಿಂದ ಕಾನೂನುಬದ್ಧವಾಗಿ ಮಗು ತಂದಿದ್ದಾಗಿ ಹೇಳಿ ಮಗು ನೀಡಿ, ಮಹಿಳೆಯಿಂದ ಎರಡು ಲಕ್ಷ ರೂ. ಹಣ ಪಡೆದು ಹಂಚಿಕೊಂಡಿದ್ದರು.
ಇದನ್ನೂ ಓದಿರಿ:ಅಪ್ರಾಪ್ತ ತಂಗಿ ಮೇಲೆ ಅಣ್ಣನಿಂದ ನಿರಂತರ ಅತ್ಯಾಚಾರ: ಚಿಕ್ಕಮಗಳೂರಲ್ಲಿ ಮತ್ತೊಂದು ಹೇಯಕೃತ್ಯ ಬಯಲು
ಇದೀಗ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ 65 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಯುವಕನ ಬರ್ಬರ ಕೊಲೆ!; ಇರಿದರು, ತಲೆ ಮೇಲೆ ಕಲ್ಲು ಎತ್ತಿ ಹಾಕಿದರು, ಕೊನೆಗೆ ಶವ ಗುಂಡಿಗೆ ಹಾಕಿದ್ರು…

ವಿದ್ಯಾರ್ಥಿಗಳಿಗೆ ಅಶ್ಲೀಲಚಿತ್ರ ಕಳಿಸಿದ ಉಪನ್ಯಾಸಕ! ಆನ್​ಲೈನ್​ ಪಾಠದ ವೇಳೆ ಅವಾಂತರ, ಮುಂದೇನಾಯ್ತು?

ಬೆಳ್ಳಂಬೆಳಗ್ಗೆ ಮನೆ ಬಾಗಿಲಿಗೆ ಬಂದ ಕಸದ ಗಾಡಿಗೆ ಚಿನ್ನ ಸುರಿದ ಗೃಹಿಣಿ! ಆಮೇಲೇನಾಯ್ತು ಗೊತ್ತಾ?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:four × two =
Remember me
