ಬೆಂಗಳೂರು:ಬುದ್ಧಿಮಾಂದ್ಯ ಎಂಬ ಕಾರಣಕ್ಕೆ 4 ವರ್ಷದ ತನ್ನ ಮಗುವನ್ನೇ ಅಪಾರ್ಟ್​ಮೆಂಟ್​ನ 4ನೇ ಮಹಡಿಯಿಂದ ಕೆಳಗೆ ಎಸೆದು ವೈದ್ಯೆ ಕೊಂದ ಪ್ರಕರಣ ಸಂಬಂಧ ಸಂಪಂಗಿರಾಮನಗರ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ತಾಯಿಯ ದುಷ್ಕೃತ್ಯದ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದು, ಸಂತೋಷಕ್ಕೆ ಅಡ್ಡಿ ಆಯಿತೆಂದು ಹೆತ್ತ ಮಗುವನ್ನೇ ಕೊಲ್ಲುವ ಕ್ರೂರತ್ವದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಸಂಪಂಗಿರಾಮನಗರದ ಸಿಕೆಸಿ ಗಾರ್ಡನ್​ನ ಅದ್ವಿತ್​ ಅಪಾರ್ಟ್​ಮೆಂಟ್​ನ ನಿವಾಸಿ ದಂತ ವೈದ್ಯೆ ಸುಷ್ಮಾ ಮತ್ತು ಸಾಪ್ಟ್​ವೇರ್​ ಇಂಜಿನಿಯರ್​ ಕಿರಣ್​ ದಂಪತಿಯ ಪುತ್ರಿ ಧ್ರುತಿ(4) ಕೊಲೆಯಾದ ನತದೃಷ್ಟ ಮಗು. 2022ರ ಆಗಸ್ಟ್​4 ರಂದು ಆರೋಪಿತೆ ತಾಯಿ ಸುಷ್ಮಾ, ತನ್ನ ಮಗುವನ್ನು ಆಟವಾಡಿಸುವ ನೆಪದಲ್ಲಿ 4ನೇ ಮಹಡಿಗೆ ಕರೆದೊಯ್ದು ಅಲ್ಲಿಂದ ಕೆಳಗೆ ಮಗು ಎಸೆದು ಕೊಲೆ ಮಾಡಿದ್ದಳು. ಆ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸಂಪಂಗಿರಾಮನಗರ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
193 ಪುಟಗಳ ಚಾರ್ಜ್​ಶೀಟ್​ನ್ನು ಕೋರ್ಟ್​ಗೆ ಪೊಲೀಸರು ಸಲ್ಲಿಸಿದ್ದಾರೆ. ಮೂವರು ಪ್ರತ್ಯಕ್ಷದರ್ಶಿಗಳು ಸೇರಿದಂತೆ 34 ಸಾಕ್ಷಿಗಳ ಹೇಳಿಕೆ ದಾಖಲು ಮಾಡಲಾಗಿದೆ. ಧ್ರುತಿ, ಬುದ್ಧಿಮಾಂದ್ಯ ಮಗುವಲ್ಲ. ಮಿದುಳು ಬೆಳವಣಿಗೆ ಆಗಿರಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ಚಿಕಿತ್ಸೆ, ಥೆರಫಿ ಮಾಡಿಸಿದರೂ ಮಗು ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ. ಇದರಿಂದ ಸುಷ್ಮಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿತ್ತು. ಆದರೆ, ಸುಷ್ಮಾಗೆ ಖಿನ್ನತೆ ಇಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದ್ದಾರೆ. ಈ ಎಲ್ಲ ವರದಿಯನ್ನು ಆರೋಪಪಟ್ಟಿಯಲ್ಲಿ ಸಲ್ಲಿಸಲಾಗಿದೆ.
ಸುಷ್ಮಾ, ಈ ಹಿಂದೆ ನಿಮ್ಹಾನ್ಸ್​ನಲ್ಲಿ ಚಿಕಿತ್ಸೆ ಪಡೆದಿದ್ದರು. ಮಗುವಿನ ಆರೋಗ್ಯ ಮತ್ತು ಆರೈಕೆಯಿಂದ ವೃತ್ತಿ ಜೀವನದಿಂದ ದೂರ ಆಗಬೇಕಾಯಿತು. ಕೆಲಸ ಮುಗಿಸಿ ಪತಿ ಮನೆಗೆ ಬಂದ ಮೇಲೆ ಹೆಚ್ಚು ಕಾಲ ಮಗುವಿನ ಜೊತೆಯಲ್ಲಿ ಕಳೆಯುತ್ತಿದ್ದರು. ಜೀವನವನ್ನು ಸಂತೋಷದಿಂದ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಕೊಲೆ ನಿರ್ಧಾರಕ್ಕೆ ಬಂದಿರುವುದಾಗಿ ಸುಷ್ಮಾ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿ ಮೂಲದ ಸುಷ್ಮಾ ಮತ್ತು ಕಿರಣ್​ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ಬಳಿಕ ಒಂದು ವರ್ಷ ಲಂಡನ್​ನಲ್ಲಿ ದಂಪತಿ ನೆಲೆಸಿದ್ದರು. ವಾಪಸ್​ ಬೆಂಗಳೂರಿಗೆ ಬಂದು ಸಂಪಂಗಿರಾಮನಗರದ ಅದ್ವಿತ್​ ಅಪಾರ್ಟ್​ಮೆಂಟ್​ನ 2ನೇ ಮಹಡಿಯಲ್ಲಿ ನೆಲೆಸಿದ್ದರು. ಮದುವೆ ಆಗಿ ಆರು ವರ್ಷವಾದರೂ ಸಂತಾನ ಇಲ್ಲದೆ ನೊಂದಿದ್ದ ದಂಪತಿ, ಹಲವು ವೈದ್ಯರನ್ನು ಸಂಪರ್ಕಿಸಿತ್ತು. 4 ವರ್ಷಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಧ್ರುತಿ ಬೆಳವಣಿಗೆಯಲ್ಲಿ ಕುಂಠಿತವಾಗಿತ್ತು. ದಂಪತಿ ಎರಡು ವರ್ಷಗಳಿಂದ ಹಲವು ತಜ್ಞರಿಂದ ಚಿಕಿತ್ಸೆ ಕೊಡಿಸಿದ್ದರು. ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ.
ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

‘ಸಿದ್ದರಾಮಯ್ಯಗೆ ಸಂಕಷ್ಟದ ದಿನಗಳು ಶುರುವಾಗಿದೆ.. ಪಾಠ ಕಲಿಸಲು ಖರ್ಗೆ ಸಜ್ಜಾಗಿದ್ದಾರೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
