ಶ್ರೀಕಾಂತ ಅಕ್ಕಿ
ಬಳ್ಳಾರಿ: ಸರ್ಕಾರ ಚಾಪೆ ಕೆಳಗೆ ತೂರಿದರೆ ಪಾಲಕರು ಬಾಲ್ಯವಿವಾಹ ಮಾಡುವುದಕ್ಕಾಗಿ ರಂಗೋಲಿ ಕೆಳಗೆ ತೂರುವಂತಹ ಪ್ರಸಂಗಗಳು ರಾಜ್ಯದಲ್ಲಿ ನಡೆಯುತ್ತಿವೆ. ಲಾಕ್‌ಡೌನ್ ಹಿನ್ನಲೆ ಮದುವೆ ಸೇರಿ ನಾನಾ ರೀತಿಯ ಕಾರ್ಯಕ್ರಮಗಳಿಗೆ ನಿರ್ಬಂಧ ವಿದಿಸಿದ್ದ ಸರ್ಕಾರದ ಅಸ್ತ್ರವನ್ನೇ ಸದ್ಬಳಕೆ ಮಾಡಿಕೊಂಡು ಅದರಲ್ಲಿಯೇ ಬಾಲ್ಯ ವಿವಾಹ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿವೆ.
ಸಾಮಾಜಿಕ ಅಂತರ ಪಾಲಿಸಿ ಮದುವೆ ಮಾಡುವುದಾಗಿ ವಧು-ವರರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿ ಅದರಲ್ಲಿಯೇ ಮತ್ತೊಂದು ಜೋಡಿಗಳಿಗೆ ಬಾಲ್ಯ ವಿವಾಹ ನಡೆಸುತ್ತಿರುವುದು ಅಧಿಕಾರಿಗಳಿಗೆ ಹೊಸ ತಲೆನೋವು ತರಿಸಿದೆ. ಕಳೆದ 4ದಿನಗಳ ಹಿಂದೆ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಅನುಮತಿ ಪಡೆದು ಆಯೋಜಿಸಿದ್ದ ಮದುವೆಯೊಂದರಲ್ಲಿ ಬಾಲ್ಯ ವಿವಾಹ ಕೂಡ ನಡೆಯುತ್ತಿರುವ ಮಾಹಿತಿ ತಿಳಿದು ದಾಳಿ ನಡೆಸಿದ ಅಧಿಕಾರಿಗಳೇ ಅವಕ್ಕಾಗಿದ್ದಾರೆ.ಮದುವೆ ಸ್ಥಳಕ್ಕೆ ತೆರಳಿದರೇ ನಾವು ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದೇವೆ, ಯಾರದೋ ಮಾತು ಕಟ್ಟಿಕೊಂಡು ಬಂದೀರಲ್ಲ ಎಂದು ಪೋಷಕರು ಪ್ರಾರಂಭದಲ್ಲಿ ಅಧಿಕಾರಿಗಳನ್ನೇ ದಬಾಯಿಸಿದ್ದಾರೆ. ಆ ನಂತರ ಒಳಗೆ ಹೋಗಿ ನೋಡಿದರೇ ಅನುಮತಿ ಪಡೆದ ವರ-ವಧುವಿನ ಜತೆ ಮತ್ತೊಂದು ಜೋಡಿ ಮದುವೆಯ ಸಿದ್ಧತೆ ನಡೆದಿದೆ. ಪರಿಶೀಲನೆಗೆ ನಡೆಸಿದಾಗ ಬಾಲ್ಯ ವಿವಾಹ ನಡೆಯುತ್ತಿರುವುದು ಅಧಿಕಾರಿಗಳಿಗೆ ತಿಳಿದಿದೆ.
ಇದನ್ನೂ ಓದಿ:ಕೂಲಿ ಕಾರ್ಮಿಕರಿಗೆ ಆಸರೆಯಾಗಲಿದೆ ಬರ ನಿರ್ಮೂಲನೆಗೆ ಜಲಮೂಲಗಳ ಪುನಶ್ಚೇತನ
ಲಾಕ್‌ಡೌನ್ ಸಮಯದಲ್ಲಿ ಬಾಲ್ಯವಿವಾಹಗಳನ್ನು ತಡೆಯುವುದೇ ದೊಡ್ಡ ಸವಾಲಾಗಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಅವರ ನೇತೃತ್ವದಲ್ಲಿ ನಮ್ಮ ಸಿಬ್ಬಂದಿ ಜಿಲ್ಲಾದ್ಯಂತ ದಾಳಿ ನಡೆಸಿ ಬಾಲ್ಯ ವಿವಾಹಗಳನ್ನು ತಪ್ಪಿಸುತ್ತಿದ್ದಾರೆ.ಇದರಲ್ಲಿ ಕೆಲವರು 18 ಹಾಗೂ 21ವರ್ಷ ತುಂಬಿದ ವಧು-ವರರಿಗೆ ಮದುವೆ ಮಾಡುತ್ತೇವೆ ಎಂದು ಸರ್ಕಾರದಿಂದ ಅನುಮತಿ ಪಡೆದು ಅದರಲ್ಲಿಯೇ ಮತ್ತೊಂದು ಜೋಡಿಗೆ ಬಾಲ್ಯವಿವಾಹ ಮಾಡುತ್ತಿದ್ದಾರೆ.ಚಾಂದಪಾಷಾಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬಳ್ಳಾರಿ
ಈ ರೀತಿ ಮೋಸ ಮಾಡುತ್ತಿರುವುದು ತರವಲ್ಲ ಎಂದು ಪೋಷಕರಿಗೆ ತಿಳಿವಳಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಇದು ಕೇವಲ ಒಂದು ಪ್ರಕರಣವಾದರೇ ರಾಜ್ಯದಲ್ಲಿ ನೂರಾರು ಪ್ರಕರಣಗಳು ದಿನನಿತ್ಯ ಈ ರೀತಿ ನಡೆಯುತ್ತಿವೆ. ಲಾಕ್‌ಡೌನ್ ಸಮಯವನ್ನೇ ಸದ್ಬಳಕೆ ಮಾಡಿಕೊಂಡಿರುವ ಕೆಲವರು ಕೋಳಿ ಕೂಗುವ ಮುನ್ನವೇ ಬಾಲ್ಯ ವಿವಾಹ ಜರುಗಿಸಿ ಕೈ ತೊಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.ಮಾ.23ರಿಂದ ಮೇ.17ರ ತನಕ ಬೆಳಗ್ಗೆ 5ಗಂಟೆಗೆ ನಿಗದಿಯಾಗಿದ್ದ ಬಾಲ್ಯವಿವಾಹಗಳನ್ನು ಅಧಿಕಾರಿಗಳ ತಡೆದು ತಪ್ಪಿಸಿದ್ದಾರೂ ಮಾಹಿತಿ ತಿಳಿಯದೇ ನಡೆದಿರುವ ಬಾಲ್ಯವಿವಾಹಗಳಿಗೆ ಲೆಕ್ಕವಿಲ್ಲ ಎನ್ನಲಾಗುತ್ತಿದೆ. ಬಾಲ್ಯವಿವಾಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಬಾಲ್ಯ ವಿವಾಹ ತಡೆಯುವುದೇ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ:ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಪ್ರೇಮಿಗಳೇ ಮಾಹಿತಿದಾರರು:ರಾಜ್ಯದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳನ್ನು ತಡೆಯಲು ಅಧಿಕಾರಿಗಳಿಗೆ ಮಾಹಿತಿದಾರರಾಗಿರುವುದು ಪ್ರಿಯತಮರು ಎಂಬ ಅಂಶ ಕೂಡ ತಿಳಿದು ಬಂದಿದೆ.ಸಂಬಂಧಿಸಿದ ಅಧಿಕಾರಿಗಳಿಗೆ ಬಾಲ್ಯವಿಹಾಹ ನಡೆಯುತ್ತಿರುವ ಕುರಿತು ಕೆಲ ಯುವಕರು, ಅವಳು ನಾ ಪ್ರೀತಿಸಿದ ಹುಡುಗಿ, 18ತುಂಬಿದ ಬಳಿಕ ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕೆಂದುಕೊಂಡಿದ್ದೇನೆ, ದಯಮಾಡಿ ಬಂದು ತಡೆಯಿರಿ ಎಂದು ಗೋಗರೆಯುತ್ತಿರುವುದು ಸಾಮಾನ್ಯವಾಗಿದೆ.ಇದು, ಒಂದು ರೀತಿಯಲ್ಲಿ ಅಧಿಕಾರಿಗಳಿಗೆ ಬಾಲ್ಯ ವಿವಾಹ ತಡೆಯಲು ವರವಾಗಿ ಪರಿಣಮಿಸಿದೆ.ಹಲವರು ಕದ್ದು ಮುಚ್ಚಿ ಬಾಲ್ಯವಿವಾಹ ಜರುಗಿಸಿದರೇ ಬಾಲಕಿಯರನ್ನು ಪ್ರೀತಿಸುವ ಪ್ರಿಯತಮೆಯರಿಂದ ಬಾಲ್ಯವಿವಾಹ ತಪ್ಪುತ್ತಿರುವ ಪ್ರಸಂಗಗಳು ಕೂಡ ನಡೆಯುತ್ತಿವೆ.
ಸರ್ಕಾರದಿಂದ ಅನುಮತಿ ಪಡೆದು ನಡೆಯುತ್ತಿರುವ ಮದುವೆಯಲ್ಲಿ ಬಾಲ್ಯವಿವಾಹಗಳನ್ನು ನಡೆಸುತ್ತಿರುವುದು ದುರಂತದ ಸಂಗತಿ.ಈ ಕುರಿತು ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಕ್ರಮ ವಹಿಸಬೇಕಾಗಿದೆ. ಇಲ್ಲದಿದ್ದರೇ ಅನಾಯಾಸವಾಗಿ ಬಾಲಕಿಯರ ಜೀವನ ಹಾಳಾಗಲಿದೆ.ಮಂಜುನಾಥ್‘ನಾಗರೀಕ, ಬಳ್ಳಾರಿ
20 ಸಾವಿರ ಕೋಟಿ ರೂಪಾಯಿಯ ಮತ್ಸ್ಯ ಸಂಪದ ಯೋಜನೆಗೆ ಕೇಂದ್ರ ಕ್ಯಾಬಿನೆಟ್ ಅಂಕಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seven =
Remember me
