ರೇವಣಸಿದ್ದಪ್ಪ ಪಾಟೀಲ್
ಬೀದರ್:ಕರೊನಾ ಹಿನ್ನೆಲೆಯಲ್ಲಿ ಹೇರಿದ್ದ ಲಾಕ್ಡೌನ್ ಅವಧಿಯಲ್ಲೂ ಜಿಲ್ಲೆಯಲ್ಲಿ 13 ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆದಿದ್ದವು. ಕಡಿಮೆ ಖರ್ಚು ಇತರ ಕಾರಣಗಳಿಂದ ನಡೆಸಲು ಉದ್ದೇಶಿಸಿದ್ದ ಈ ಬಾಲ್ಯ ವಿವಾಹಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಬ್ರೇಕ್ ಹಾಕಿದೆ.
18 ವರ್ಷದೊಳಗಿನ ಹೆಣ್ಣು, 21 ವರ್ಷದೊಳಗಿನ ಗಂಡಿನ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಆದರೂ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಇಂಥ 13 ಪ್ರಕರಣ ವರದಿಯಾಗಿವೆ. ಇದರಲ್ಲಿ ಬಸವಕಲ್ಯಾಣ ತಾಲೂಕಿನಲ್ಲೇ ಅಧಿಕ 4 ಬಾಲ್ಯ ವಿವಾಹ ತಡೆಯಲಾಗಿದೆ. ಭಾಲ್ಕಿಯಲ್ಲಿ 3, ಔರಾದ್, ಬೀದರ್ ಹಾಗೂ ಹುಮನಾಬಾದ್ ತಾಲೂಕಿನಲ್ಲಿ ತಲಾ 2 ವಿವಾಹ ನಿಲ್ಲಿಸಲಾಗಿದೆ.
ಇದನ್ನೂ ಓದಿ:ರಾಮಮಂದಿರ ನಿರ್ಮಾಣಕ್ಕೆ ನಾಳೆ ಚಾಲನೆ- ಪೂರ್ಣಗೊಳ್ಳಲು 2 ವರ್ಷ ಬೇಕಾದೀತು: ಟ್ರಸ್ಟಿ ಸ್ವಾಮಿ ವಾಸುದೇವಾನಂದ ಸರಸ್ವತಿ
ಜಿಲ್ಲಾದ್ಯಂತ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಘಟಕ ಸಕ್ರಿಯವಾಗಿ ಶ್ರಮಿಸುತ್ತಿದೆ. ಪ್ರಸಕ್ತ ಲಾಕ್ಡೌನ್ ಅವಧಿಯಲ್ಲೇ 13 ಬಾಲ್ಯ ವಿವಾಹ ತಡೆಯಲಾಗಿದೆ. ಬಾಲ್ಯ ವಿವಾಹ ಕಂಡುಬಂದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಯವರು ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿಗೆ ಸಂಪರ್ಕಿಸಬಹುದು. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುತ್ತದೆ.| ಶ್ರೀಕಾಂತ ಕುಲಕರ್ಣಿಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಲಾಕ್ಡೌನ್ ಅವಧಿಯಲ್ಲಿ ಮದುವೆಗೆ 50ಕ್ಕಿಂತ ಹೆಚ್ಚಿನ ಜನ ಸೇರದಂತೆ ಸರ್ಕಾರ ನಿರ್ಬಂಧ ಹೇರಿತ್ತು. ಇಂಥ ಸಂದರ್ಭದಲ್ಲೇ ಹಲವೆಡೆ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆದಿದ್ದನ್ನು ಗಮನಿಸಿದರೆ ಈ ಪಿಡುಗಿನಿಂದ ಸಮಾಜ ಯಾವಾಗ ಮುಕ್ತಿ ಪಡೆಯುತ್ತದೆಯೋ? ಜನರಲ್ಲಿ ಯಾವಾಗ ಜಾಗೃತಿ ಮೂಡುತ್ತದೆಯೋ ಎಂಬ ಪ್ರಶ್ನೆ ಕಾಡುವಂತೆ ಮಾಡಿದೆ.
ಕಡಿಮೆ ಖರ್ಚು ಒಂದೆಡೆಯಾದರೆ, ಹಿರಿಯರು ಸಂಪ್ರದಾಯಕ್ಕೆ ಕಟ್ಟು ಬೀಳುವುದು ಮತ್ತು ಪ್ರೀತಿ-ಪ್ರೇಮಕ್ಕೆ ಒಳಗಾಗಿ ಅನ್ಯ ಜಾತಿಯವರೊಂದಿಗೆ ವಿವಾಹವಾದರೆ ಮನೆತನಕ್ಕೆ ಕೆಟ್ಟು ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ತಪ್ಪಿಸಲು ಅವರದ್ದೇ ಜಾತಿಗೆ ಸೇರಿದವರನ್ನು ಹುಡುಕಿ ಮದುವೆ ಮಾಡಲು ಮುಂದಾಗುವುದು ಇನ್ನೊಂದು ಪ್ರಮುಖ ಕಾರಣ. ಹೀಗಾಗಿ ಬಾಲ್ಯ ವಿವಾಹ ಗಡಿ ಜಿಲ್ಲೆಯಲ್ಲಿ ಜೀವಂತವಾಗಿ ಉಳಿದಿದೆ. ಇದಕ್ಕೆ ಲಾಕ್ಡೌನ್ ಅವಧಿಯಲ್ಲಿಯೂ ನಡೆದಿರುವ ಪ್ರಕರಣಗಳೇ ಸಾಕ್ಷಿ.
ಕಳೆದ ವರ್ಷ ಅಧಿಕ ಬಾಲ್ಯ ವಿವಾಹ ತಡೆ
ಹಿಂದಿನ ಎಂಟು ವರ್ಷ ಅವಧಿಯಲ್ಲಿ ಕಳೆದ ವರ್ಷವೇ ಅಧಿಕ ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಲಾಗಿದೆ. 2019-20ರಲ್ಲಿ 86, 2012-13ರಲ್ಲಿ 7, 2014-15ರಲ್ಲಿ 16, 2015-16ರಲ್ಲಿ 35, 2016-17ರಲ್ಲಿ 33, 2017-18ರಲ್ಲಿ 46, 2018-19ರಲ್ಲಿ 44, 2019-20ರಲ್ಲಿ 86 ಹಾಗೂ ಪ್ರಸಕ್ತ ಸಾಲಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 13 ಬಾಲ್ಯ ವಿವಾಹ ನಿಲ್ಲಿಸಲಾಗಿದೆ.
18 ವರ್ಷದೊಳಗಿನ ಯಾವುದೇ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡು ಮಗುವಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಕೇವಲ ಮದುವೆಯಾಗುವ ವಯಸ್ಕನಿಗೆ ಹಾಗೂ ಹುಡುಗಿ ತಂದೆ, ತಾಯಿಗಳಲ್ಲದೆ ಪೂಜಾರಿ, ಸಂಬಂಧಿಕರು, ಪ್ರೇರೇಪಿಸಿದವರು, ತಡೆಯಲು ವಿಫಲರಾದವರು ಹಾಗೂ ಭಾಗವಹಿಸಿದವರು ಸಹ ಅಪರಾಧಿಗಳೇ ಆಗುತ್ತಾರೆ. ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ತಪ್ಪಿತಸ್ಥರಿಗೆ ಕನಿಷ್ಠ 1ರಿಂದ 2 ವರ್ಷಗಳವರೆಗೆ ಜೈಲು ವಾಸ ಹಾಗೂ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಎರಡು ತಿಂಗಳ ಅವಧಿಯಲ್ಲಿ 13 ಬಾಲ್ಯ ವಿವಾಹ ತಡೆಯಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಎಲ್ಲೇ ಬಾಲ್ಯ ವಿವಾಹದ ವಿಷಯ ಕೇಳಿದರೆ ತಕ್ಷಣವೇ ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿ 08482-234003ಗೆ ಕರೆ ಮಾಡಬಹುದು ಎಂದು ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರೆ ವಿಜಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:71 ಲಕ್ಷ ದಾಟಿತು ಕೋವಿಡ್ 19 ಕೇಸ್​: 4 ಲಕ್ಷ ದಾಟಿತು ಮರಣ ಪ್ರಮಾಣ..
ಒಂದು ಎಫ್ಐಆರ್ ದಾಖಲು:ಎರಡು ತಿಂಗಳ ಅವಧಿಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಒಂದು ಎಫ್ಐಆರ್ ದಾಖಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 13 ಬಾಲ್ಯ ವಿವಾಹ ತಡೆಯಲಾಗಿದೆ. ಚಿಟಗುಪ್ಪ ತಾಲೂಕಿನ ಉಡಬಾಳದಲ್ಲಿ ನಡೆದ ಬಾಲ್ಯ ವಿವಾಹ ಸಂಬಂಧ ಪ್ರಕರಣ ದಾಖಲಾಗಿದೆ. 15 ವರ್ಷದ ಬಾಲಕಿ ವಿವಾಹ ಮೇ 13ರಂದು ನಡೆಸಿದ್ದರಿಂದ ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಳೆದ ವರ್ಷ ಭಾಲ್ಕಿ ತಾಲೂಕಿನ ಆಳಂದಿ ಗ್ರಾಮದಲ್ಲಿ 16 ವರ್ಷದ ಬಾಲಕಿ ವಿವಾಹದ ಪ್ರಕರಣ ದಾಖಲಿಸಲಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ನಾಳೆ ಚಾಲನೆ- ಪೂರ್ಣಗೊಳ್ಳಲು 2 ವರ್ಷ ಬೇಕಾದೀತು: ಟ್ರಸ್ಟಿ ಸ್ವಾಮಿ ವಾಸುದೇವಾನಂದ ಸರಸ್ವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
