ವಿಜಯವಾಣಿ ವಿಶೇಷ ಬೆಂಗಳೂರು:ರಾಜ್ಯದಲ್ಲಿ 2011ರ ಗಣತಿ ಪ್ರಕಾರ, 2.49 ಲಕ್ಷವಿದ್ದ ಬಾಲಕಾರ್ವಿುಕರ ಸಂಖ್ಯೆ ಈಗ ಬರೀ 270ಕ್ಕೆ ಇಳಿಕೆಯಾಗಿದೆ. ಅಂದರೆ ಶೇ.99 ಬಾಲಕಾರ್ವಿುಕ ಪದ್ಧತಿ ನಿಯಂತ್ರಣಕ್ಕೆ ಬಂದಿದೆ ಎಂದು ಕಾರ್ವಿುಕ ಇಲಾಖೆ ಮಾಹಿತಿ ಕೊಟ್ಟಿದೆ. ಇಟ್ಟಿಗೆ ಕಾರ್ಖಾನೆ, ಗಂಧದ ಕಡ್ಡಿ ಫ್ಯಾಕ್ಟರಿ, ಬ್ಯಾಗ್ ತಯಾರಿಕೆ ಸೇರಿ ಇನ್ನಿತರ ಕೈಗಾರಿಕೆಗಳಲ್ಲಿ ಬಾಲ ಕಾರ್ವಿುಕರು ದುಡಿಯುತ್ತಿದ್ದು, ಇದೀಗ ಕರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳು ಮಕ್ಕಳನ್ನು ಕೆಲಸ ಕಳಿಸಲು ಆತಂಕಪಡುತ್ತಿವೆ. ಜೂ.12ರ ಬಾಲಕಾರ್ವಿುಕ ವಿರೋಧಿ ದಿನದಂದು ಮಕ್ಕಳನ್ನು ಕೆಲಸಕ್ಕೆ ಕಳಿಸದಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ದುಡಿಮೆಯಿಂದ ರಕ್ಷಿಸುವಂತೆ ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆ (ಐಎಲ್​ಒ) ಎಲ್ಲ ರಾಷ್ಟ್ರಗಳಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ 2020ರ ಬಾಲ ಕಾರ್ವಿುಕರ ವಿರೋಧಿ ದಿನಾಚರಣೆ ಕುರಿತು ‘ಕರೊನಾ ವೈರಸ್ ಸಂದರ್ಭದಲ್ಲಿ ಬಾಲ ಕಾರ್ವಿುಕತೆಯಿಂದ ಮಕ್ಕಳನ್ನು ರಕ್ಷಿಸಿ, ಇಂದು ಮತ್ತು ಮುಂದಿನ ದಿನಗಳಲ್ಲಿ’ ಎಂಬ ಘೋಷಣೆ ಹೊರಡಿಸಿದೆ.ಇದನ್ನೂ ಓದಿ:ಪಿಟಿ ಉಷಾಗೆ ಒಲಿಂಪಿಕ್ಸ್ ಪದಕ ಕೈತಪ್ಪಿದಾಗ ಚಿನ್ನ ಗೆದ್ದ ಅಥ್ಲೀಟ್ ಕೂಡ ಅತ್ತಿದ್ದಳು!
270 ಬಾಲಕಾರ್ವಿುಕರ ರಕ್ಷಣೆ:ಭಾರತದಲ್ಲಿ ಎಂ.ಎಸ್.ಗುರುಪಾದಸ್ವಾಮಿ ನೇತೃತ್ವದ ಸಮಿತಿ ಶಿಫಾರಸಿನ ಮೇರೆಗೆ 6ರಿಂದ 14 ವರ್ಷದೊಳಗಿನ ಮಕ್ಕಳು ಯಾವುದೇ ಕೆಲಸ ಮಾಡುವುದನ್ನು ನಿಷೇಧಿಸಿ 1986ರಲ್ಲಿ ಬಾಲಕಾರ್ವಿುಕ ಕಾಯ್ದೆ ಜಾರಿಗೊಳಿಸಲಾಯಿತು. ನಂತರ ಅದನ್ನು 2016ರಲ್ಲಿ ತಿದ್ದುಪಡಿ ಮಾಡಿ 6ರಿಂದ 14 ವರ್ಷದೊಳಗಿನ ಮಕ್ಕಳ ಎಲ್ಲ ದುಡಿಮೆ ಪ್ರಕ್ರಿಯೆ ಹಾಗೂ ಅಪಾಯಕಾರಿ ಉದ್ದಿಮೆಗಳಲ್ಲಿ 15ರಿಂದ 18 ವರ್ಷದ ಕಿಶೋರಾವಸ್ಥೆ ಮಕ್ಕಳ ದುಡಿಮೆಯನ್ನು ನಿಷೇಧಿಸಿದೆ. ಈ ಕಾಯ್ದೆಯಡಿ ಜನವರಿ 2019 ರಿಂದ ಮೇ-2020ರವರೆಗೆ ರಾಜ್ಯದಲ್ಲಿ 270 ಬಾಲಕಾರ್ವಿುಕರನ್ನು ರಕ್ಷಿಸಲಾಗಿದೆ.
ಮಕ್ಕಳ ದುಡಿಮೆ ಗಂಭೀರ ಅಪರಾಧ:ಯಾವುದೇ ವಲಯಗಳಲ್ಲಿ 14 ವರ್ಷದೊಳಗಿನ ಬಾಲ್ಯಾವಸ್ಥೆ ಹಾಗೂ ಅಪಾಯಕಾರಿ ಸ್ಥಳದಲ್ಲಿ 15ರಿಂದ 18 ವರ್ಷದ ಕಿಶೋರವಸ್ಥೆ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧ. ಶಿಕ್ಷಣ ಹಕ್ಕು ಕಾಯ್ದೆ 2009, ಬಾಲನ್ಯಾಯ ಕಾಯ್ದೆ, 2015 ಹಾಗೂ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾಯ್ದೆ-1986ರ ಪ್ರಕಾರ ಶಿಕ್ಷಾರ್ಹ ಹಾಗೂ ಸಂಜ್ಞೆಯ ಅಪರಾಧವಾಗಿದೆ. ತಪ್ಪಿತಸ್ಥ ಮಾಲೀಕನ ಮೊದಲ ಅಪರಾಧಕ್ಕೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ, 20ರಿಂದ 50 ಸಾವಿರ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಬಾಲಕಾರ್ವಿುಕತೆಯಿಂದ ರಕ್ಷಿಸಿದ ಮಕ್ಕಳನ್ನು ರಾಜ್ಯದ 22 ಬಾಲಕಾರ್ವಿುಕ ತರಬೇತಿ ಕೇಂದ್ರಗಳಿಗೆ ಸೇರಿಸಬಹುದು.ಇದನ್ನೂ ಓದಿ:ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!
ವಿದ್ಯಾರ್ಥಿಗಳ ಟ್ರಾ್ಯಕಿಂಗ್:ರಾಜ್ಯದ ಶಿಕ್ಷಣ ಇಲಾಖೆಯು ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ ‘ವಿದ್ಯಾರ್ಥಿ ಸಾಧನೆಯ ಟ್ರಾ್ಯಕಿಂಗ್ ವ್ಯವಸ್ಥೆಗೆ ಆನ್​ಲೈನ್ ಅವಕಾಶ ಕಲ್ಪಿಸಿದೆ. ಎಲ್ಲ ಕೇಂದ್ರಗಳಲ್ಲಿ ಅಭ್ಯಾಸ ಮಾಡುವ ಮಕ್ಕಳನ್ನು ಸ್ಯಾಟ್ಸ್ ಮೂಲಕ ಟ್ರಾ್ಯಕಿಂಗ್ ಮಾಡಲಾಗುತ್ತಿದೆ. ಜತೆಗೆ ಬಾಲಕಾರ್ವಿುಕ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಪೆನ್ಸಿಲ್ ಪೋರ್ಟಲ್ ಬಳಕೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರದದಿಂದ ಬಾಲ ಕಾರ್ವಿುಕರ ತಪಾಸಣೆಗೆ 2020-21ನೇ ಸಾಲಿಗೆ 4 ಕೋಟಿ ರೂ. ಅನುದಾನ ನೀಡಿದ್ದು, ಬಾಲಕಾರ್ವಿುಕರ ಪುನರ್ವಸತಿಗಾಗಿ ಬಳಸಲಾಗುವುದು.
| ಡಾ.ಜಿ.ಮಂಜುನಾಥ್ಅಪರ ಕಾರ್ವಿುಕ ಆಯುಕ್ತರು, ಬಾಲಕಾರ್ವಿುಕ ವಿಭಾಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
