ಚಿಂತಾಮಣಿ: ಕರೊನಾ ಲಾಕ್‌ಡೌನ್ ನಡುವೆಯೂ ತಾಲೂಕಿನ ಎ. ಗುಟ್ಟಹಳ್ಳಿಯಲ್ಲಿ ಬಾಲ್ಯವಿವಾಹ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಪಾಲಕರು ಬಾಲ್ಯವಿವಾಹ ನೆರವೇರಿಸಿದ್ದಾರೆ.
ಎ. ಗುಟ್ಟಹಳ್ಳಿಯ 16 ವರ್ಷದ ಬಾಲಕಿಯನ್ನು, ಸಂಬಂಧಿಯಾದ ಶ್ರೀನಿವಾಸಪುರ ತಾಲೂಕಿನ ಕನ್ನಸಂದ್ರದ ನಾಗರಾಜ್ ಎಂಬಾತನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆದಿತ್ತು. ಇದಕ್ಕೆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಳು.
ಈ ವಿಷಯ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ಬಂದಿದ್ದು, ಏ.17ರಂದು ಗ್ರಾಮಾಂತರ ಠಾಣೆಗೆ ಬಾಲಕಿಯ ಪಾಲಕರನ್ನು ಕರೆಸಿ ಬಾಲ್ಯವಿವಾಹ ಮಾಡದಂತೆ ಎಚ್ಚರಿಕೆ ನೀಡಿದ್ದರು. ಅದರಂತೆ ಮದುವೆ ಮಾಡುವುದಿಲ್ಲ ಎಂದು ಪಾಲಕರು ಒಪ್ಪಿಕೊಂಡಿದ್ದರು.
ಇದನ್ನೂ ಓದಿಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ರೌಡಿ ದಡಿಯಾ ಕೊನೆಗೂ ಫಿನಿಶ್
ಆದರೆ ಏ. 29 ರಂದು ಹುಡುಗನ ಗ್ರಾಮವಾದ ಕನ್ನಸಂದ್ರದಲ್ಲಿ ಮದುವೆ ಮಾಡಿದ್ದು, ಹುಡುಗ ಹಾಗೂ ಬಾಲಕಿಯ ಪಾಲಕರ ಜತೆ ಇತರರು ಪಾಲ್ಗೊಂಡಿದ್ದರು. ಮದುವೆಯಾದ ನಂತರ ಬಾಲಕಿ ಕನ್ನಸಂದ್ರದಲ್ಲಿ 5 ದಿನ ಕಳೆದಿದ್ದಾಳೆ ಎನ್ನಲಾಗಿದೆ.
ಇದೀಗ ಬಾಲಕಿಯ ಪಾಲಕರು, ಹುಡುಗ ಹಾಗೂ ಆತನ ಪಾಲಕರ ವಿರುದ್ಧ ಬಾಲ್ಯ ವಿವಾಹ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೀವು ಆಟೋ, ಟ್ಯಾಕ್ಸಿ ಚಾಲಕರಾ? ಕರೊನಾ ಪರಿಹಾರ ಧನಕ್ಕೆ ಅರ್ಜಿಯನ್ನು ಹೀಗೆ ಸಲ್ಲಿಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
